ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧಗೊಂಡ ಕೊಡ್ಲಿಪೇಟೆ ಪರೀಕ್ಷಾ ಕೇಂದ್ರ : ಪೂರ್ವಭಾವಿ ಸಭೆ

No comments

ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊಡ್ಲಿಪೇಟೆ ಪರೀಕ್ಷಾ ಕೇಂದ್ರವು ಸಿದ್ಧಗೊಂಡಿದೆ. ಪರೀಕ್ಷಾ ಕೇಂದ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಛೇರಿಯ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀ  ಮಂಜೇಶ್ ರವರಿಂದ ಕೊಡ್ಲಿಪೇಟೆ  ಪರೀಕ್ಷಾ ಕೇಂದ್ರದ ವೀಕ್ಷಿಸಿದರು. ಪರೀಕ್ಷಾ ಕೇಂದ್ರವಾದ ಕೊಡ್ಲಿಪೇಟೆ ಪ ಪೂ ಕಾಲೇಜಿನ ಸುತ್ತಮುತ್ತ ಹಾಗು ಎಲ್ಲಾ ಕೊಠಡಿಗಳನ್ನು, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಸಿಬ್ಬಂಧಿಗಳು ಇಂದು ಸ್ಯಾನಿಟೈಜ್ ಗೊಳಿಸಿದರು.ಮುಖ್ಯ ಶಿಕ್ಷಕರಾದ ಶ್ರೀ ಅಬ್ದುಲ್ ರಬ್ ರವರು, ಶಾಲಾ ಸಿಬ್ಬಂದಿಗಳಾದ ಪವನ್ ಕುಮಾರ್,ಮಂಜೇಗೌಡರು ಉಪಸ್ಥಿತರಿದ್ದರು.
ದಿನಾಂಕ 25/6/2020ರಿಂದ ಪ್ರಾರಂಭವಾಗುವ ಪರೀಕ್ಷೆಗಳ ಪೂರ್ವಭಾವಿ ಸಭೆ ಕೂಡ ಇಂದು ನಡೆಸಲಾಯಿತು.ಪರೀಕ್ಷಾ ಮುಖ್ಯ ಅಧೀಕ್ಷಕರಾದ ಶ್ರೀ ಅಬ್ದುಲ್ ರಬ್ ರವರು ಪರೀಕ್ಷಾ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.


No comments

Post a Comment