ಕೊಡಗು ಜಿಲ್ಲೆಯಲ್ಲಿ ಇಂದು ಎರಡು ಕೋವಿಡ್-19 ಪ್ರಕರಣಗಳು ಧೃಡ
ಮಡಿಕೇರಿ (Times Of Coorg) : ಕೊಡಗಿನಲ್ಲಿ ಇಂದು ಎರಡು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು. ಸೋಂಕಿತರ ಸಂಖ್ಯೆ 78ಕ್ಕೇ ಏರಿಕೆಯಾಗಿದೆ. ಇಂದು ಪಾಸಿಟಿವ್ ಪ್ರಕರಣ ಬಂದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
1. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನಪೇಟೆಯ 58 ವರ್ಷದ ಪುರುಷ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿರುತ್ತದೆ. ಇವರು ದಿನಾಂಕ:
04-07-2020 ರಂದು ಸಂಜೆ 4.00 ಗಂಟೆಗೆ ಕುಶಾಲನಗರದ ಖಾಸಗಿ ಆಸ್ಪತ್ರೆಯಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಸಂಜೆ 4.30 ಗಂಟೆಗೆ ಮೃತಪಟ್ಟಿರುತ್ತಾರೆ.
2. ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಬಸವನಹಳ್ಳಿಯ 31 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರ ಪತ್ನಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕುಶಾಲನಗರದ ದಂಡಿನ ಪೇಟೆ ಮತ್ತು ಬಸವನಹಳ್ಳಿಯಲ್ಲಿ ಎರಡು ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ.
ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ:78 ಕ್ಕೇರಿದ್ದು, ಸಾವನ್ನಪ್ಪಿರುವ ಪ್ರಕರಣ-01, ಗುಣಮುಖ-3, ಸಕ್ರಿಯ ಪ್ರಕರಣ-74 ಮತ್ತು ಜಿಲ್ಲೆಯಲ್ಲಿ ತೆರೆಯಲಾಗಿರುವ ಒಟ್ಟು ನಿಯಂತ್ರಿತ ಪ್ರದೇಶಗಳು 32 ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

No comments
Post a Comment