ಎಸ್ಸೆಸ್ಸೆಫ್ ಎಮ್ಮೆಮಾಡು ಶಾಖೆ ಹೆಲ್ಪ್ ಡಸ್ಕ್ ವತಿಯಿಂದ ಉಸ್ತಾದರುಗಳಿಗೆ ಕಿಟ್ ವಿತರಣೆ

No comments

             ನಾಪೋಕ್ಲು (Times Of Coorg) : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆನ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಎಮ್ಮೆಮಾಡು ಶಾಖೆ  ಹೆಲ್ಪ್ ಡಸ್ಕ್ ವತಿಯಿಂದ ಎಮ್ಮೆಮಾಡು ವ್ಯಾಪ್ತಿಯ ಉಸ್ತಾದರಿಗೆ ಕಿಟ್ ವಿತರಣೆ ನಡೆಸಲಾಯಿತು. ಕೋವಿಡ್ 19 ಕೊರೋನ ಸೋಂಕು ಹರಡುವಿಕೆಯ ಭೀತಿಯಿಂದ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಶಾಲೆ ಕಾಲೇಜುಗಳು ಸೇರಿದಂತೆ ವಿಧ್ಯಾ ಸಂಸ್ಥೆಗಳು ತೆರೆಯುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಧಾರ್ಮಿಕ ವಿಧ್ಯಾ ಸಂಸ್ಥೆಗಳೆಲ್ಲವೂ ಮುಚ್ಚಲಾಗಿದೆ. ಇದರಿಂದ ಅನೇಕ ಉಸ್ತಾದರು ಕೆಲಸವಿಲ್ಲದೆ ಸಂಕಷ್ಟದಲ್ಲಿರುವುದನ್ನು ಗಮನಿಸಿ ಎಸ್ಸೆಸ್ಸೆಫ್ ಎಮ್ಮೆಮಾಡು ಶಾಖೆ ಹೆಲ್ಪ್ ಡಸ್ಕ್ ವತಿಯಿಂದ ಉಸ್ತಾದರಿಗೆ ಅತ್ಯವಶ್ಯಕ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ಎಮ್ಮೆಮಾಡಿನಲ್ಲಿ ಸುಮಾರು 33 ಕ್ಕಿಂತ ಹೆಚ್ಚು ಕಿಟ್ ಗಳನ್ನು ಮನೆ ಮನೆಗೆ ತೆರಳಿ ನೀಡಲಾಯಿತು.ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಇದರ ಅಧ್ಯಕ್ಷರಾದ ಸಯ್ಯಿದ್ ಕಿಲ್ಲೂರ್ ತಂಙಳ್ ರವರ ಪ್ರಾರ್ಥನೆಯೊಂದಿಗೆ ಎಸ್ ವೈ ಎಸ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ತಂಙಳ್ ಉದ್ಘಾಟನೆ ನೆರವೇರಿಸಿದರು. ಎಸ್ಎಸ್ಎಫ್ ಕೊಡಗು ಜಿಲ್ಲೆ ಸಮಿತಿ ಸದಸ್ಯರಾದ ಶೌಕತ್. ಎಮ್ಮೆಮಾಡು ಶಾಖೆ ಅಧ್ಯಕ್ಷರಾದ ನಝೀರ್ ಬಾಖವಿ ಕಾರ್ಯದರ್ಶಿ ನವ್ವಾರ್ ಕೋಶಾಧಿಕಾರಿ ಹಾರಿಸ್ ಮುಸ್ಲಿಯಾರ್ ಸಮಿತಿ ಸದಸ್ಯರುಗಳಾದ ರಶೀದ್ ಜಲಾಲುದ್ದೀನ್ ಶರೀಫ್ ಮುಸ್ತಫಾ ಸಹದಿ ಕಿಸ್ವ ಮಕ್ಕಾ ಯುನಿಟ್ ಕೊಶಾದಿಕಾರಿ ಅಬ್ದುಲ್ ಸಲಾಂ ಮತ್ತು ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

No comments

Post a Comment