ವರದಿ : ಶಿಬಿಲಿ ಕಲ್ಕಂದೂರ್
ಸೋಮವಾರಪೇಟೆ (TOC ನ್ಯೂಸ್) :" ಗಾಂಧೀಜಿಯ ಕನಸು ನನಸಾಗಲಿ" ಎಂಬ ಧೇಯ್ಯ ವಾಕ್ಯದೊಂದಿಗೆ ಅಕ್ಟೋಬರ್ 02ರಂದು ಗಾಂಧೀ ಜಯಂತಿಯ ಭಾಗವಾಗಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) SSF ಸೋಮವಾರಪೇಟೆ ಡಿವಿಷನ್ ಕ್ಯೂಟೀಮ್ ವತಿಯಿಂದ ಡಿವಿಷನ್ ವ್ಯಾಪ್ತಿಯ 8 ಪ್ರಮುಖ ಕೇಂದ್ರಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 8:00 ಗಂಟೆಗೆ ಹೊಸತೋಟದಲ್ಲಿ SSF ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿರವರು ಚಾಲನೆ ನೀಡಿದರು. ನಂತರ ಮಾದಪುರ ಮಾರ್ಗವಾಗಿ ಸುಂಟಿಕೊಪ್ಪ , ಕುಶಾಲನಗರ, ಕೂಡಿಗೆ, ಶನಿವಾರಸಂತೆ , ಕೊಡ್ಲಿಪೇಟೆ ಕೇಂದ್ರಗಳಲ್ಲಿ ಹಾದುಬಂದು ಸೋಮವಾರಪೇಟೆ ಕೇಂದ್ರದಲ್ಲಿ ಸಮಾಪ್ತಿಗೊಂಡಿತು.
ಎಲ್ಲಾ ಕಡೆಗಳಲ್ಲಿಯೂ ಕೊಡಗಿನ ಯುವ ವಾಗ್ಮಿ, ಕನ್ನಡ ಭಾಷಣಗಾರ, SSF ಸೋಮವಾರಪೇಟೆ ಡಿವಿಷನ್ ಅಧ್ಯಕ್ಷರಾದ ಶಾಫಿ ಸಅದಿಯವರು ಮನತಟ್ಟುವ ರೀತಿಯಲ್ಲಿ ಭಾಷಣಗೈದರು. ಎಲ್ಲ ಕಡೆಗಳಲ್ಲಿ ಜನರು ಶಾಫಿ ಸಅದಿಯವರ ಭಾಷಣವನ್ನು ತದೇಕಚಿತ್ತದಿಂದ ಆಲಿಸಿದರು, ಪ್ರಶಂಸಿಸಿದರು. " ಗಾಂಜಾ ಮದ್ಯ ಗುಟ್ಕಾ ಇತರೆ ಮಾದಕ ಪದಾರ್ಥಗಳಿಂದಾಗುವ ಕೆಡುಕುಗಳ ಹಾಗೂ ಆರೋಗ್ಯಕ್ಕೆ ಭಾಧಿಸುವ ಮಾರಕ ರೋಗಗಳ ಬಗ್ಗೆ ಎಚ್ಚರಿಸಿದರು. ಮಾದಕ ದ್ರವ್ಯಗಳ ಕುಟುಂಬವನ್ನು ಸಮಾಜವನ್ನು ಕೆಡಿಸುತ್ತಿದೆ. ಸಾಮಾನ್ಯ ಅಂಗಡಿಗಳಲ್ಲಿ ಸಿಗುವ ವಿಮಲ್ ಮುಂತಾದ ಮಾದಕ ವಸ್ತುಗಳು ಎಷ್ಟು ಪರಿಣಾಮ ಬೀರುತಿದೆ ಎಂದು ವಿವರವಾಗಿ ತಿಳಿಸಿದರು. ಇಂದಿನ ಕಾಲಘಟ್ಟದಲ್ಲಿ ಅಮಲು ಪದಾರ್ಥಗಳಿಂದ ನಡೆಯುತ್ತಿರುವ ಘಟನೆಗಳ ವಿವರಿಸಿ ಇಂತಹ ಅಮಲು ಪದಾರ್ಥಗಳಿಂದ ದೂರವಿರುವಂತೆ ತಿಳಿಸಿದರು. ಎಲ್ಲಾ ಕಡೆಗಳಲ್ಲೂ ಸಾರ್ವಜನಿಕರಿಂದ , ಪೋಲಿಸ್ ಇಲಾಖೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ SSF ರಾಜ್ಯ ಸದಸ್ಯರುಗಳಾದ ಶರೀಫ್ ಹೊಸತೋಟ, ರಹೀಂ ಹೊಸತೋಟ, ಉನೈಸ್ ಹೊಸತೋಟ ಹಾಗೂ ಡಿವಿಷನ್ ಸೆಕ್ಟರ್, ಯೂನಿಟ್ ನಾಯಕರುಗಳು, ಕಾರ್ಯಕರ್ತರು ಹಾಜರಿದ್ದರು.










