ಕೊಡಗಿನಲ್ಲಿ ಹೊಸದಾಗಿ 14 ಜನರಿಗೆ ಕೊರೊನಾ ಪಾಸಿಟಿವ್, ಕೋವಿಡ್ ವೈದ್ಯ ಸಿಬ್ಬಂದಿಗಳನ್ನು ಬಿಡದ ಕೊರೊನಾ

No comments


ಮಡಿಕೇರಿ (Times Of Coorg) :ಕೊಡಗು ಜಿಲ್ಲೆಯಲ್ಲಿ  ಬುಧವಾರ  ಹೊಸದಾಗಿ 14 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ‌ ಜಾಯ್ ಮಾಹಿತಿ ನೀಡಿದ್ದಾರೆ.

ಈ ಪೈಕಿ 02 ಪ್ರಕರಣದಲ್ಲಿ ಸೋಂಕಿತ ವ್ಯಕ್ತಿಗಳು, ಕೋವಿಡ್ ಸಂಬಂಧಿತ ಲಕ್ಷಣಗಳಿಂದ ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು,
07 ಪ್ರಕರಣಗಳು ಕೋವಿಡ್-19 ಸಂಬಂಧಿತ ಕರ್ತವ್ಯದಲ್ಲಿ ಮುಂಚೂಣಿಯಲ್ಲಿದ್ದವರಾಗಿರುತ್ತಾರೆಹಾಗೂ ಖಾಸಗಿ ಕ್ಲಿನಿಕ್ ಮತ್ತು ಕೋವಿಡ್ ಯೇತರ ಆಸ್ಪತ್ರೆಗೆ ಸಂಬಂಧಿಸಿದವರಾಗಿರುತ್ತಾರೆ.

ಉಳಿದ 05 ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕಿತ ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುತ್ತವೆ. ರೋಗಿ ಸಂಖ್ಯೆ 9583ರ ಸಂಪರ್ಕದಿಂದ ಮೂವರಿಗೆ ಕೊರೊನಾ ತಗುಲಿದ್ದು, ಹಾಗೂ ರೋಗಿ ಸಂಖ್ಯೆ 9215ರ ಸಂಪರ್ಕದಿಂದ ಎರಡು ಜನರಿಗೆ ಕೊರೊನಾ ತಗುಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

• :25-06-2020 ರಂದು  ಜಿಲ್ಲೆಯ ಅಶ್ವಿನಿ ಆಸ್ಪತ್ರೆಯನ್ನು (ಜಿಲ್ಲಾ ಆಸ್ಪತ್ರೆ) ಸೋಂಕು  ನಿವಾರಣೆಗೊಳಿಸುವ ಕಾರ್ಯದ ನಿಮಿತ್ತ ಸದರಿ ಆಸ್ಪತ್ರೆಯಲ್ಲಿ  ತುರ್ತು  ಮತ್ತು ಆಕಸ್ಮಿಕ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ.

• ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಯಂತ್ರಿತ ವಲಯಗಳನ್ನು ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಸದಾಗಿ ವರದಿಯಾದ ಕೋವಿಡ್-19 ರ ಪ್ರಕರಣಗಳು ಈ ಹಿಂದೆ ವರದಿಯಾದ ಸೋಂಕು ಪ್ರಕರಣಗಳ ಪ್ರಾಥಮಿಕ ಸಂಪರ್ಕಗಳಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ.

ಇದರಿಂದ ಜಿಲ್ಲೆಯಲ್ಲಿ ಹಿಂದಿನ 08 ಪ್ರಕರಣಗಳು ಸೇರಿದಂತೆ ಒಟ್ಟು 22 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 03 ಪ್ರಕರಣಗಳು ಗುಣಮುಖವಾಗಿರುತ್ತಾರೆ.  ಪ್ರಸ್ತುತ ಜಿಲ್ಲೆಯಲ್ಲಿ 19 ಪ್ರಕರಣಗಳು ಸಕ್ರಿಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ‌ ಜಾಯ್ ತಿಳಿಸಿದ್ದಾರೆ.

No comments

Post a Comment