ಕಾರ್ಯಕ್ರಮದ ಅದ್ಯಕ್ಷತೆಯನ್ನು ಸೆಕ್ಟರ್ ಅದ್ಯಕ್ಷ ರಜ಼ಾಕ್ ಸಅದಿ ಅವರು ವಹಿಸಿಕೊಂಡು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ನೆಲ್ಲಿಹುದಿಕೇರಿ ಅವರು ಉದ್ಘಾಟಿಸಿದರು.
ನಂತರ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಡಿದ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅದ್ಯಕ್ಷರಾದ ಸ್ವಬಾಹ್ ಸಖಾಫಿ ಅಲ್ ಹಿಮಮಿ ಅವರು ಮಾದಕ ವಸ್ತ್ರಗಳನ್ನು ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸುತ್ತಾ ಗಾಂಧೀಜಿ ಕಂಡ ಅತ್ಯಂತ ದೊಡ್ಡ ಕನಸುಗಳಲ್ಲಿ ಒಂದಾಗಿತ್ತು ಮದ್ಯಮುಕ್ತ ಭಾರತ ಎಂಬುವುದು.ಆದರೆ ಆ ಕನಸು ಬರೀ ಕನಸಾಗಿಯೇ ಉಳಿದುಕೊಂಡಿದೆ ಎಂಬುವುದು ವಿಶಾದನೀಯ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ನೇತೃತ್ವ ವಹಿಸಿದ್ದ ಗಾಂಧೀಜಿಯನ್ನೇ 1948 ಜನವರಿ 30 ರಂದು ಭಾರತೀಯನೇ ಆದ ವ್ಯಕ್ತಿ ಹತ್ಯೆ ಮಾಡಿದ್ದು ದೇಶದಲ್ಲಿ ಫ್ಯಾಸಿಸಮ್ ಪ್ರಥಮ ಸೃಷ್ಟಿಯಾಗಿತ್ತು , ಇಂದು ಅದೇ ಫ್ಯಾಸಿಸ್ಟ್‌ಗಳು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕಗಳನ್ನು ಕದ್ದು ಮುಚ್ಚಿ ನೀಡಿ ಭಾರತವನ್ನು ನುಚ್ಚುನೂರು ಮಾಡಲು ಪ್ರಯತ್ನಿಸುತಿದ್ದಾರೆ ಎಂದರು.
ನಂತರ ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ಅದ್ಯಕ್ಷ ಜುಬೈರ್ ಸಅದಿ ಅವರು ಮಾತನಾಡಿ ಯಾವುದೇ ಧರ್ಮವು ಮಾದಕಗಳನ್ನು ಪ್ರೋತ್ಸಾಹಿಸುವುದಿಲ್ಲ , ಮಾದಕಗಳಿಗೆ ಕಡಿವಾಣ ಹಾಕಲು ಎಸ್ಸೆಸ್ಸೆಫ್ ಸತತವಾಗಿ ಪ್ರಯತ್ನಿಸುತಿದ್ದು ಡಿಸೆಂಬರ್ 31ರಂದು ರಾಜ್ಯಾದ್ಯಂತ ಮಾದಕಗಳ ವಿರುದ್ದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದರು.
ರಾಜ್ಯ ಎಸ್ಸೆಸ್ಸೆಫ್ ಸದಸ್ಯರಾದ ರಫೀಕ್ ನೆಲ್ಲಿಹುದಿಕೇರಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕ್ಯೂ ಟೀಂ ಉಸ್ತುವಾರಿ ಜಂಶಾದ್ ಸಖಾಫಿ ವಂದಿಸಿದರು
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ಪ್ರ.ಕಾರ್ಯದರ್ಶಿ ಯೂಸುಫ್ ಜ಼ೈನಿ , ಸಿದ್ದಾಪುರ ಸೆಕ್ಟರ್ ಕಾರ್ಯದರ್ಶಿ ನಿಜ಼ಾಮ್ ಕಂಡಕರೆ , ಜಿಲ್ಲಾ ಸದಸ್ಯರಾದ ಜುನೈದ್ ಅಮ್ಮತ್ತಿ , ಸಯ್ಯಿದ್ ತ್ವಾಹಿರ್ ಸಅದಿ ಸುಳ್ಯ ಹಾಗು ನಿನ್ನಿತರರು ಉಪಸ್ಥಿತರಿದ್ದರು.





