ನಾಪೋಕ್ಲು : ಗ್ರಾಮ ಪಂಚಾಯಿತಿ ಆದೇಶಕ್ಕೆ ಕ್ಯಾರೇ ಎನ್ನದ ಸಂತೆ ವ್ಯಾಪಾರಿಗಳು

No comments

ವರದಿ: ಹಾರಿಸ್ ನಾಪೋಕ್ಲು 
ನಾಪೋಕ್ಲು (Times Of Coorg):  ಜಿಲ್ಲೆಯಲ್ಲಿ ದಿನೇ ದಿನೇ  ಕೊರೋನಾ ಮಹಾಮಾರಿ ಹೆಚ್ಚುತ್ತಿರುವ  ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಕಳೆದವಾರ ತುರ್ತು ಸಭೆ ಕರೆದು ಎರಡು ವಾರಗಳ ಸಂತೆಯನ್ನು ರದ್ದುಪಡಿಸಿ ತೀರ್ಮಾನಿಸಿ ಎಲ್ಲರಿಗೂ ತಿಳಿಸಿದ್ದು , ಅದರಂತೆ ಕಳೆದವಾರ ಸಂತೆ ರದ್ದುಗೊಂಡಿದ್ದು ಆದರೆ ಸಂತೆ ದಿನವಾದ ಇಂದು ವಿರಾಜಪೇಟೆ ಹಾಗೂ ಮಡಿಕೇರಿ ಇನ್ನಿತರ ಗಳ ಕಡೆಗಳಿಂದ ತರಕಾರಿ  ವ್ಯಾಪಾರಿಗಳು ಪಂಚಾಯತಿಯ ಆದೇಶಕ್ಕೆ ಕ್ಯಾರೆ ಎನ್ನದೆ ಬೆಳ್ಳಂಬೆಳಿಗ್ಗೆ ವ್ಯಾಪಾರದಲ್ಲಿ ನಿರತರಾಗಿದ್ದರು.

ವಿಷಯ ತಿಳಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪೊಲೀಸರೊಂದಿಗೆ ಆಗಮಿಸಿದಾಗ ಕೆಲ  ವ್ಯಾಪಾರಿಗಳು ಸ್ಥಳ ಖಾಲಿ ಮಾಡಿದರು ಕೆಲ ವ್ಯಾಪಾರಸ್ತರಿಗೆ  ಗ್ರಾಮ ಪಂಚಾಯಿತಿ ದಂಡ ವಿಧಿಸಿ  ಸಂತೆಯನ್ನು ತೆರವು ಗೊಳಿಸಲಾಯಿತು. ಈ ಸಂದರ್ಭ ವಾರದ ಸಂತೆ ದಿನ ತರಕಾರಿ ವ್ಯಾಪಾರ ರದ್ದುಗೊಳಿಸಿರುದರಿಂದ  ಕೂಲಿ ಕಾರ್ಮಿಕರಿಗೆ ದೊಡ್ಡ ಹೊರೆಯಾಗಿದೆ.   ಇದನ್ನೇ ಬಂಡವಾಳವಾಗಿಸಿಕೊಂಡಿರುವ.  ಸ್ಥಳೀಯ ತರಕಾರಿ ವ್ಯಾಪಾರಸ್ತರು  ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು
 ಇವರಿಂದ ಖರೀದಿ ಮಾಡುವುದು ಸ್ಥಳೀಯರಿಗೆ ಅನಿವಾರ್ಯವಾಗಿದೆ .

  ಮೊದಲೇ ಕೊರೋನಾ ಮಹಾಮಾರಿ ಯಿಂದ  ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದು ಜನರ  ಗಾಯದ ಮೇಲೆ ಬರೆ ಎಳೆದಂತಾಗಿದೆ. 
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಾಪೋಕ್ಲು ವಿನಲ್ಲಿ ಅಂಗಡಿ ಮುಂಗಟ್ಟು ಅರ್ದ ದಿನ ಮಾತ್ರ ತೆರೆಯಲು ತೀರ್ಮಾನಿಸಿದ್ದು ಇದರಿಂದ ಪಟ್ಟಣದಲ್ಲಿ ಜನಜಂಗುಳಿ ಹೆಚ್ಚಾಗಿದ್ದು ಈ ನಿರ್ಧಾರದಿಂದ ಕೊರೋನಾ ತಡೆಗಟ್ಟುವ ಬದಲು ಅಧಿಕವಾಗುವ ಸಾಧ್ಯತೆ ಹೆಚ್ಚು ಎಂದ ಸ್ಥಳೀಯರು ಈ ತೀರ್ಮಾನ  ಜನಪ್ರತಿನಿಧಿಗಳು  ಮತ್ತು ಅಧಿಕಾರಿಗಳ ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

No comments

Post a Comment