ಜಗತ್ತಿನ ಉದಾತ್ತ ಚಿಂತಕ- ಮಹಾತ್ಮ ಗಾಂಧಿಯ ನೆನಪು | ✍ ತೌಸಿಫ್ ಅಹ್ಮದ್ ಅಮ್ಮತ್ತಿ


ವಿಷಯ ಸಂಗ್ರಹ ✍:- _ತೌಸೀಫ್ ಅಹ್ಮದ್ ಅಮ್ಮತ್ತಿ..._

       ಹಿಂದಿನ ಬಾಂಬೆ ಪ್ರಾಂತ್ಯದ ಪಶ್ಚಿಮ ತೀರದ ಸಣ್ಣ ಪಟ್ಟಣ ಪೋರ್‌ಬಂದರಿನಲ್ಲಿ 1869 ಅಕ್ಟೋಬರ್ 2ರಂದು ಗಾಂಧೀ ಜನಿಸಿದರು . ತಂದೆ ಸರ್ಕಾರದಲ್ಲಿ ಒಂದು ಗೌರವಾನ್ವಿತ  ಸ್ಥಾನದಲ್ಲಿದ್ದರು . ಹಿಂದೂ ಜಾತಿ ಪದ್ಧತಿಯಲ್ಲಿ ಮೂರನೇ ವರ್ಗಕ್ಕೆ ಅಂದರೆ ಬನಿಯ ಜಾತಿಗೆ ಸೇರಿದ್ದ ಗಾಂಧಿ ಕುಟುಂಬ ಸುಖ , ನೆಮ್ಮದಿಯಿಂದ ಇತ್ತು . 

          ಗಾಂಧಿ ಹಿಂದೂ ಸಂಸ್ಕಾರದಂತೆ ಬೆಳೆದು ಬಂದರು . ಮಾಂಸ , ಮದ್ಯ , ಧೂಮಪಾನಗಳು ತ್ಯಾಜ್ಯವೆನಿಸಿದ್ದವು . ಗಾಂಧಿ ತನ್ನ ಆತ್ಮಕಥೆಯಲ್ಲಿ ಹೇಳಿರುವಂತೆ ಅವರ ಅಣ್ಣ ಒಮ್ಮೆ ಅವನಿಗೆ ಮಾಂಸ ಸೇವಿಸಲು , ಧೂಮಪಾನ ಮಾಡಲು ಪ್ರೇರೆಪಿಸಿದರಂತೆ . ಹಾಗೆ ಮಾಡಿದಾಗಲೆಲ್ಲಾ ಗಾಂಧಿಗೆ ಆರೋಗ್ಯ ಕೆಡುತ್ತಿತ್ತಂತೆ . ಮನೆಯ ವಾತಾವರಣ ಬಲು ಆತ್ಮೀಯವಾಗಿದ್ದು ತಂದೆ ಅತ್ಯಂತ ಅಕ್ಕರೆಯಿಂದ ಮಕ್ಕಳನ್ನು ಮುದ್ದು ಮಾಡುತ್ತಿದ್ದರು . ಗಾಂಧಿಗೆ ತಂದೆ ಕಂಡರೆ ಅಪಾರ ಪ್ರೀತಿ , ಅವರ ಸಹನೆ , ದಯೆ , ಸತ್ಯಸಂಧತೆ ಮಗನ ವ್ಯಕ್ತಿತ್ವದ ಮೆಲೆ ಭಾರಿ ಪ್ರಭಾವ ಬೀರಿದವು . ಮನೆಯ ಕಪಾಟಿನಲ್ಲಿದ್ದ ಒಳ್ಳೆ ಪುಸ್ತಕಗಳು , ಚರ್ಚೆ , ಸಂವಾದಗಳು , ಸಂಗೀತ ಪರಿಕರಗಳು ಅವರ ಬೌದ್ಧಿಕ ಜೀವನವನ್ನು ಸಮೃದ್ಧಿಗೊಳಿಸಿದವು . 

        ಭಾರತೀಯ ವಿವಾಹ ಪದ್ಧತಿಯನುಸಾರ ಗಾಂಧಿ ಹಾಗೂ ಕಸ್ತೂರ್‌ಬಾ ನಡುವೆ ವಿವಾಹವು ಏರ್ಪಟ್ಟಿತು . ಕಸ್ತೂರ್ ಬಾ ಪಕ್ಕದ ಊರಿನ ಓರ್ವ ವ್ಯಾಪಾರಸ್ಥರ ಮಗಳು . ಅವರ ಮದುವೆ ಬಲು ದೀರ್ಘಕಾಲ ಬಾಳಿತು . ಹಲವು ಅಡಚಣೆ , ತಾಪತ್ರಯಗಳ ನಡುವೆಯೂ ನಾಲ್ವರು ಮಕ್ಕಳು ಗಾಂಧೀಜಿಗೆ . 

         19ನೇ ವಯಸ್ಸಿಗೆ ಗಾಂಧಿ ಕಾನೂನು ಅಭ್ಯಾಸಕ್ಕೆಂದು ಇಂಗ್ಲೆಂಡಿಗೆ ಹೋದರು . 1888ರ ಅವರ ಫೋಟೋ ನೋಡಿದರೆ ಅವರೆಂತ ಸೊಗಸುಗಾರ ಎಂದು ತಿಳಿಯುತ್ತದೆ . ಪಕ್ಕಾ ಇಂಗ್ಲೀಷರಂತೆ ಸೂಟು - ಬೂಟು , ಕೈಯಲ್ಲೊಂದು ಬೆತ್ತ , ಕೈಗಳಿಗೆ ಕೈಗವಸು ಅವರ ದಿರಿಸು , ತಲೆಯ ಮೇಲಿನ ಕಪ್ಪು ಕೂದಲು ಇಳಿಬಿದ್ದಿತ್ತು . ದೇಹ ಪ್ರಕೃತಿ ತುಸು ತೆಳ್ಳಗೆ , ಹಾಗೂ ಬಡಕಲು ತರಹ ಇದ್ದು ಅಗಲ ಕಿವಿ ಮತ್ತು ನಿಡಿದಾದ ಮೂಗು ಅವರ ಪ್ರಮಾಣಬದ್ಧ ದೇಹಕ್ಕೆ ತುಸು ದೊಡ್ಡವೆನಿಸಿದ್ದವು . 

              ಕಾನೂನು ಅಧ್ಯಯನದಲ್ಲಿ ಗಾಂಧಿ ತುಂಬಾ ಗಂಭೀರರಾಗಿದ್ದರು . 1891ರಲ್ಲಿ ಬಾರ್ ಪರೀಕ್ಷೆ ಪಾಸಾದ ಬಳಿಕ ಭಾರತಕ್ಕೆ ಹಿಂದಿರುಗಿದರು . ವೃತ್ತಿ ಕೈಗೊಳ್ಳಲು 1893ರಲ್ಲಿ ಅವರು ಕೆಲಸ ಮಾಡುತ್ತಿದ್ದ ಕಾನೂನು ಸಂಸ್ಥೆ ಗಾಂಧಿಯನ್ನು ದಕ್ಷಿಣ ಆಫ್ರಿಕಾಕ್ಕೆ ವ್ಯಾಪಾರದ ನಿಮಿತ್ತ ಕಳಿಸಿಕೊಟ್ಟಿತು . ಆಗ ಇಲ್ಲೇ ಬಹು ಅಮಾನವೀಯ ಪಕ್ಷಪಾತತ್ವವನ್ನು ಗುರುತಿಸಿದ್ದು , ಗುಡುಗಿದ್ದು , ಅದರ ವಿರುದ್ಧ ಹೋರಾಡಲು , ಸೆಣಸಿ ನಿಲ್ಲಲು ನಿಶ್ಚಯಿಸಿದ್ದು ! 

        ಗಾಂಧಿಗೆ ಎದುರಾದ ಸಮಸ್ಯೆಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಜನ ಒಂದುಗೂಡುವಂತೆ ಪ್ರೇರಣೆಯಾಯಿತು . ಅವರ ನಾಯಕತ್ವದಲ್ಲಿ ತನ್ನ ದೇಶವಾಸಿಗಳು ಅಲ್ಪಸಂಖ್ಯಾತರಾಗಿದ್ದು , ಬಡತನದಿಂದ ಬಳಲಿದ್ದು ಅವರ ಹಕ್ಕುಗಳಿಗಾಗಿ ಸುಧಾರಣೆಗಳನ್ನೂ ತರಲು ನಿರ್ಧರಿಸಿದರು , ಸಭೆಗಳನ್ನು ಏರ್ಪಡಿಸಿದರು . ಸಮೂಹ ಮಾಧ್ಯಮಗಳಿಗೆ , ಸರ್ಕಾರಿ ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಭಾರತೀಯರು ಹೇಗೆ ದಕ್ಷಿಣ ಆಫ್ರಿಕಾದಲ್ಲಿ ಪಕ್ಷಪಾತ ನೀತಿಯನ್ನು ಉಣ್ಣುತ್ತಿರುವರೆಂದು ಪ್ರಚಾರ ಮಾಡಿದರು . ಬಳಿಕ 1894ರಲ್ಲಿ ನಾಟಲ್‌ನಲ್ಲಿ Indian National Congress ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು ಗಾಂಧಿ . ಕಟ್ಟಕಡೆಗೆ ಬ್ರಿಟಿಷ್ ವಸಾಹತು ಸರ್ಕಾರ ಗಾಂಧಿ " ಓರ್ವ ಆಕ್ಷೇಪಾರ್ಹ ವ್ಯಕ್ತಿ ಎಂದು ಗಮನಕ್ಕೆ ತೆಗೆದುಕೊಂಡರು ಅವರ ಚಟುವಟಿಕೆಗಳನ್ನು ಗಮನಿಸಿ . ಯಾವಾಗ ಇವರೊಂದಿಗೆ ಅನುಯಾಯಿಗಳ ಪಡೆ ಹೆಚ್ಚಾದಂತೆ ಸರ್ಕಾರ , ಇವರನ್ನು ಹೆಚ್ಚಾಗಿ ಮೂದಲಿಸಿತು ಇಲ್ಲವೇ ಅವರ ಮೇಲೆ ಅನುಚಿತವಾಗಿ ವರ್ತಿಸಿತು . ನಾಯಬದವಾದ ಇವರ ಬೇಡಿಕೆಗಳ ವಾಗ ರಿ ಸರ್ಕಾರದ ನಿರೀಕ್ಷೆಯನ್ನು ಹುಸಿಗೊಳಿಸಿತು . ಅವರ ಸಾರ್ಥರಹಿತ ಸೇವೆ , ಪ್ರಾಮಾಣಿಕತ , ವರ್ಗಬೇಧದ ಪರಿವ ಇಲ್ಲದೆ ಸಮಾನವಾಗಿ ಎಲ್ಲರನ್ನು ಕಾಣುವ ರೀತಿ ಮೂಕವಿಸ್ಮಿತರಾಗಿಸಿತು .

       1907ರಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರ ಪಕ್ಷಪಾತ ಕಾನೂನೊಂದನ್ನು ಹೊರಡಿಸಿ ತನ್ಮೂಲಕ ಎಲ್ಲ ಭಾರತೀಯರು ನೋಂದಣಿ ಮಾಡಿಸಿಕೊಳ್ಳಬೇಕೆಂತಲೂ ಹಾಗೂ ಬೆರಳಚ್ಚು ತೆಗೆಸಿಕೊಳ್ಳಲು ಆದೇಶಿಸಿತು . ಗಾಂಧಿ ತನ್ನ ಜನರಿಗೆ ಬಂದದ್ದೆಲ್ಲಾ ಬರಲಿ ಈ ಕಾನೂನನ್ನು ಶಾಂತಿ ಮಾರ್ಗದಿಂದಲೇ ಉಲಂಘಿಸಬೇಕೆಂದು ಕರೆ ಇತ್ತರು . ಈ ಕರೆ ಇದಕ್ಕೆ ಗಾಂಧಿಗೆ ಜೈಲಾಯಿತು . ಆದರೆ ಗಾಂಧಿ ಅನುಯಾಯಿಗಳ ಒತ್ತಡ , ಚಳುವಳಿಗಳಿಂದಾಗಿ ಸರ್ಕಾರ ಮಣಿಯಲೇಬೇಕಾಯಿತು . ಗಾಂಧಿ ಬಿಡುಗಡೆಯಾದರು .

      1925ರಲ್ಲಿ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಯಂ ಆಡಳಿತವನ್ನು ವಿಸ್ತರಿಸಿತು . ಆಗ ಗಾಂಧಿಯವರ ಸಲಹೆಯನ್ನು ವಿರೋಧಿಸಿ ಸ್ವಯಂ ಆಡಳಿತದಲ್ಲಿ Indian National Congress ಭಾಗಿಯಾಗಲು ಇಚ್ಚಿಸಿದ ನಿಮಿತ್ತ ಗಾಂಧಿ ರಾಜಕೀಯದಿಂದ ನಿವೃತ್ತಿಯಾದರು . ಆದರೆ 1926ರ . ಡಿಸೆಂಬರ್‌ನಲ್ಲಿ ಪೂರ್ಣ ಸ್ವಾತಂತ್ರವು ಆಮೆಗತಿಯಲ್ಲಿರುವುದೆಂದು ನಿರಾಶೆಗೊಂಡ ಕೆಲ ದೇಶಪ್ರೇಮಿಗಳು ಕಾಂಗ್ರೆಸ್‌ನಿಂದ ಹೊರಬಂದು ಬಾಂಬ್ ದಾಳಿ , ದೊಂಬಿ , ಇತ್ಯಾದಿಗಳನ್ನು ಅನುಸರಿಸಿದರು . ಈ ಘಟನೆಗಳು ಮತ್ತೆ ಗಾಂಧಿ ರಾಜಕೀಯ ಚಟುವಟಿಕೆಗಳಿಗೆ ವಾಪಸ್ಸಾಗುವಂತೆ ಮಾಡಿದವು , ಈ ಸಾರಿ ಗಾಂಧಿ ಕಾನೂನು ಭಂಗ ಚಳುವಳಿ , ಮುಷ್ಕರ ಅರ್ಥಾತ್ ಹರತಾಳಕ್ಕೆ ಇಳಿದರು .

       1930ರಲ್ಲಿ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಯಂ ಆಡಳಿತ ಅಧಿಕಾರದ ವಿಸ್ತರಣೆಯ ಭರವಸೆಯನ್ನು ಮುರಿಯಿತು . ಅದೇ ವರ್ಷ ಮಾರ್ಚಿ ತಿಂಗಳಲ್ಲಿ ಗಾಂಧಿ ದೇಶಾದ್ಯಂತ ಕಾಯಿದೆ ಭಂಗ ಚಳುವಳಿಗೆ ಕರಕೊಟ್ಟರು . ಸಹಸ್ರಾರು ಚಳುವಳಿಗಾರರ ಸಮೂಹವೇ ಈ ಕರೆಗೆ ಓಗೊಟ್ಟಿತು . 24 ದಿನಗಳ ಪೂರಾ ದಂಡಿಯಾತ್ರೆ ಕೈಗೊಂಡರು . ಇದನ್ನೇ ಉಪ್ಪಿನ ಸತ್ಯಾಗ್ರಹ ಎನ್ನುವುದು . ಬ್ರಿಟಿಷ್ ನಿರಂಕುಶವನ್ನು ಭಗ್ನಗೊಳಿಸಲು ಈ ಸತ್ಯಾಗ್ರಹ ಕೈಗೊಂಡರು ! ಈಗ ಗಾಂಧಿ ಸೆರೆಗೆ ತಳ್ಳಲ್ಪಟ್ಟರೂ ಚಳುವಳಿ ಅವ್ಯಾಹತವಾಗಿ ಮುಂದುವರಿಯಿತು . ದೇಶಾದ್ಯಂತ ಗಾಂಧಿಯ ಆಹಿಂಸಾತ್ಮಕ ಹೋರಾಟದ ಪ್ರಭಾವ ಇಂಗ್ಲೆಂಡಿನ ಕೆಲವು ಬುದ್ಧಿಜೀವಿಗಳ ಮೇಲಾಗಿ ಗಾಂಧಿಯವರು ಇಂಗ್ಲೆಂಡಿನ ರಾಜ ಮತ್ತು ರಾಣಿಯೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡಿದರು . ಬಂಕಿಂಗ್‌ಹ್ಯಾಮ್ ಅರಮನೆಯಲ್ಲಿ ಚರ್ಚೆ ನಡೆಯಿತು . ಗಾಂಧಿ ವೈಭವೋಪೇತ ಅರಮನೆ ಮತ್ತು ಅದರ ಪ್ರಭುತ್ವದದರು ತಾವು ಮಾತ್ರ ಹತ್ತಿ ದಿರಿಸು , ಶಾಲ್ , ಚಪ್ಪಲಿಯಲ್ಲೇ ಭಾಗವಹಿಸಿದ್ದು ಅದೆಷ್ಟು ಅಸಾಮಾನ್ಯವೆನಿಸಿದ ವೈದ್ಯಶ್ಯವಲ್ಲವೆ ?

         ಆಗಸ್ಟ್ 15 , 1947ರ ಮಧ್ಯರಾತ್ರಿ ಭಾರತ ಸ್ವಾತಂತ್ರ್ಯವಾಯಿತು . ಗಾಂಧಿಗೆ ಅಂದು 75ವಯಸ್ಸು ತುಂಬಿತ್ತು . ಹಲವು ವರ್ಷಗಳ ಹೋರಾಟದ ಫಲ ದೇಹ ಝರ್ಜರಿಸಿತ್ತು . ಮೂಳೆ ಚಕ್ಕಳ ಬಿಟ್ಟು ಬೇರೇನೂ ಇರಲಿಲ್ಲ ದೇಹದಲ್ಲಿ ಬೊಚ್ಚು ಬಾಯಿ , ಬೊಕ್ಕು ತಲೆ , ಕನ್ನಡಕದಾರಿ ಗಾಂಧಿ ಈಗ . ಆದಾಗ್ಯೂ ಚೈತನ್ಯಕ್ಕೇನೂ ಕುಂದು ಇರಲಿಲ್ಲ . ಅವರ ಮೊಗದಿಂದ ಉತ್ಸಾಹದ ಬುಗ್ಗೆಯ ತರಂಗಗಳು ಸದಾ ಏಳುತ್ತಿದ್ದವು . ಸಮಯ , ಸಂದರ್ಭದಲ್ಲಿ ಅದ್ಭುತ ಸಾಮರ್ಥ್ಯ ಹೊರಸೂಸುತ್ತಿತ್ತು . ಒಂಟಿಯಾಗಿ ಆಲಸಿಯಾಗಿ ಕಾಲ ನೂಕಿದವರೇ ಅಲ್ಲ ; ದಿನನಿತ್ಯದ ಮನೆ ಕೆಲಸಗಳನ್ನು ತಾನೇ ಮಾಡುತ್ತಿದ್ದರು . ಸದಾ ಚರಕದ ಮೇಲೆ ನೂಲುತ್ತ ಸಹಸ್ರಾರು ದೇಶವಾಸಿಗಳೊಂದಿಗೆ ಸಂಭಾಷಿಸುತ್ತ ಇದ್ದರು . ಒಮ್ಮೊಮ್ಮೆ ಮಾತನಾಡಲು ನಿಶ್ಯಕ್ತತೆ ಎನಿಸಿದರೆ , ಜನರೆದರು ದಿವ್ಯ ಮೌನವಹಿಸಿ ಕುಳಿತು ಬಿಡುತ್ತಿದ್ದರು . ಆ ದಿವ್ಯ ಮೌನವೇ ಎದುರಿದ್ದ ಜನರಿಗೆ ಅದಮ್ಯ ಚೇತನವನ್ನು ಪೌರುಷವನ್ನು ಧಾರ ಎರೆದು ಬಿಡುತ್ತಿತ್ತು . ಗಾಂಧಿಯವರ ತೃಪ್ತಿ ಅಲ್ಪಕಾಲದ್ದಾಗಿತ್ತು . ಜನವರಿ 30 , 1948 ಗಾಂಧಿ ಮತಾಂಧ ಹಿಂದೂವೋರ್ವನಿಂದ ಕೊಲ್ಲಲ್ಪಟ್ಟರು .

           ಸ್ವಯಾಂಮಾಡಳಿತದ ಮೂಲ ಅಂಶಗಳನ್ನು ಗಾಂಧಿ ಅರಿತಿದ್ದರು . ಅವೆಂದರೆ ವಾಕ್ ಸ್ವಾತಂತ್ರ್ಯ , ಕೂಟ ಸ್ವಾತಂತ್ರ್ಯ , ಪತ್ರಿಕಾ ಸ್ವಾತಂತ್ರ , ಈ ಸ್ವಾತಂತ್ರ್ಯಗಳನ್ನು ಅವರು " ಉಸಿರು , ಅನ್ನ ಮತ್ತು ನೀರು " ಎಂದಿದ್ದಾರೆ . 
ಅಂತಹ ಉದಾತ್ತ ಜೀವಿಯ ದೇಶದಲ್ಲಿ ಹುಟ್ಟಿದ್ದೇವೆ ಎನ್ನುವುದು ಹೆಮ್ಮೆಯ ವಿಚಾರವೇ ಸೈ!!!