ಮೈಕ್ರೋ ಬಯೋಲಾಜಿಸ್ಟ್, ಪ್ರಯೋಗಶಾಲಾ ತಂತ್ರಜ್ಞರ ಸಂದರ್ಶನಕ್ಕೆ ಆಹ್ವಾನ

No comments


      ಮಡಿಕೇರಿ (Times Of Coorg):-ಕೊಡಗು ಜಿಲ್ಲೆಯ ಕೋವಿಡ್-19 ಪ್ರಯೋಗ ಶಾಲೆಗೆ ತುರ್ತಾಗಿ ಒಬ್ಬರು ಮೈಕ್ರೋ ಬಯೋಲಾಜಿಸ್ಟ್ ಹಾಗೂ ಒಬ್ಬರು ಪ್ರಯೋಗಶಾಲಾ ತಂತ್ರಜ್ಞರನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.

      ಮೈಕ್ರೋಬಯಾಲಾಜಿಸ್ಟ್ ಹುದ್ದೆಗೆ ಮೈಕ್ರೋಬಯಾಲಾಜಿಸ್ಟ್ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಜೆಒಸಿಯೊಂದಿಗೆ ಡಿಎಂಎಲ್‍ಟಿ ಮಾಡಿ ಪ್ಯಾರಾಮಿಡಿಕಲ್ ಬೋರ್ಡ್ ನೋಂದಣಿಯಾಗಿ ಗಣಕ ಯಂತ್ರದ ಜ್ಞಾನ ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಜುಲೈ 13 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಗೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಹಾಜರಾಗಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

No comments

Post a Comment