4 ಕೋಟಿ ರೂ ಮೌಲ್ಯದ ನಕಲಿ ವ್ಯಾಕ್ಸಿನ್ ಪತ್ತೆ : ವ್ಯಾಕ್ಸಿನ್ ಬಾಟಲಿಯಲ್ಲಿ ನೀರು ತುಂಬಿಸಿ ಮಾರಾಟ ....!!

No comments

ನವದೆಹಲಿ (TOC/ರಾಷ್ಟ್ರೀಯ) : ವ್ಯಾಕ್ಸಿನ್ ಬಾಟಲಿಯಲ್ಲಿ ನೀರು ತುಂಬಿಸಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ ತಂಡವನ್ನು ತನಿಖಾ ತಂಡ ಬಂಧಿಸಿದೆ. ನೈಜ ವ್ಯಾಕ್ಸಿನ್ ಬಾಟಲಿಯನ್ನು ಹೋಲುವಂತೆ ನಕಲಿ ಬಾಟಲ್ ಗಳನ್ನು ತಯಾರಿಸಿ ನೀಡುತ್ತಿದ ಉತ್ತರಪ್ರದೇಶದ  ವಾರಣಾಸಿಯಲ್ಲಿ ಬಾಡಿಗೆ ಮನೆಯಲ್ಲಿ ನಕಲಿ ವ್ಯಾಕ್ಸಿನ್ ತಯಾರಕರಾದ ಐವರನ್ನೂ,  ದೆಹಲಿಯ ಮೂಲಕ ಕಾರ್ಯಚರಿಸುತ್ತಿದ್ದ ಒಂಬತ್ತು ಮಂದಿಯನ್ನು  ಉತ್ತರಪ್ರದೇಶ ಪೋಲಿಸ್ ಹಾಗೂ FOOD And Drug Administration ತಂಡ ಬಂಧಿಸಿದೆ ಎಂದು ದಿ ವಯರ್ ವರದಿ ಮಾಡಿದೆ.

ನಕಲಿ ಬಾಟಲ್ ಮುದ್ರಿತ ಸ್ಟಿಕರ್ ಹಾಕಿ ₹300 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. 6000ದಷ್ಟು ವ್ಯಾಕ್ಸಿನ್ ಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. ನಕಲಿ ರ್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

No comments

Post a Comment