ಕೋವಿಡ್-19 ನಿಯಮ ಉಲ್ಲಂಘಿಸದಂತೆ ಕೊಡಗು ಜಿಲ್ಲಾಡಳಿತ ಸೂಚನೆ
ಮಡಿಕೇರಿ (Times Of Coorg):-ಕೋವಿಡ್-19ರ ಸಂಬಂಧ ಜೂನ್, 24 ರಂದು ವಿದೇಶ ಮತ್ತು ಅಂತರ ರಾಜ್ಯಗಳಿಂದ ಬಂದ ಜನರನ್ನು ಕೊಡಗು ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸಾಂಸ್ಥಿಕ ಮತ್ತು ಗೃಹ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಆದರೆ ಗೃಹ ಸಂಪರ್ಕ ತಡೆಯಲ್ಲಿರುವ ಕೆಲವರು ಗೃಹ ಸಂಪರ್ಕ ತಡೆಯ ನಿಯಮವನ್ನು ಮೀರಿ ಹೊರಗೆ ಓಡಾಡುತ್ತಿರುವುದು ಕಂಡು ಬಂದಿದ್ದು, ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಗೃಹ ಸಂಪರ್ಕ ತಡೆಯನ್ನು ಉಲ್ಲಂಘಿಸಿದವರನ್ನು ಮುಂಜಾಗ್ರತಾ ಕ್ರಮವಾಗಿ ಗೃಹ ಸಂಪರ್ಕ ತಡೆಯಿಂದ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

No comments
Post a Comment