ಬಾಪೂ ಮತ್ತೆ ಬರಬೇಡಿ....!

No comments


ಬಾಪೂ!
ನಾನು ನಿಮ್ಮ ಭಕ್ತನಲ್ಲ
ನಿಮ್ಮ ಅಭಿಮಾನಿಯೂ ಅಲ್ಲ
ಆದರೆ ನಿಮ್ಮ ಬದುಕು ನನ್ನನ್ನು ಪ್ರೇರಣೆಯಾಗಿಸಿದೆ,ಬದಲಿಸಿದೆ,!


ಬಾಪೂ!
ನನಗೆ ವಿಷಾದವಿದೆ
ನಿಮ್ಮ ಭಕ್ತರು ನಿಮ್ಮನ್ನು ಸಾಯಿಸುತ್ತಿದ್ದಾರೆ
ಸಾವೇ ಇಲ್ಲದ ನಿಮ್ಮ ಚೇತನಕ್ಕೆ ಗುಂಡಿಕ್ಕಲು ಪ್ರಯತ್ನಿಸುತ್ತಿದ್ದಾರೆ
ನಿಮ್ಮ ಮತ್ತು ಅಂಬೆಡ್ಕರ್ ನಡುವೆ ಕಂದರ ನಿರ್ಮಿಸಲು ಯತ್ನಿಸುತ್ತಿದ್ದಾರೆ!
ನಿಮ್ಮನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದವರು 
ಈಗ ನಿಮ್ಮ ಮುಖವಾಡ ಧರಿಸಿ ಮೆರವಣಿಗೆ ಮಾಡುತ್ತಿದ್ದಾರೆ!

ಬಾಪೂ!
ನಿಮ್ಮನ್ನು ನಗಿಸುತ್ತಿದ್ದಾರೆ
ಗಾಂಧಿ ಜಯಂತಿಯಂದು 
ಈಗಿನ ನೋಟಿನಲ್ಲಿ,
ಆದರೆ ಒಳಗೊಳಗೇ ಅಳುತ್ತಿರುವ
ರೋಧನೆ ಕೇಳುತ್ತಿವೆ,

ಬಾಪೂ!
ನೀವು ನೀಡಿದ ಸ್ವಾತಂತ್ರ್ಯ 
ಯಾರೋ ಕಳವು ಮಾಡಿದ್ದಾರೆ,
ಶಸ್ತ್ರ ಅಸ್ತ್ರ ಬಳಸದೆ,ರಕ್ತಪಾತ ಮಾಡದೆ ಬುದ್ದಿವಂತ ಆಂಗ್ಲರ
ಗುಲಾಮಗಿರಿಯಿಂದ ಮುಕ್ತಿ ನೀಡಿದ ನಿಮ್ಮ, ಇತಿಹಾಸವನ್ನು ಬದಲಿಸಿದ್ದಾರೆ!

ಬಾಪೂ!
ದ್ವೇಷ ರಾಜಕಾರಣದಲ್ಲಿರುವ ದೇಶಭಕ್ತಿಯಲ್ಲಿ...!
ನಿಮ್ಮ ಪ್ರಗತಿಪರವಾದ ಆಶಯಾದರ್ಶಗಳ ಕಾಣೆ ಮಾಡಿ
ದ್ವೇಷ ಭಾರತ ನಿರ್ಮಾಣದ ತತ್ವ ಮೊಳಗುತ್ತಿದೆ..!


ಬಾಪೂ!
ನೀವು ಮತ್ತೆ ಮರಳಿ ಬರಬೇಡಿ ಇಲ್ಲಿ
ನಿಮ್ಮನ್ನು  ನಿಮ್ಮ ಅಹಿಂಸಾ  ಸಿದ್ದಾಂತವನ್ನು
ಕಂಬಿಗಿಳಿಸಿ ಮತ್ತೆ ಭ್ರಷ್ಟಾಚಾರದಲ್ಲಿ ಮೊಳುಗಿಸಲು
 ಗೋಡ್ಸೆ‌ಯಂತವರು  ಯೋಚನೆ ಹಾಕುತ್ತಿದ್ದಾರೆ

#ನಲ್ಮಿಡಿ  ಚಾರ್ಮಾಡಿ

No comments

Post a Comment