ನಾಪೋಕ್ಲು : ನಷ್ಟ ಪರಿಹಾರದ ಅರ್ಜಿ ಸ್ವೀಕರಿಸದ ಕಂದಾಯ ಇಲಾಖೆ - ಸಾರ್ವಜನಿಕರ ಆಕ್ರೋಶ
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ಪ್ರಕೃತಿ ವಿಕೋಪದಿಂದ ಆದ ನಷ್ಟದ ಪರಿಹಾರವನ್ನು ಪಡೆಯಲು ರಾಜ್ಯಸರಕಾರ ಬೆಳಗಾರರಿಗೆ ಅರ್ಜಿಯನ್ನು ಕಂದಾಯ ಇಲಾಖೆಗೆ ಸಲ್ಲಿಸುವಂತೆ ಆದೇಶಿಸಿದ್ದರೂ ನಾಪೋಕ್ಲುವಿನ ಕಂದಾಯ ಇಲಾಖೆ ಇದುವರೆಗೂ ನಷ್ಟ ಪರಿಹಾರದ ಅರ್ಜಿಯನ್ನು ಸ್ವೀಕರಿಸಿದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಸ್ಥಳೀಯ ಸಾರ್ವಜನಿಕರು ಜಿಲ್ಲಾ ಪಂಚಾಯತ್ ಸದಸ್ಯ ಮುರಳಿ ಕರುಂಬಮ್ಮಯ್ಯ ನೇತೃತ್ವದಲ್ಲಿ ನಾಪೋಕ್ಲುವಿನ ಕಂದಾಯ ಇಲಾಖೆ ಕಚೇರಿಗೆ ತೆರಳಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಈ ದಿನ ನಡೆದಿದೆ.
ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಬೆಳೆಗಾರರಾದ ನಷ್ಟದ ಅರ್ಜಿಯನ್ನು ಲಿಖಿತವಾಗಿ ಅಥವಾ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ಹತ್ತರವರೆಗೆ ರವರಿಗೆ ಗಡುವು ನೀಡಿದೆಜಿಲ್ಲೆಯ ಇತರೆಡೆಯಲ್ಲಿ ಕಂದಾಯ ಇಲಾಖೆ ಅರ್ಜಿ ಸ್ವೀಕರಿಸುತ್ತಿದ್ದರು.
ನಾಪೋಕ್ಲುವಿನ ಕಂದಾಯ ಪರಿವೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇದುವರೆಗೆ ಯಾವುದೇ ಅರ್ಜಿಯನ್ನು ಯಾವುದೇ ಅರ್ಜಿಯನ್ನು ಸ್ವೀಕರಿಸಿದೆ ಬೆಳೆಗಾರರನ್ನು ವಂಚಿಸುತ್ತಿದ್ದಾರೆ ಎಂದು ನೆರೆದಿದ್ದ ಸಾರ್ವಜನಿಕರು ಆರೋಪಿಸಿದರು.
ಅಲ್ಲದೆ ಇದಕ್ಕೆ ಕೂಡಲೇ ಸಮಜಾಯಿಸಿಕೆ ನೀಡಬೇಕೆಂದು ಸಾರ್ವಜನಿಕರು ಈ ಸಂದರ್ಭ ಪಟ್ಟುಹಿಡಿದರು.
ಸ್ಥಳಕ್ಕೆ ಬಾರದ ಕಂದಾಯ ಪರಿವೀಕ್ಷಕರು ಇಂದಿನಿಂದಲೇ ಅರ್ಜಿ ಸ್ವೀಕರಿಸುವಂತೆ ಗ್ರಾಮ ಲೆಕ್ಕಿಗರಿಗೆ ಸೂಚಿಸಿದ ಮೇರೆಗೆ ಜನರಿಗೆ ಜನರು ಸಮಾಧಾನಗೊಂಡರು ನೆರೆದಿದ್ದ ಜನರು ಸಮಾಧಾನಗೊಂಡರು.
ಅಲ್ಲದೆ ದಿನಾಂಕವನ್ನು ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸರಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಕುಂಡಿಯೋಳಂಡ ರಮೇಶ್ ಮುದ್ದಯ್ಯ ನೂರಂಭಡ ಉದಯಶಂಕರ್,
ಬಿದ್ದಾಟಂಡ ಜಿನ್ನು ನಾಣಯ್ಯ, ಪಾಡಿಯಮ್ಮಂಡ ಮನು ಮಹೇಶ್, ಶಿವಾಚಾಳಿಯಂಡ ಜಗದೀಶ್, ಹಸೈನಾರ್
ಮತ್ತಿತರರು ಇದ್ದರು.

No comments
Post a Comment