ಪ್ರವಾಹ ಪೀಡಿತ ಚೆರಿಯ ಪರಂಬು ಗ್ರಾಮಕ್ಕೆ ಜಿಲ್ಲಾ ಕಾಂಗ್ರೆಸ್ ಮುಖಂಡರ ಭೇಟಿ

No comments

ವರದಿ : ಹಾರಿಸ್ ನಾಪೋಕ್ಲು
         ನಾಪೋಕ್ಲು (Times Of Coorg)  :ಚೆರಿಯಪರಂಬು ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ INTUC ರಾಜ್ಯ ಉಪಾಧ್ಯಕ್ಷರು- ಕಾಂಗ್ರೆಸ್ಸ್ ಮುಖಂಡರು ಆಗಿರುವ ನಾಪಂಡ ಮುತ್ತಪ್ಪ, ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪವನ್ ಪೆಮ್ಮಯ್ಯ, ಕೊಡಗು INTUC ಜಿಲ್ಲಾಧ್ಯಕ್ಷರಾದ ಗೋವಿಂದರಾಜ್, ಹಾಗೂ NSUI ಕೊಡಗು ಜಿಲ್ಲಾಧ್ಯಕ್ಷರಾದ ತ್ರಿನೇಶ್ ಇವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನೊಂದವರ ಅಳಲು ಆಲಿಸಿದರು.

ನಂತರ ಫೋನ್ ಮುಖಾಂತರ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕಿಸಿದ INTUC ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪನವರು ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಶಾಶ್ವತ ಪರಿಹಾರ ಓದಗಿಸಿಕೊಡಬೇಕಾಗಿ ತಿಳಿಸಿದರು.
 ರಾಜಕೀಯ ಪಕ್ಷದವರು ಎಲ್ಲಾ ಮುಗಿದ ಮೇಲೆ ಭೇಟಿ ನೀಡಿ ಮತ ರಾಜಕಾರಣ ಮಾಡುತ್ತಿದ್ದು ,
ಇವರಿಂದ ಇದುವರೆಗೆ ಇಲ್ಲಿನ ಸಂತ್ರಸ್ತರಿಗೆ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಇಲ್ಲಿನ ಕೆಲ ನಿವಾಸಿಗಳು ಆರೋಪಿಸಿದರು .

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು
ಪ್ರವಾಹ ಪೀಡಿತರು ಹಾಜರಿದ್ದರು .

ಇದೆ ದಿನ ಮತ್ತೊಂದು ಕಡೆ
 ಸ್ಥಳೀಯ ಹೋರಾಟಗಾರರು ಕೆಲ ಮುಖಂಡರು  ಆದಷ್ಟು ಬೇಗ ಅರ್ಹರನ್ನು ಗುರುತಿಸಿ ಸ್ಥಳಾಂತರಿಸಿ ಅಕ್ರಮ ಒತ್ತುವರಿ ತೆರವು ಗೊಳಿಸಿ ಕಾವೇರಿ ನದಿಯ ಪಾವಿತ್ರತೆ ಯನ್ನು ಉಳಿಸಬೇಕಾಗಿ ನಾಪೋಕ್ಲು ಅಭಿವೃದ್ಧಿ  ಅಧಿಕಾರಿ ಮತ್ತು ಕಂದಾಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು.


No comments

Post a Comment