ಕೊಡಗು ಜಿಲ್ಲೆಯಲ್ಲಿ ಮೊದಲ‌ ಕೋವಿಡ್-19 ಬಲಿ : ಅಂತ್ಯ ಸಂಸ್ಕಾರ ನೆರವೇರಿಸಿದ ಪಿ.ಎಫ್.ಐ ಕಾರ್ಯಕರ್ತರು

No comments

ಮಡಿಕೇರಿ (Times Of Coorg): ಮಹಾಮಾರಿ ಕೊರೋನಾಗೆ ಕೊಡಗಿನಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಬೆಂಗಳೂರಿನ ಜ್ಯೋತಿ ನಗರದ 58 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕುಟುಂಬದ ಜೊತೆಗೆ ಕುಶಾಲನಗರದ ದಂಡಿನ್ ಪೇಟೆಯ ಸಂಬಂಧಿಕರ ಮನೆಗೆ ಬಂದಿದ್ದರು. ವ್ಯಕ್ತಿಗೆ ಎದೆ ನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಶನಿವಾರ ಅಪರಾಹ್ನ 4 ಗಂಟೆಗೆ ದಾಖಲಿಸಿದ್ದು, ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಮೃತಪಟ್ಟರು.ಭಾನುವಾರ ದಿನ ವ್ಯಕ್ತಿಯ ಕೋವಿಡ್ ಫಲಿತಾಂಶ ಹೊರ ಬಂದಿದೆ. ಮೃತ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತ್ಯ ಸಂಸ್ಕಾರ: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕೊಡಗು ಜಿಲ್ಲಾಡಳಿತದ ಸಹಕಾರದೊಂದಿಗೆ  ಮುಸಲ್ಮಾನರ ವಿಧಿ ವಿಧಾನಗಳ ಪ್ರಕಾರ ಮಡಿಕೇರಿಯ ರಾಣಿ ಪೇಟೆಯ ಕಬರ್ ಸ್ಥಾನದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ) ಕಾರ್ಯಕರ್ತರು ನೆರವೇರಿಸಿದರು.

No comments

Post a Comment