ನಾಪೋಕ್ಲು ವಿನಲ್ಲಿ ಕೂರ್ಗ್ ಜನರಲ್ ಸರ್ವೀಸ್ ನೂತನ ಕಚೇರಿ ಪ್ರಾರಂಭ
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಕಳೆದ 5 ವರ್ಷಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಸರ್ವೀಸ್ ನೀಡುತ್ತಿದ್ದ (CGS,)ಕೂರ್ಗ್ ಜನರಲ್ ಸರ್ವೀಸ್ ನ ಬೇತು ರಸ್ತೆಯ ನೂತನ ಕಛೇರಿ ಈ ದಿನ ನಾಪೋಕ್ಲು ಟೌನ್ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಪಿ ಎಂ ಸಲೀಂ ಹಾರಿಸ್ ರವರು ತಕ್ಬೀರ್ ನೊಂದಿಗೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ನಾಪೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಅಹ್ಸನಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ ಎ ಇಸ್ಮಾಯಿಲ್, ಮುಖಂಡರಾದ ಮನ್ಸೂರ್ ಅಲಿ ಅರಾಫತ್ ಪಿಎಂ, ಎಂ ಡೀ ಇಸ್ಮಾಯಿಲ್ ಹಾಜಿ,ಮಾಲೀಕರಾದ ಆಸ್ಕರ್ ಸೈಟ್, ರಶೀದ್ ಆರ್ ಎಂ ಎಚ್ ಮುಬಾರಕ್ ಎಂ ಎ
ಮತ್ತಿತರ ಮುಖಂಡರು ಹಾಜರಿದ್ದರು.
ಈ ಕಚೇರಿಯಲ್ಲಿ ಬೋರ್ವೆಲ್ ,ನೀರಿನ ಮೋಟಾರ್,
ಜೆಸಿಬಿ , ಹಿಟಾಚಿ ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತಹ
ಎಲ್ಲ ರೀತಿಯ ವಸ್ತುಗಳು ಟೂರ್ಸ್ ಅಂಡ್ ಟ್ರಾವೆಲ್ಸ್ , ರಿಯಲ್ ಎಸ್ಟೇಟ್, ಕಾರ್ ದೀಲಿಂಗ್,
ವಾಷಿಂಗ್ ಮಿಶಿನ್, ರೆಫ್ರಿಜರೇಟರ್, ವಾಟರ್ ಪಂಪ್,ಯಂತ್ರಗಳ ರಿಪೇರಿ ಇನ್ನಿತರ ಜನರಿಗೆ ಅನುಕೂಲವಾಗುವಂತಹ ಸೇವೆಗಳು
ಅತಿ ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು ಎಂದು
ಈ ಸಂದರ್ಭ ಮಾಲೀಕರು ತಿಳಿಸಿದ್ದರು.



No comments
Post a Comment