ಮಡಿಕೇರಿ (Times Of Coorg): ಕೊರೋನ ಸೋಂಕು ತಡೆಗಟ್ಟುವ ಸಂಬಂಧ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಯಲ್ಲಿ 01 ಕೊರೋನ ಸೋಂಕು ದೃಢಪಟ್ಟ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಜಿಲ್ಲೆಗೆ ಆಗಮಿಸುವ ಎಲ್ಲಾ ವಾಹನಗಳ ಸವಾರರನ್ನು ಮಾಲ್ದಾರೆಯ ಚೆಕ್ ಪೋಸ್ಟ್ ಬಳಿ ಆರೋಗ್ಯತಪಾಸಣೆಗೆ ಒಳಪಡಿಸುವ ಮೂಲಕ ಜಿಲ್ಲೆಗೆ ಬರಮಾಡಿಕೊಳಲಾಗುತ್ತಿದೆ.
ಸಿದ್ದಾಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳದಲ್ಲಿದ್ದ ವಾಹನಗಳನ್ನು ತೆಗೆದು ಅದರಲ್ಲಿದ್ದ ಸವಾರರನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಿದ್ದಾಪುರ ಠಾಣಾಧಿಕಾರಿ ಭೋಜಪ್ಪ ಆರಕ್ಷಕರು ಶಿವು, ಸ್ವಾಮಿ,
ಹಿರಿಯ ಆರೋಗ್ಯ ಸಹಾಯಕ ಸುದರ್ಶನ್ ಆಶಾಕಾರ್ಯಕರ್ತೆಯರಾದ ಭವ್ಯ,ಕೆ.ಡಿ.ಪಾರ್ವತಿ ಮುಂತಾದವರು ಹಾಜರಿದ್ದರು
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಸುಮನ್ ಡಿ ಪನ್ನೇಕರ್, ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ನವರು ಪರಿಶೀಲಿಸಿದರು.
No comments
Post a Comment