ನಾಪೋಕ್ಲು ವ್ಯಾಪ್ತಿಯಲ್ಲಿ ಮತ್ತೆ ಮೂವರಿಗೆ ಕೊರೋನಾ ಸೋಂಕು ಧೃಢ
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರವ ಕೊರೋನಾ ಸೋಂಕಿತರ ಸಂಖ್ಯೆ.ಮುಂಜಾಗ್ರತಾ ಕ್ರಮವಾಗಿ ಸರಕಾರದ ಸೂಚಿಸಿದ ನಿಯಮಗಳನ್ನು ಪಾಲಿಸಿ ಜನಗಳು ಎಚ್ಚರಿಕೆಯಿಂದ ಇರದೆ ನಿರ್ಲಕ್ಷಿಸಿದರೆ ಕೋರೋನ ಮಹಾಮಾರಿ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಾಗಿಲ್ಲ.
ನಿನ್ನೆ ದಿನ ಮರಂಡೋದ ಗ್ರಾಮದ 40 ವರ್ಷದ ಮಹಿಳೆ ಮತ್ತು ಬಿದ್ದಂಡ ತಟ್ 50 ವರ್ಷದ ಪುರುಷನಲ್ಲಿ ಸೋಂಕು ದೃಢ ಪಟ್ಟಿದ್ದು ,ಈ ದಿನ ಚೋನೇಕೆರೆಯ 25 ವರ್ಷದ ಗರ್ಭಿಣಿ ಮಹಿಳೆಗೆ ಸೋಂಕು ಧೃಡಪಟ್ಟಿದೆ.
ನಿನ್ನೆ ದಿನ ಕಂದಾಯ ಇಲಾಖೆ ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಇಬ್ಬರು ಸೋಂಕಿತರು ವಾಸವಾಗಿದ್ದ ಎರಡು ಮನೆಯನ್ನು ಸೀಲ್ ಡೌನ್ ಮಾಡಿದ್ದು,
ಮತ್ತೆ ಈ ದಿನ ಸೋಂಕು ದೃಢ ಪಟ್ಟ ಗರ್ಭಿಣಿ ಮಹಿಳೆಯನ್ನು ಕೋವಿಡ್ಆಸ್ಪತ್ರೆಗೆ ದಾಖಲಿಸಿ ಸೋಂಕಿತ ಮಹಿಳೆ ವಾಸವಾಗಿದ್ದ ಮನೆಯನ್ನು ಸೀಲ್ ಡೌನ್ ಮಾಡಲಾಗಿಧೆ.


No comments
Post a Comment