ಕಂಟೈನ್ಮೆಂಟ್ ಝೋನ್ ನಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಗೋಣಿಕೊಪ್ಪ ಪಂಚಾಯಿತಿ ಸದಸ್ಯ ಜಮ್ಮಡ ಸೋಮಣ್ಣ

No comments

ವರದಿ : ಶರಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪಲು (Times Of Coorg) : ಇಲ್ಲಿನ 6ನೇ ವಿಭಾಗದ  ಕೆ ಇ ಬಿ  ಹಿಂಬಾಗಾದಲ್ಲಿ ಒಂದು ಕುಟುಂಬದ 4 ವ್ಯಕ್ತಿಗಳಿಗೆ   ಕೊರೊನ  ಸೋಂಕು ಪತ್ತೆಯಾದ ಹಿನ್ನಲೆ ಈ ಭಾಗ ಕಂಟೈನ್ಮೆಂಟ್ ಝೋನ್ ಆಗಿ ಸೂಚಿಸಿದರು.
ಈ ಭಾಗದಲ್ಲಿ ಹಲವು ಬಡ ಕುಟುಂಬದವರು ಕಂಟೈನ್ಮೆಂಟ್ ಝೋನ್ ಆಗಿರುವುದರಿಂದ ತಮ್ಮ ದೈನೆಂದಿನ ಕೆಲಸಕೆ ಹೋಗಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಂದರ್ಭದಲ್ಲಿ ಈ ಬಾಗದ ಗ್ರಾಮ ಪಂಚಾಯಿತಿ ಸದಸ್ಯ ಜಮ್ಮಡ ಸೋಮಣ್ಣ ತಮ್ಮ ಸ್ವಂತ  ಖರ್ಚಿನಲ್ಲಿ ಈ ಬಾಗದ ಎಲ್ಲಾ ಕುಟುಂಬಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ,  ತಮ್ಮ ವಾರ್ಡಿನ ಜನತಯ ಸಂಕಷ್ಟಕೆ ಸ್ಪಂದಿಸಿ ಮಾದರಿಯಾಗಿದ್ದಾರೆ ಹಾಗೆ ಇನ್ನು ಮುಂದೆಯೂ ಅಗತ್ಯ ವಸ್ತುಗಳು ಬೇಕಾದಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಈ  ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮುರುಗ ರವರು ಹಾಜರಿದ್ದರು.



No comments

Post a Comment