ಸೆಪ್ಟೆಂಬರ್ 8 ರಂದು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ತಂಡವು ಸೆಪ್ಟೆಂಬರ್, 08 ರಂದು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಕೇಂದ್ರ ತಂಡದಲ್ಲಿ ಕೆ.ವಿ.ಪ್ರತಾಪ್, ಡಾ.ಭರತೇಂದ್ ಕುಮಾರ್, ಡಾ.ಕೆ.,ಮನೋಹರನ್, ಗುರುಪ್ರಸಾದ್ ಜೆ., ಎಸ್.ಸದಾನಂದ ಬಾಬು, ವಿ.ಪಿ.ರಾಜ್‍ವೇದಿ ಇವರು ತಂಡದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ತಂಡವು ತಲಕಾವೇರಿಯ ಗಜಗಿರಿ ಬೆಟ್ಟ ಭೂ ಕುಸಿತ ಪ್ರದೇಶ ಸೇರಿದಂತೆ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

No comments
Post a Comment