ರಾಫೆಲ್ಸ್ ಕಾಲೇಜು ಪಿ ಯು ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ರಾಫೆಲ್ಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಮತ್ತು ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಕಾಲೇಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಉಪ ಪ್ರಾಂಶುಪಾಲ ತನ್ವೀರ್ ಕಾಲೇಜಿನ ಬಗ್ಗೆ ಪರಿಚಯ ಮಾಡಿದರು.
ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಸಭಾಕಾರ್ಯಕ್ರಮದಲ್ಲಿ ಮೊದಲಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಮುಖ್ಯ ಅತಿಥಿಗಳಾದ ನ್ಯಾಯಾಧೀಶೆ ನೂರುನ್ನೀಸ, ಡಾಕ್ಟರ್ ರೋಹನ್ ಪೂವಯ್ಯ ,ನಾಪೋಕ್ಲು ಠಾಣಾಧಿಕಾರಿ ಕಿರಣ್, ಸಾಲು ಹೂದಿಸಿ ಸನ್ಮಾನಿಸಿದರು, ಕಾಲೇಜು ಆಡಳಿತ ಮಂಡಳಿ ವತಿಯಿಂದ ಅತಿಥಿಗಳಿಗೆ ಸನ್ಮಾನ ಮಾಡಲಾಯಿತು.
ಮುಖ್ಯಅತಿಥಿಗಳಾಗಿ ಆಗಮಿಸಿದ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ನೂರುನ್ನಿಸ ಮಾತನಾಡಿ ಡಾಕ್ಟರ್ ಅಬ್ದುಲ್ ಕಲಾಂ ಸ್ವಾಮಿ ವಿವೇಕಾನಂದ ಅಂತವರು ನಮಗೆ ಮಾದರಿ.
ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ ಈಗ ಕಾಲ ಬದಲಾಗಿದೆ ಜೊತೆಗೆ ಚಿಂತನೆಯು ಬದಲಾಗಿದೆ ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವಿದೆ.
ವಿದ್ಯಾರ್ಥಿಗಳ ತಪ್ಪುಗಳಲ್ಲಿ ಬರೀ ಶಿಕ್ಷಕರನ್ನೇ ಹೊಣೆಗಾರನನ್ನಾಗಿ ಮಾಡುತ್ತಾರೆ ಇದರಲ್ಲಿ ಪೋಷಕರ ತಪ್ಪು ಶೇಕಡಾ 50ರಷ್ಟು ಕಂಡುಬರುತ್ತದೆ.
ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಒಂದು ಚಾಕಲೇಟ್ ಬೇಕಾದರೆ ಕೊಂಡುಕೊಳ್ಳಲು ಹಲವು ದಿನಗಳು ಕಾಯಬೇಕಾಗಿತ್ತ.
ಈ ಕಾಲದಲ್ಲಿ ಮಕ್ಕಳಿಗೆ ಹಣದ ಬೆಲೆನೇ ಗೊತ್ತಿಲ್ಲದ ಹಾಗೆ ಹಾಗಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.ಪೋಷಕರು ಹೆಣ್ಣು ಮಕ್ಕಳಿಗೆ 18ವರ್ಷ ವಾದರೆ ಸಾಕು ಮದುವೆ ಮಾಡಿ ಮುಗಿಸಿದರೆ ಜವಾಬ್ದಾರಿ ಮುಗಿದಂತೆ ಎಂದು ಭಾವಿಸುತ್ತಾರೆ.
ಮಕ್ಕಳಿಗೆ ಎಲ್ಲಾ ರೀತಿಯ ಮೊಬೈಲ್ ಕಂಪ್ಯೂಟರ್ ವಾಹನ ಕೊಡಿಸಿದರೆ ಸಾಲದು ಅದು ಯಾವ ರೀತಿ ಉಪಯೋಗಿಸುತ್ತಾರೆ. ಎಂದು ಕಾಳಜಿವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳಿಗೆ ಎಲ್ಲಾ ಸೌಲಭ್ಯದೊಂದಿಗೆ ಐಷಾರಾಮಿ ಕೋಣೆ ನಿರ್ಮಿಸಿ ಕೊಟ್ಟು ಮಕ್ಕಳು ಅದರಲ್ಲಿ ಕೂತು ಏನು ಮಾಡುತ್ತಿದ್ದಾರೆ ಎಂದು ಕೇಳಲು ಈಗಿನ ಪೋಷಕರಿಗೆ ಧೈರ್ಯವಿಲ್ಲ ದಂತಾಗಿದೆ. ಮಕ್ಕಳನ್ನು ದೂಷಿಸುವುದು ಬಿಟ್ಟು ತಂದೆ ತಾಯಿಯ ಜವಾಬ್ದಾರಿ ನಿರ್ವಹಿಸಬೇಕಾಗಿದೆ
ಮಕ್ಕಳ ಸನ್ನಡತೆಗೆ ತಂದೆ-ತಾಯಿಯ ಜವಾಬ್ದಾರಿ ಬಹಳ ಹೆಚ್ಚಿದೆ.
ನಮ್ಮನ್ನು ನಮ್ಮ ತಂದೆ ತಾಯಿ ಶಿಸ್ತಿನಲ್ಲಿ ಬೆಳೆಸಿದ ಹಾಗೆ ನಾವು ನಮ್ಮ ಮಕ್ಕಳನ್ನು ಬೆಳೆಸುತ್ತಿಲ್ಲ ಅನ್ನೋದೇ ದುರಂತ
ನಾವು ಕಷ್ಟ ಪಟ್ಟಂತೆ ನಮ್ಮ ಮಕ್ಕಳು ಕಷ್ಟಪಡಬಾರದು ಎಂಬುದು ಎಲ್ಲ ಪೋಷಕರ ಆಗ್ರಹ
ಮಕ್ಕಳಿಗೆ ತಂದೆ-ತಾಯಂದಿರು ಎಲ್ಲಾ ಸೌಲಭ್ಯ ಕೊಟ್ಟರು ಪ್ರೀತಿ ಕೊಡುತ್ತಿಲ್ಲ ಮಕ್ಕಳ ಎದುರುಗಡೆ ಪೋಷಕರು ಜಗಳವಾಡುತ್ತಿದ್ದು ಇದರಿಂದ ಮಕ್ಕಳ ಬದುಕಲ್ಲಿ ಇದರ ಪರಿಣಾಮ ಬೀರುತ್ತದೆ.
ಜಗಳ ಎಂಬುವುದು ಎಲ್ಲಾ ಸಂಸಾರದಲ್ಲೂ ಸಾಮಾನ್ಯ ಆದರೆ ಮಕ್ಕಳ ಮುಂದೆ ಜಗಳವಾಡಬಾರದು
ತಂದೆ-ತಾಯಿಯ ತಪ್ಪಿನಿಂದ ಮಕ್ಕಳು ದಾರಿ ತಪ್ಪುತ್ತಿದೆ
ಮಕ್ಕಳ ಜೊತೆ ನೀವು ಒಳ್ಳೆಯ ಪೋಷಕರಾಗಿ ಇರಬೇಕು ಮಕ್ಕಳಿಗೆ ಸ್ನೇಹಿತರು ಹಲವರ ಇರುತ್ತಾರೆ
ಆದರೆ ಪೋಷಕರು ತಂದೆ ತಾಯಿ ಮಾತ್ರ ಎಂದು ಈ ಸಂದರ್ಭ ಪೋಷಕರಿಗೆ ಕಿವಿಮಾತು ಹೇಳಿದರು. ಬರೀ ಐಷಾರಾಮಿ ಜೀವನ ಮಕ್ಕಳಿಗೆ ಒದಗಿಸಿದರೆ ಸಾಲದು ಪೋಷಕರು ಮತ್ತು ಮಕ್ಕಳ ಮಧ್ಯೆ ಒಳ್ಳೆಯ ಬಾಂಧವ್ಯ ಇರಬೇಕು.
ಅನೇಕ ಪ್ರಕರಣಗಳಲ್ಲಿ ಸಾಕಿ-ಸಲಹಿದ ತಂದೆ ತಾಯಿಗಿಂತ ಬಾಯ್ ಫ್ರೆಂಡ್ ಜೊತೆ ಹೋಗುತ್ತೇವೆ ಎನ್ನುತ್ತಾರೆ ಹೆಣ್ಣುಮಕ್ಕಳು. ಈವರೆಗೆ ಕಾಣೆಯಾದ ಹೆಣ್ಣುಮಕ್ಕಳಲ್ಲಿ ಶೇಕಡ 50ರಷ್ಟುಮಕ್ಕಳನ್ನು ಪತ್ತೆಯಾದರೆ ಉಳಿದ ಹೆಣ್ಣುಮಕ್ಕಳ ಪತ್ತೆಯಾಗಿಲ್ಲ ಅಂತವರು ವೇಶ್ಯಾವಾಟಿಕೆ ಬಲೆಯಲ್ಲಿ ಸಿಲುಕಿಕೊಂಡಿರುತ್ತಾರೆ.
ವೇಶ್ಯಾವಾಟಿಕೆ ಎಂಬುವುದು ದೊಡ್ಡ ಮಾಫಿಯಾ ಆಗಿ ಬೆಳೆದಿದ್ದು ನಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇಡಬೇಕಾಗಿದೆ. ಪೋಷಕರು ಮಕ್ಕಳಿಗೆವಿದ್ಯಾಭ್ಯಾಸದ ಜೊತೆಜೊತೆಗೆ ಮಾನವೀಯ ಮೌಲ್ಯಗಳನ್ನು ಸಂಸ್ಕಾರ ಕಲಿಕೆ ಮನೆಯಿಂದ ಪ್ರಾರಂಭವಾಗಬೇಕು.
ಪ್ರಾರ್ಥಮಿಕ ಶಾಲೆಯ ಮಕ್ಕಳು ದುಶ್ಚಟಗಳಿಗೆ ದಾಸರಾಗಿದ್ದಾರೆ ಎನ್ನುತ್ತಾರೆ ಶಿಕ್ಷಕರು
ಮಕ್ಕಳು ಉನ್ನತ ಮಟ್ಟಕ್ಕೇರಲು ಪೋಷಕರ ಪಾತ್ರ ಕೂಡ ಬಹಳ ಮುಖ್ಯ. ತಂದೆ-ತಾಯಿ ಕೊಟ್ಟಂತ ಸ್ವಾತಂತ್ರ ದುರುಪಯೋಗ ಪಡಿಸಬಾರದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗದೆ ವೈದ್ಯರಾಗಿ ಅಧಿಕಾರಿಯಾಗಿ ಏನು ಪ್ರಯೋಜನವಿಲ್ಲ.ತಮ್ಮಿಂದ ಯಾರಿಗೂ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಯಾರಿಗೂ ತೊಂದರೆ ಕೊಡದಿರಿ.
ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಪೋಷಕರು ಮಾಡಬೇಕಾಗಿದೆ ಸಣ್ಣ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕುಗ್ಗಿ ಹೋಗಬಾರದು. ಮಕ್ಕಳು ಬೆಳೆಯುವ ವಾತಾವರಣ ಕೂಡ ಬಹಳ ಮುಖ್ಯ,ಹೀಗಿನ ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದು, ಇದರಿಂದ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು
ಆದ್ದರಿಂದ ಆದಷ್ಟು ಮೊಬೈಲ್ ಉಪಯೋಗ ಕಡಿಮೆ ಮಾಡಬೇಕೆಂದರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮೂಳೆತಜ್ಞ ಡಾಕ್ಟರ್ ರೋಹನ್ ಪೂವಯ್ಯ ಮಾತನಾಡಿ ಅಸಾಧ್ಯ ಎಂಬುದು ಯಾವುದೂ ಇಲ್ಲ ಕಠಿಣ ಪರಿಶ್ರಮ ಪಟ್ಟರೆ ಎಲ್ಲವನ್ನೂ ಸಾಧಿಸಬಹುದು. ಪ್ರಯತ್ನದಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಯಶಸ್ಸು ಸಾಧಿಸಬೇಕಾದರೆ ಪ್ರಯತ್ನ ಕೂಡ ಅಷ್ಟೇ ಮುಖ್ಯ ಬರಿ ಅಂಕಪಡೆದ ಮಾತ್ರಕ್ಕೆ ಸಾಲದು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಚರ್ಚಿಸಿ ಉತ್ತಮ ಆಯ್ಕೆ ಮಾಡಿಕೊಳ್ಳಬೇಕು.
ಯಾವುದು ಅಸಾಧ್ಯವೆಂದು ಭಾವಿಸಬಾರದು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು. ಪರೋಪಕಾರ ಕೆಲಸದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ ಅತಿ ಹೆಚ್ಚು ಅಂಕ ಪಡೆದ ಸನ್ಮಾನಿತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತನಾಡಿ ಈ ನಮ್ಮ ಸಾಧನೆಗೆ ನಮ್ಮ ವಿದ್ಯಾಸಂಸ್ಥೆ ನಮ್ಮಪೋಷಕರು ಉಪನ್ಯಾಸಕರ ಸಹಕಾರ ಕಾರಣವೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಾಪೋಕ್ಲು ಠಾಣಾಧಿಕಾರಿ ಕಿರಣ್ ಆರ್ ಮಾತನಾಡಿ
ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷಸ್ಥಾನ ವಹಿಸಿದ ಶಿಕ್ಷಕರಾದ ಮಹಬೂಬ್ ಮಾತನಾಡಿ ಐದು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮುಖಾಂತರ ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಗೆ ವಿದ್ಯಾರ್ಥಿಗಳ ಜೊತೆ ಪೋಷಕರ ಉಪನ್ಯಾಸಕರ ಶ್ರಮ ಕೂಡ ಇದೆ ಹಾಗೂ ಎಲ್ಲಾ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾಲೇಜಿನ ಉಪನ್ಯಾಸಕರು ಉತ್ತಮ ಸೇವೆ ಸಲ್ಲಿಸುತ್ತಿದ್ದು ಇನ್ನು ಮುಂದೆ ಕೂಡ ನಿಮ್ಮ ಸೇವೆ ನಿರೀಕ್ಷಿಸುತ್ತೇನೆ ಎಂದರು.
ಪೋಷಕರು ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಡೆಗಣಿಸದೆ ಪ್ರೋತ್ಸಾಯಿಸಿ ಬೆಳೆಸಬೇಕಾಗಿದೆ. ಈ ರೀತಿ ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಿದ ಹಲವು ಉದಾಹರಣೆ ನಮ್ಮ ಮುಂದೆ
ಇದೆ ಎಂದ ಅವರು ರಾಫೆಲ್ಸ್ ವಿದ್ಯಾರ್ಥಿಗಳು ತಮ್ಮ ತಂದೆಯನ್ನೇ ರೋಲ್ ಮಾಡೆಲ್ ಆಗಿ ಮಾಡಿದ
ನ್ಯಾಯಾಧೀಶೆ ನೂರುನ್ನಿಸ ಅವರನ್ನೇ ರೋಲ್ ಮಾಡೆಲ್ ನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.
ಸಭಾಕಾರ್ಯಕ್ರಮ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಾಧ್ಯಕ್ಷರಾದ ಹಂಸ ಹಾಜಿ, ಕಾರ್ಯದರ್ಶಿ ಹಸೀನಾ ಅಬ್ದುಲ್ಲಾ,
ಮನ್ಸೂರ್ ಅಲಿ, ವಿದ್ಯಾರ್ಥಿಗಳಲು ಪೋಷಕರು ಮತ್ತಿತರರು ಇದ್ದರು. ಅದಿತಿ ಎಂ ಪಿ ಸ್ವಾಗತಿಸಿ ಮಹಮ್ಮದ್ ಹುಸೇನ್, ಅಕ್ಷತಾ ಪೂವಪ್ಪ, ನಿರೂಪಿಸಿ ರೇಖಾ ವಂದಿಸಿದರು.









No comments
Post a Comment