ಎಸ್.ಎಸ್.ಎಲ್.ಸಿ ಫಲಿತಾಂಶ ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾಮಂದಿರದ ರಶಾ ಶೆರಿನ್ ಗೆ 615 ಅಂಕ.

No comments


ಕನ್ನಡದಲ್ಲಿ 125  ಅಂಕ ಗಳಿಸಿದ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿ ಧನ್ಯ.

ವರದಿ : ಮುಸ್ತಫ ಸಿದ್ದಾಪುರ

ಸಿದ್ದಾಪುರ (Times Of Coorg) : ಶ್ರೀ ಕೃಷ್ಣ ವಿದ್ಯಾಮಂದಿರದ ವಿದ್ಯಾರ್ಥಿನಿ ರಶಾ ಶೆರಿನ್ 615 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲಿ 5 ನೆ ಸ್ಥಾನ ಪಡೆದುಕೊಂಡಿದ್ದಾಳೆ. ಶ್ರೀ ಕೃಷ್ಣ ವಿದ್ಯಾಮಂದಿರದ 52 ವಿದ್ಯಾರ್ಥಿಗಳ ಪೈಕಿ 22 ಉನ್ನತ ಶ್ರೇಣಿ ಹಾಗೂ 30 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಬಂದಿದೆ. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿನಿ ಧನ್ಯ ಕನ್ನಡದಲ್ಲಿ 125 ಅಂಕಗಳಿಸಿದ್ದಾಳೆ.
ಇಕ್ರಾ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷೆ ಬರೆದ 27 ವಿದ್ಯಾರ್ಥಿಗಳಲ್ಲಿ 8 ಉನ್ನತ ಶ್ರೇಣಿ ಹಾಗೂ 19 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. ಅಮೃತಾ ವಿಪಿನ್ 599 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಬಿಜಿಎಸ್ ಶಾಲೆಯಲ್ಲಿ ಪರೀಕ್ಷೆ ಬರೆದ 10 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಲಾವಣ್ಯ 563 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ನೆಲ್ಯಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್ ಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ. 579 ಅಂಕ ಪಡೆದ ತಾಜುನ್ನಿಸ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.



No comments

Post a Comment