ನದಿಗೆ ಹಾರಿದ ಮಗಳನ್ನು ರಕ್ಷಿಸಲು ಹೋದ ತಾಯಿ ಸಾವು. ಸ್ಥಳೀಯರಿಂದ ಮಗಳ ರಕ್ಷಣೆ.

No comments


ಎರಡು ದಿನಗಳ ನಂತರ ನದಿಯಿಂದ ಮೃತದೇಹ ಹೊರ ತೆಗೆದ ಪಿ.ಎಫ್.ಐ ರೆಸ್ಕ್ಯೂ ತಂಡ.

ಮಡಿಕೇರಿ (Times Of Coorg): ಕೌಟುಂಬಿಕ ವಿಚಾರದಲ್ಲಿ ಕಲಹ ಏರ್ಪಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗಳನ್ನು ರಕ್ಷಿಸಲು ಮಗಳ ಹಿಂದೆ ನದಿಗೆ ಹಾರಿದ ತಾಯಿ ಮೃತಪಟ್ಟಿರುವ ಘಟನೆ ಮೇಕೆರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಿಗೇರಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ ಬಿಳಿಗೇರಿ ಹೊಳೆಗೆ ಹಾರಿದ ತಾಯಿ ಮಗಳ ಪೈಕಿ ಮಗಳನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತದಿಂದಾಗಿ ತಾಯಿಯನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ದಿನ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು ಪತ್ತೆಯಾಗಿರಲಿಲ್ಲ.

ಮೇಕೆರಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅಬ್ದುಲ್ ಖಾದರ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರೆಸ್ಕ್ಯೂ ತಂಡದ ಸಹಾಯ ಕೋರಿದ್ದರು. ಸಮಾಜ ಸೇವಕ ಹಾಗೂ ರೆಸ್ಕ್ಯೂ ತಂಡದ ನಾಯಕ ಕ್ರಿಯೇಟಿವ್ ಕಲೀಲ್ ನೇತೃತ್ವದ ತಂಡ ಸೋಮವಾರ ಬೆಳಿಗ್ಗೆ ನದಿಯಲ್ಲಿ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ಪ್ರಾರಂಭಿಸಿ, ಮಧ್ಯಾಹ್ನ ಸಮಯದಲ್ಲಿ ಮೃತದೇಹವನ್ನು ನದಿಯಿಂದ ಹೊರ ತೆಗೆಯಲಾಯಿತು. ಮೃತರನ್ನು ಉಷಾ (42) ಎಂದು ಗುರುತಿಸಲಾಗಿದೆ. ಪಿ.ಎಫ್.ಐ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೆಸ್ಕ್ಯೂ ತಂಡದಲ್ಲಿ ಅಲ್ತಾಫ್, ಮುಹಮ್ಮದ್ ಅಲಿ, ಅಶ್ರಫ್, ಸ್ವಾಲಿಹ್, ರಫೀಕ್, ಇಲ್ಯಾಸ್ ಸೇರಿದಂತೆ ಮತ್ತಿತರರು ಇದ್ದರು.



No comments

Post a Comment