ಕೊಡಗು ಜಿಲ್ಲೆಯಲ್ಲಿ ಇಂದು ಶನಿವಾರ 30 ಮಂದಿಗೆ ಕೊರೋನಾ ಪಾಸಿಟಿವ್

No comments
ಜಿ

 ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 22 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 8 ಸೇರಿದಂತೆ ಒಟ್ಟು 30 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

       ವಿರಾಜಪೇಟೆ ಗಾಂಧಿನಗರದ ಕೃಷಿ ಕಚೇರಿ ಬಳಿಯ 42 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಪಂಜರಪೇಟೆಯ ಸರ್ವೋದಯ ಕಾಲೇಜು ಎದುರಿನ 37 ವರ್ಷದ ಮಹಿಳೆ. ಮಡಿಕೇರಿ ಬೊಯಿಕೇರಿಯ ಅಜ್ಜಪ್ಪ ದೇವಾಲಯ ಬಳಿಯ 55 ವರ್ಷದ ಪುರುಷ. ಮಡಿಕೇರಿ ಮಕ್ಕಂದೂರಿನ ಕಾಪರ್ ಹಿಲ್ ಹೋಂಸ್ಟೇಯ 32 ಮತ್ತು 37 ವರ್ಷದ ಪುರುಷರು. ಸೋಮವಾರಪೇಟೆ ಹೆಬ್ಬಾಲೆ ಮುಖ್ಯ ರಸ್ತೆ ಬಸ್ ನಿಲ್ದಾಣ ಬಳಿಯ 21 ವರ್ಷದ ಪುರುಷ. ಮಡಿಕೇರಿ ಮೇಕೇರಿಯ ಸಾಯಿ ಬಡಾವಣೆ ಬಳಿಯ 38 ವರ್ಷದ ಪುರುಷ. ಮಡಿಕೇರಿ ವೈವಾಸ್ ಆಸ್ಪತ್ರೆ ಬಳಿಯ 35 ವರ್ಷದ ಪುರುಷ. ಗೋಣಿಕೊಪ್ಪ 1ನೇ ಬ್ಲಾಕಿನ ಕಾವೇರಿ ಕಾಲೇಜು ಹಾಸ್ಟೆಲ್ ಬಳಿಯ 45 ವರ್ಷದ ಮಹಿಳೆ.

       ಮಡಿಕೇರಿ ಪೋಲೀಸ್ ವಸತಿ ಗೃಹದ 37 ವರ್ಷದ ಪುರುಷ. ಮಡಿಕೇರಿ ಗದ್ದಿಗೆಯ ಮದರಾಸ ಬಳಿಯ 50 ವರ್ಷದ ಪುರುಷ. ಮಡಿಕೇರಿ ಮಂಗಳಾದೇವಿ ನಗರದ 34 ವರ್ಷದ ಪುರುಷ. ಮಡಿಕೇರಿ ಬೊಯಿಕೇರಿಯ ಅಂಚೆ ಕಚೇರಿ ಸಮೀಪದ 42 ವರ್ಷದ ಪುರುಷ, 38 ವರ್ಷದ ಮಹಿಳೆ, 49, 69 ವರ್ಷದ ಪುರುಷರು ಮತ್ತು 65 ವರ್ಷದ ಮಹಿಳೆ. ಮಡಿಕೇರಿ ಕಡಗದಾಳುವಿನ ಸರ್ಕಾರಿ ಶಾಲೆ ಬಳಿಯ 66 ವರ್ಷದ ಮಹಿಳೆ ಮತ್ತು 77 ವರ್ಷದ ಪುರುಷ. ಮಡಿಕೇರಿ ಅಶೋಕಪುರಂನ 40 ವರ್ಷದ ಪುರುಷ. ಸೋಮವಾರಪೇಟೆ ಶನಿವಾರಸಂತೆ ಮುಖ್ಯ ರಸ್ತೆಯ 52 ವರ್ಷದ ಮಹಿಳೆ. ಸೋಮವಾರಪೇಟೆ ಚೆಟ್ಟಳ್ಳಿಯ ಶ್ರೀಮಂಗಲ ಚೇರಲದ 59 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

     ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕೊಯನಾಡು ಹೌಸ್ ಬಳಿಯ 59 ವರ್ಷದ ಪುರುಷ, ಸೋಮವಾರಪೇಟೆ ಶಿರಂಗಾಲದ ನಾಕೂರು ಬಳಿಯ 27 ವರ್ಷದ ಮಹಿಳೆ ಮತ್ತು 31 ವರ್ಷದ ಪುರುಷ, ವಿರಾಜಪೇಟೆ ವಿದ್ಯಾನಗರದ ಬ್ರೈಟ್ ಶಾಲೆ ಬಳಿಯ 51 ವರ್ಷದ ಪುರುಷ, ಮಡಿಕೇರಿ ಶಾಂತಿನಿಕೇತನ ರಸ್ತೆಯ ಜಯನಗರದ 18ನೇ ಬ್ಲಾಕಿನ 56 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೋಲೀಸ್ ವಸತಿಗೃಹದ 36 ವರ್ಷದ ಪುರುಷ, ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 33 ವರ್ಷದ ಮಹಿಳೆ, ಮಡಿಕೇರಿ ಈಸ್ಟ್ ಎಂಡ್ ಪೆಟ್ರೋಲ್ ಪಂಪ್ ಹಿಂಭಾಗದ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.


       ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1680 ಆಗಿದ್ದು, 1283 ಮಂದಿ ಗುಣಮುಖರಾಗಿದ್ದಾರೆ. 376 ಸಕ್ರಿಯ ಪ್ರಕರಣಗಳಿದ್ದು, 21 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 258 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment