ಶಿರಂಗಾಲ ಗ್ರಾಮ ನಿವಾಸಿಗಳ ಗಂಟಲು ದ್ರವ ಸಂಗ್ರಹಿಸಿದ ಆರೋಗ್ಯಾಧಿಕಾರಿಗಳು
Reported By Haneef Kodlipet
ಕೊಡ್ಲಿಪೇಟೆ (Times Of Coorg) : ಕೊರೋನಾ ಸೊಂಕು ಪತ್ತೆಯ ಹಿನ್ನೆಲೆ ಸೀಲ್ ಡೌನ್ ಆಗಿರುವ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಯ ಶಿರಂಗಾಲ ಗ್ರಾಮದಲ್ಲಿರುವ ಎಲ್ಲಾ ನಿವಾಸಿಗಳ ಗಂಟಲು ದ್ರವ ವನ್ನು ಅಧಿಕಾರಿಗಳು ಸಂಗ್ರಹಿಸಿದರು.ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಆರೋಗ್ಯ ಕೇಂದ್ರದ ಡಾ.ಬಿಪಿನ್, ಲ್ಯಾಬ್ ಟೆಕ್ನಿನಿಯಷನ್ ಗಳಾದ ರುದ್ರೇಶ್ , ನಾಗರಾಜ್, ಆರೋಗ್ಯ ಸಹಾಯಕಿಯರಾದ ನಂದಿನಿ ,ಕವಿತ, ಆರೋಗ್ಯ ನಿರಿಕ್ಷಕರಾದ ನವೀನ್ ಹಾಗೂ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡರು. ಆರೋಗ್ಯಾದಿಕಾರಿಗಳು ಪಿ.ಪಿ.ಇ ಕಿಟ್ ಧರಿಸಿ ಪರಿಕ್ಷಿಸಿದರು.


No comments
Post a Comment