ನೂತನ ಕೇಂದ್ರ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

No comments

ಟೈಮ್ಸ್ ಆಫ್ ಕೂರ್ಗ್ (ರಾಷ್ಟ್ರಿಯ ಸುದ್ದಿ) :ನೂತನ
ಕೇಂದ್ರ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್‌ ಮಂಗಳವಾರ ಕೇಂದ್ರ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ರಾಜೀವ್ ಕುಮಾರ್ ಅಧಿಕಾರ
ಮುಖ್ಯ ಚುನಾವಣಾ ಸ್ವೀಕಾರ ಆಯುಕ್ತ ಸುನಿಲ್ ಅರೋರ,
ಮತ್ತೊಬ್ಬ ಚುನಾವಣಾಆ ಸುಶಿಲ್ ಚಂದ್ರ ಅವರನ್ನು ಭೇಟಿ ಮಾಡಿದ ನಂತರ ಹೊಣೆಗಾರಿಕೆ ವಹಿಸಿಕೊಂಡರು.
೧೯೬೦ ಫೆಬ್ರವರಿ ೧೯ರಂದು ಜನಿಸಿದ ರಾಜೀವ್ ಕುಮಾರ್
೧೯೮೪ ನೇ ತಂಡದ ಭಾರತೀಯ ಆಡಳಿತ ಸೇವೆಯ
ಅಧಿಕಾರಿಯಾಗಿದ್ದು, ಕಳೆದ ೩೬ ವರ್ಷಗಳ ಸೇವಾವಧಿಯಲ್ಲಿ ಕೇಂದ್ರ ಸರ್ಕಾರ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಹಲವು ಮಹತ್ವ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ
ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ನಿವೃತ್ತಿಹೊಂದಿದರು. ನಂತರ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರಾಜೀವ್ ಕುಮಾರ್ ಆಗಸ್ಟ್ ೩೧ರವರೆಗೆ ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಅವರನ್ನು ಕೇಂದ್ರ ಚುನಾವಣಾ ಆಯುಕ್ತರನ್ನಾಗಿ ನೇಮಕಗೊಳಿಸಿದ ನಂತರ
ಮಂಗಳವಾರ ಅಧಿಕಾರ ವಹಿಸಿಕೊಂಡರು.

No comments

Post a Comment