ಸುಳ್ಯ ಶಾಸಕರ ನೇತೃತ್ವದಲ್ಲಿ ಮಹತ್ವಪೂರ್ಣ ಸಭೆ : SSF ಸುಳ್ಯ ಡಿವಿಷನ್ ಮನವಿಗೆ ಶೀಘ್ರ ಸ್ಪಂದನೆ

No comments

ಸುಳ್ಯ (Times Of Coorg) : ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯ ಡಯಾಲಿಸೀಸ್ ರೋಗಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಾಗಿ SSF ಸುಳ್ಯ ಡಿವಿಷನ್ ಸಮಿತಿಯ ವತಿಯಿಂದ ಜುಲೈ 9 ರಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳಿಗೆ  ನೀಡಿದ ಮನವಿಗೆ ಸ್ಪಂದನೆ ದೊರಕಿದೆ.

 ಇಂದು (ಜುಲೈ 10) ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎಸ್. ಅಂಗಾರ ರವರ ನೇತೃತ್ವದಲ್ಲಿ ತಾ. ಪಂ. ಅಧ್ಯಕ್ಷರಾದ ಚನಿಯ ಕಲ್ತಡ್ಕ, ತಹಶೀಲ್ದಾರ್ ಅನಂತ್ ಕುಮಾರ್, ಇ.ಒ ಭವಾನಿ ಶಂಕರ್, ವೈಧ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಸಿ.ಐ ನವೀನ್ ಚಂದ್ರ ಜೋಗಿ, ಎಸ್.ಐ ಹರೀಶ್ ಎಂ.ಆರ್ ಮುಂತಾದವರೊಂದಿಗಿನ ಚರ್ಚೆಯಲ್ಲಿ ಮಹತ್ವಪೂರ್ಣ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

No comments

Post a Comment