ಸಿದ್ದಾಪುರದಲ್ಲಿ ಎಐಟಿಯುಸಿ ಜಿಲ್ಲಾ ಕಚೇರಿ ಉದ್ಘಾಟನೆ

No comments

ಸಿದ್ದಾಪುರ  (Times Of Coorg) : ಬಿಜೆಪಿ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ದೇಶ್ಯಾದ್ಯಂತ ತೀವ್ರ ರೀತಿಯ  ಹೋರಾಟಗಳು ನಡೆಯಲಿದ್ದು.ರೈತರು. ಕಾರ್ಮಿಕರು ಹೋರಾಟಕ್ಕೆ ಸಜ್ಜಾಗಬೇಕೆಂದು  ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ. ಗುಣಶೇಖರ್ ಕರೆ ನೀಡಿದ್ದಾರೆ.


ಸಿದ್ದಾಪುರ ಮುಖ್ಯ ರಸ್ತೆಯ ಖಾಸಗಿ ಕಟ್ಟಡವೊಂದರಲ್ಲಿ ಎಐಟಿಯುಸಿ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳೆದ ಆರು ವರ್ಷಗಳಿಂದ ನಿರಂತರವಾಗಿ ರೈತರು, ಕಾರ್ಮಿಕರು, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಿದ್ದು ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿದೆ.


ಕೊವೀಡ್19 ನಿಂದ ದುಡಿಯುವ ವರ್ಗದ ನಲವತ್ತು ಕೋಟಿ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ.


ದೇಶದ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರು  ತಮ್ಮ ಹಕ್ಕಿಗಾಗಿ ಹೋರಾಟದ ಮೂಲಕ ಪಡೆದುಕೊಳ್ಳಲು  ಅವಕಾಶಗಳಿದ್ದರೂ ಕೇಂದ್ರ ಸರ್ಕಾರ ಕಾನೂನನ್ನು ಬದಲಾವಣೆ ಮಾಡಲು ಮುಂದಾಗಿದೆ.


ಅಸಂಘಟಿತ ವಲಯದಲ್ಲಿ ಕಾರ್ಮಿಕರು ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳಲ್ಲಿ ದುಡಿಯುವ ವರ್ಗದವರಾಗಿದ್ದು  ಸರಕಾರದ ವಿರೋಧಿ ನೀತಿಗಳಿಂದ ಶೇಕಡ ಎಂಬತ್ತರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.


ದುಡಿಯುವ ವರ್ಗದ ಹಲವು ಬೇಡಿಕೆಗೆ  ದೇಶದ ಹನ್ನೊಂದು ಕಾರ್ಮಿಕ ಸಂಘಟನೆಗಳು ಒಗ್ಗೂಡಿ ನಿರಂತರ ಹೋರಾಟ ಮಾಡಲಾಗಿದ್ದರೂ  ಸಮಸ್ಯೆಗಳಿಗೆ ಸ್ಪಂದಿಸದೆ ಅಸಹಾಯಕತೆ ತೊರುತ್ತಿರುವ ಕೇಂದ್ರ ದ ವಿರುದ್ಧ ನಿರಂತರ ಹೋರಾಟಗಳನ್ನು ಮಾಡಲು ಕಾರ್ಮಿಕ ಸಂಘಟನೆಗಳು ಸಜ್ಜಾಗಿದೆ.


  ಸಂಘಟನೆಯನ್ನು ಬಲಪಡಿಸುವ ಮೂಲಕ ನ್ಯಾಯಯುತ ಬೇಡಿಕೆಗೆ ಒತ್ತಾಯಿಸಿ ದುಡಿಯುವ ವರ್ಗದ ಜನರು ಹೋರಾಟಕ್ಕೆ ಕೈ ಜೋಡಿಸಬೇಕೆಂದರು.ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ಎನ್  ಸೋಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ

ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರು. ರೈತರು. ಸಾಮಾನ್ಯ ವರ್ಗದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದರು ರಾಜ್ಯ ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಣೆ ಮಾಡದೆ ಜಿಲ್ಲೆಯ ಜನರನ್ನು ಕಡೆಗಣಿಸುತ್ತಿದ್ದಾರೆ.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತಾಪಿ ವರ್ಗ. ಬೆಳೆದ ಫಸಲು ಕೈಗೆ ಸಿಗದೆ ಕಾಡಾನೆ ಹಾವಳಿ ,ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ನಾಶವಾಗಿದ್ದು ರೈತರ ಬಗ್ಗೆ ಕಾಳಜಿ ವಹಿಸದ ಸರ್ಕಾರ ಎಲ್ಲ ರೀತಿಯಲ್ಲೂ ಕಡೆಗಣಿಸಿದೆ.ಕಾಡು ಪ್ರಾಣಿಗಳ ಭಯದ ನಡುವೆ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕಾರ್ಮಿಕ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿದ್ದು.ಭೂಮಿ ವಸತಿಯೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.


ಈ ಭಾಗದಲ್ಲಿ ಗೆದ್ದ ಜನಪ್ರತಿನಿಧಿಗಳು ಕಾರ್ಮಿಕರು ಹಾಗೂ ರೈತಾಪಿ ವರ್ಗವನ್ನು ಕಡೆಗಣಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು ಎಐಟಿಯುಸಿ ಸಂಘಟನೆ ರೈತಾಪಿ ಹಾಗೂ ಕಾರ್ಮಿಕ ವರ್ಗಗಳ ಪರವಾಗಿ ನಿರಂತರ ಹೋರಾಟಗಳನ್ನು ಮಾಡುತ್ತಿದ್ದು ಸಂಘಟನೆಯೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದರು .


ಈ ಸಂದರ್ಭಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನೀಲ್,ಎಐಟಿಯುಸಿ ಚಿಕ್ಕಮಗಳೂರು ವಲಯದ ಜಿಲ್ಲಾ ಕಾರ್ಯದರ್ಶಿ ಎನ್. ಸಿ ಹೊಬಯ್ಯ, ಹಾಸನ ಜಿಲ್ಲಾ ಕಾರ್ಯದರ್ಶಿ ಎಂ. ಧರ್ಮರಾಜ್ , ಕಟ್ಟಡ ಕಾರ್ಮಿಕ ಸಂಘಟನೆಯ ಸ್ಥಳೀಯ ಮುಖಂಡ ಎಂ. ಕೃಷ್ಣ, ಸಂಘಟನೆಯ ಪ್ರಮುಖರಾದ ರಫೀಕ್, ರಮೇಶ್ ಮಾಯಮುಡಿ,ಮಣಿ ,ಸುಬ್ರಮಣಿ , ಗಣೇಶ್, ಮಂಜು ,ಪ್ರಕಾಶ್, ರಮೇಶ್, ಜಯಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಕಾರ್ಮಿಕ ಮುಖಂಡರುಗಳು ಹಾಜರಿದ್ದರು 

No comments

Post a Comment