SKSSF ಮೀಲಾದ್ ಕಾನ್ಫರೆನ್ಸ್, ನೂರೇ ಅಜ್ಮೀರ್, ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಅಶ್ರಫ್ ಫೈಝಿ ಕರೆ

newsline media kodagu ಸಿದ್ದಾಪುರ :- 2024 ಫೆಬ್ರವರಿ 02, 03, 04 ದಿನಾಂಕಗಳಲ್ಲಿ*ಸತ್ಯ,ಸಮತ್ವ, ಸಮರ್ಪಣೆ* ಎಂಬ ಧ್ಯೇಯ ವಾಕ್ಯದಡಿ  ಕೇರಳದ ಕಲ್ಲಿಕೋಟ...

Recent post

SKSSF ಮೀಲಾದ್ ಕಾನ್ಫರೆನ್ಸ್, ನೂರೇ ಅಜ್ಮೀರ್, ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಅಶ್ರಫ್ ಫೈಝಿ ಕರೆ

newsline media kodagu
ಸಿದ್ದಾಪುರ :-
2024 ಫೆಬ್ರವರಿ 02, 03, 04 ದಿನಾಂಕಗಳಲ್ಲಿ*ಸತ್ಯ,ಸಮತ್ವ, ಸಮರ್ಪಣೆ* ಎಂಬ ಧ್ಯೇಯ ವಾಕ್ಯದಡಿ  ಕೇರಳದ ಕಲ್ಲಿಕೋಟೆಯಲ್ಲಿ  SKSSF 35 ನೇ ವಾರ್ಷಿಕ ಐತಿಹಾಸಿಕ ಮಹಾ ಸಮ್ಮೇಳನವು ನಡೆಯಲಿದೆ. ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಒಕ್ಕೂಟವನ್ನು ಬಲಪಡಿಸುವುದು,ಹಾಗೂ ಪವಿತ್ರ  ಅಹ್ಲು ಸುನ್ನತ್ ವಲ್ ಜಮಾಅತ್ ಎಂಬ ಇಸ್ಲಾಮಿನ ನೈಜ ರೂಪವನ್ನು ಸಂರಕ್ಷಿಸುವುದು, ವಿದ್ಯಾರ್ಥಿಗಳಿಗೆ ಲೌಕಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸ ನೀಡುವುದರ ಮೂಲಕ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು, ವಿದ್ಯಾರ್ಥಿಗಳ ಹೃದಯದಲ್ಲಿ ದೇಶಪ್ರೇಮ, ಮಾನವೀಯತೆ, ವಿನಯ, ಸೇವಾಮನೋಭಾವಗಳನ್ನು ಬೆಳೆಸುವುದು, ಇವೆಲ್ಲವೂ SKSSF ಸಂಘಟನೆಯ ಗುರಿಯಾಗಿದ್ದು ಈಗಾಗಲೇ ವಿಜ್ಞಾನ ವಿನಯ ಸೇವೆ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಎಸ್ ಕೆ ಎಸ್ ಎಸ್ ಎಫ್ 35 ವರ್ಷ ಪೂರ್ತಿಕರಿಸಿ 35ನೇ ವಾರ್ಷಿಕ ಮಹಾಸಮ್ಮೇಳನವನ್ನು ಆಯೋಜಿಸುತ್ತಿರುವ ಶುಭ ಸಂದರ್ಭದಲ್ಲಿ ಪ್ರಸ್ತುತ ಸಮ್ಮೇಳನದ  ಪ್ರಚಾರಾರ್ಥ  ಇದೇ ಬರುವ ಅಕ್ಟೋಬರ್ 11 ಬುಧವಾರ SKSSF ಕೊಡಗು ಜಿಲ್ಲಾ ಸಮಿತಿಯು ಹಮ್ಮಿಕೊಂಡಿರುವ ನೂರೇ ಅಜ್ಮೀರ್ ಹಾಗೂ ಮೀಲಾದ್ ಕಾನ್ಫರೆನ್ಸ್, ಜಿಲ್ಲಾ ಸಮ್ಮೇಳನವನ್ನು ಕುಶಾಲನಗರದಲ್ಲಿ ಆಯೋಜಿಸಿದ್ದು  ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ಹಾಗೂ ಪೋಷಕ ಸಂಘಟನೆಗಳ ಸರ್ವ ಕಾರ್ಯಕರ್ತರೂ ಹಾಗೂ ಎಲ್ಲಾ ದೀನೀ ಸ್ನೇಹಿಗಳೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ SYS ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಎಂ ವೈ ಅಶ್ರಫ್ ಫೈಝಿ  ಕರೆ ನೀಡಿದ್ದಾರೆ.

*ಸರ್ವರ್ ಡೌನ್ ನಾಳೆ ಬನ್ನಿ!*

ವರದಿ : ನಿಯಾಝ್ ಕೊಡಗು
ಕೊಡಗು :-ರಾಜ್ಯ ಸರ್ಕಾರ ಬಹಳಷ್ಟು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ ಹಾಗೂ ಆ ಯೋಜನೆಗಳ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸಲು ಆನ್ಲೈನ್ ಆಯ್ಕೆಯನ್ನು ನೀಡಲಾಗಿದೆ.ಆಧಾರ್ ಅಪ್ಟೇಟಿನಿಂದ ಹಿಡಿದು ರೇಷನ್ ಕಾರ್ಡ್ ಅಪ್ಟೇಟ್, ಗ್ರೃಹಲಕ್ಷ್ಮಿ, ಗ್ರೃಹಜ್ಯೋತಿ ಯೋಜನೆಗೆ, ಆಧಾರ್ ಗೆ ಫೋನ್ ನಂಬರ್ ಜೋಡಿಸೋದು, ಬ್ಯಾಂಕ್ ಅಕೌಂಟಿಗೆ ಆಧಾರ್ ಜೋಡಿಸೋದು ಇಂತಹ ಬಹಳಷ್ಟು ಸರ್ಕಾರದ ಕಾರ್ಯಕ್ರಮಗಳಿಗೆ ಎಲ್ಲವೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ, ಇಂತಹ ಸಂದರ್ಭದಲ್ಲಿ ಬಹಳಷ್ಟು ಬಾರಿ ಕೇಳುವ ಶಬ್ದ *ಸರ್ವರ್ ಡೌನ್* ಆಗಿದೆ ಮತ್ತೆ ಬನ್ನಿ ಅಥವಾ ನಾಳೆ ಬನ್ನಿ.ಹಾಗಾದರೆ ಆಗಾಗ ಡೌನ್ ಆಗುವ ಈ ಸರ್ವರ್ ಎಂದರೇನು?!, ಕೋಟ್ಯಾಂತರ ಜನ ಉಪಯೋಗಿಸುವ ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಇನ್ನಿತರ ಅಪ್ಲಿಕೇಶನ್ಗಳ ಸರ್ವರ್ ಏನಿಕ್ಕೆ ಡೌನ್ ಆಗೋದಿಲ್ಲ?!.ಸರ್ವರ್ ಎಂದರೆ ಒಂದು ಕಂಪ್ಯೂಟರ್ ಅಥವಾ ಸಾಫ್ಟ್‌ವೇರ್ ಸಿಸ್ಟಂ ಯಾವುದೇ ನೆಟ್ವರ್ಕ್ ಮೂಲಕ ಇತರ ಕಂಪ್ಯೂಟರ್‌ಗಳಿಗೆ ಸೇವೆಗಳನ್ನು ಒದಗಿಸುವ ಕ್ಯಾಪ್ಯಾಬಿಲಿಟಿ ಹೊಂದಿರುವುದು. ಇದು ಇತರ ಕಂಪ್ಯೂಟರ್‌ಗಳಿಂದ ಬರುವ ವಿನಂತಿಗಳಿಗೆ ಉತ್ತರಗಳನ್ನು ನೀಡುತ್ತದೆ, ಅಥವಾ ಅವರ ಕೋರಿಕೆಗಳ ಡೇಟಾ ಅಥವಾ ಕ್ರಿಯೆಗಳನ್ನು ಒದಗಿಸುತ್ತದೆ. ಇದು ನೆಟ್ವರ್ಕ್‌ನಲ್ಲಿ ನೆಲೆಸಿರುವ ಹೊರಗಿನ ಕಂಪ್ಯೂಟರ್‌ಗಳ ಅನೇಕ ಆವಶ್ಯಕ ಸರ್ವಿಸ್‌ಗಳನ್ನು ನೋಡಿಕೊಳ್ಳುವ ಕೇಂದ್ರ.ಸರ್ವರ್‌ಗಳು ವೈವಿಧ್ಯಮಯ ಉದ್ದೇಶಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ವೆಬ್‌ಸರ್ವರ್‌ಗಳು ವೆಬ್‌ಪೇಜ್‌ಗಳನ್ನು ಬ್ರೌಸ್ ಮಾಡುವ ವಿನಂತಿಗೆ ವೆಬ್‌ಕಂಪ್ಯೂಟರ್‌ಗಳಿಗೆ ವಿನಂತಿಯನ್ನು ಒದಗಿಸುತ್ತದೆ. ಡೇಟಾಬೇಸ್ ಸರ್ವರ್‌ಗಳು ಡೇಟಾವನ್ನು ಸಂಗ್ರಹಿಸುವ ಮತ್ತು ಅದನ್ನು ಮೇಲಿನ ಕೇಂದ್ರಗಳಿಗೆ ಹಂಚಿಕೊಡುವ ಗುಣಮಟ್ಟ ಸರ್ವರ್‌ಗಳಾಗಿರುತ್ತವೆ. ಉದಾಹರಣೆಗೆ, ವೆಬ್‌ಆಪ್‌ಲಿಕೇಶನ್‌ಗಳು ಬೇಕಾದಾಗ ಡೇಟಾಬೇಸ್ ಸರ್ವರ್‌ಗಳನ್ನು ಬಳಸಿ ಡೇಟಾವನ್ನು ಸಂಗ್ರಹಿಸುವುದರ ಮೂಲಕ ಸಾವಿರಾರು ಬಳಕೆದಾರರಿಗೆ ಸಮಾನ ಸೇವೆಯನ್ನು ಒದಗಿಸುತ್ತವೆ. ಸರ್ವರ್‌ಗಳ ಪ್ರದರ್ಶನಕ್ಕೆ ಸ್ವತಂತ್ರವಾಗಿ ನೀಡಿದ ಸೇವೆಗಳು ವೆಬ್‌ಹೋಸ್ಟಿಂಗ್‌, ಡೇಟಾಬೇಸ್ ಹಾಗೂ ಆಪ್‌ಸರ್ವರ್‌ಗಳು ಆಗಬಹುದು.ಈ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಅದಕ್ಕೆ ತಕ್ಕುದಾದ ಹಾರ್ಡ್ವೇರ್ ಕಾನ್ಫೀಗರೇಷನ್ ಅವಶ್ಯಕತೆ ಇದೆ.ಉದಾಹರಣೆಗೆ ಸರ್ಕಾರದ ಅಧೀನದಲ್ಲಿರುವ ಬಹಳಷ್ಟು ಅಪ್ಲಿಕೇಶನ್ಗಳ ಹಾರ್ಡ್ವೇರ್ ಕಾನ್ಫೀಗರೇಷನ್ಗಳು ಒಂದು ಹತ್ತು ಸಾವಿರ ಯೂಸರ್ ಗಳು ಒಂದೇ ಸಮಯದಲ್ಲಿ ಉಪಯೋಗಿಸಬಹುದಂತಹ ಹಾರ್ಡ್ವೇರ್ ಅಳವಡಿಸಿಬರಹುದು.ಆದರೆ ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಆನ್ಲೈನ್ ಮೂಲಕ ಮಾಡುವ ವ್ಯವಸ್ಥೆ ಬಂದಿರುವುದರಿಂದ ಸರ್ಕಾರ ಈ ಎಲ್ಲಾ ಸಿಸ್ಟಂಗಳ ಹಾರ್ಡ್ವೇರ್ಗಳನ್ನು ಅಪ್ರೇಡ್ ಮಾಡಬೇಕಾಗುತ್ತದೆ, ರಾಜ್ಯದಲ್ಲಿ ಸರ್ಕಾರಿ ಅಪ್ಲಿಕೇಶನ್ಗಳ ಯೂಸರ್ ಗಳು ಸಂಖ್ಯೆ ಸಾವಿರದಿಂದ ದಾಟಿ ಲಕ್ಷ ದಾಟಿ ಕೋಟಿ ಸಮೀಪ ಬಂದಿರಬಹುದು.ಸರ್ಕಾರ ಬಜೆಟ್ ನಲ್ಲಿ ಈ ಹಾರ್ಡ್ವೇರ್ ಅಪ್ಗ್ರೇಡ್ಗೆ ಬೇಕಾದ ಬಜೆಟ್ ಅನ್ನು ಮೀಸಲಿಡಬೇಕು, ಹಾಗೂ ಹೊರಗುತ್ತಿಗೆ ಕೊಡುವುದಾದರೆ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುವ ಕಂಪೆನಿಗಳಿಗೆ ನೀಡಬೇಕು.ಇಡೀ ವಿಶ್ವಕ್ಕೆ ಸಾಫ್ಟ್ವೇರ್ ರಫ್ತು ಮಾಡುವ ನಮ್ಮ ರಾಜ್ಯದಿಂದ ರಾಜ್ಯದ ಜನತೆ ಇನ್ನೂ ಉತ್ತಮ ಸೇವೆಯನ್ನು ನಿರೀಕ್ಷಿಸುತ್ತದೆ.ಲಕ್ಷಾಂತರ ಕೋಟಿ ರೂಪಾಯಿ ಬಜೆಟ್ನಲ್ಲಿ ಕಾಲಕಾಲಕ್ಕೆ ಟೆಕ್ನಾಲಜಿ ಅಪ್ಗ್ರೇಡ್ಗೆ ಒಂದು ಮೊತ್ತವನ್ನು ಮೀಸಲಿಡಬೇಕಾಗುತ್ತದೆ, ಇದರಿಂದ ಸರ್ಕಾರ ಹಾಗೂ ಜನರ ಮದ್ಯದ ಬಾಂಧವ್ಯ ಇನ್ನೂ ಉತ್ತಮವಾಗುತ್ತದೆ.ಅತೀ ಶೀಘ್ರದಲ್ಲಿ ಸರ್ವರ್ ಡೌನ್ ಮುಕ್ತ, ನಾಳೆ ಬನ್ನಿ ಮುಕ್ತ ರಾಜ್ಯವಾಗಲಿ.✍🏻 

ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ

Mubarak newsline
ವಿರಾಜಪೇಟೆ : ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ಅಂತರರಾಷ್ಟ್ರೀಯ ರಗ್ಬಿ ಆಟಗಾರ, ಪ್ರಗತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಾದಂಡ ತಿಮ್ಮಯ್ಯ ಹೇಳಿದರು.

ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸನ್ಮಾನಗಳು ಸ್ಪೂರ್ತಿಯಾಗಲಿದ್ದು, ಸಾಧನೆಗೆ ಸಿಗುವ ಸನ್ಮಾನಗಳು ಸದಾ ನೆನಪಿನಲ್ಲಿ ಉಳಿಯಲಿದೆ. ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಮಾತನಾಡಿ, ಜಿಲ್ಲೆಯ ತಾಲ್ಲೂಕು ಸಂಘಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿಯಾಗಿದೆ. ಸಂಘದ ಸದಸ್ಯರ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.
ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ವರದಿಗೆ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿರುವುದರಿಂದ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.
ತಾಲ್ಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಎ ಟು ಜಡ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಡಾ. ಹೇಮಂತ್ ಲೆಕ್ಕ ಪತ್ರ ಮಂಡಿಸಿದರು. 
 ವಾರ್ಷಿಕ ಪ್ರಶಸ್ತಿ ಪ್ರಧಾನ: ವಿರಾಜಪೇಟೆ ಕ್ಷೇತ್ರದ ಶಾಸಕಾರದ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಮಾಲ್ದಾರೆ ಶಾಲಾ ಮಕ್ಕಳಿಗಿಲ್ಲ ಆಟದ ಮೈದಾನ" ವರದಿಗೆ ಎ.ಎನ್ ವಾಸು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಪ್ರಯೋಗಶೀಲ ಕೃಷಿಕ ಬಿ.ಎಸ್ ನಾರಾಯಣ್ ರಾವ್" ವರದಿಗೆ ರಜಿತಾ ಕಾರ್ಯಪ್ಪ, ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ದಿಗ್ಬಂಧನಕ್ಕೆ ಒಳಗಾಗಿರುವ ಕುಟುಂಬಕ್ಕೆ ಇನ್ನೂ ದೊರೆತಿಲ್ಲ ನ್ಯಾಯ" ವರದಿಗೆ ಪುತ್ತಂ ಪ್ರದೀಪ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ "ಸಾರ್ವಜನಿಕರಿಗೆ ತಲೆನೋವಾಗಿದ್ದ ಪುಂಡಾನೆ ಸೆರೆ" ವರದಿಗೆ ಆರ್. ಸುಬ್ರಮಣಿ ಮತ್ತು ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕರಾದ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿಗೆ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ "ಶಿಕ್ಷಣದಿಂದ ದೂರು ಉಳಿದ ವಲಸೆ ಕಾರ್ಮಿಕರ ಮಕ್ಕಳು" ವರದಿಗೆ ಎಂ.ಎ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಪ್ರತಿಭಾ ಪುರಸ್ಕಾರ: ಸಂಘದ ಸದಸ್ಯರಾದ ಕೃಷ್ಣ ಅವರ ಮಕ್ಕಳಾದ ಜೀಶ್ಮ ಎಂ.ಕೆ, ಜಸ್ಮಿತಾ ಎಂ.ಕೆ, ರಜಿತ ಕಾರ್ಯಪ್ಪ ಅವರ ಮಗಳು ಕೆ.ಈಶಾನ್ವಿ, ಎ.ಎನ್ ವಾಸು ಅವರ ಮಗಳು ಸಮೃದ್ಧಿ ಎ.ವಿ, ಗಿರೀಶ್ ವಿ.ಕೆ ಅವರ ಮಗ ಅಗಿಲ್ ವಿ.ಜಿ, ಸುನಿಲ್ ಕೆ.ಎಸ್ ಅವರ ಮಗ ರೆನಿಲ್ ಕೆ.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಸಂಘದ ಕೋಶಾಧಿಕಾರಿ ಆನಂದ್, ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್ ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ನಿರ್ದೇಶಕರಾದ ಡಿ. ಮಂಜುನಾಥ್ ಮತ್ತಿತರರು ಇದ್ದರು.

ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ರವಿಕುಮಾರ್ ನಿರೂಪಿಸಿ, ಡಾ. ಹೇಮಂತ್ ವಂದಿಸಿದರು.

.ವಿರಾಜಪೇಟೆ : ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ಅಂತರರಾಷ್ಟ್ರೀಯ ರಗ್ಬಿ ಆಟಗಾರ, ಪ್ರಗತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಾದಂತ ತಿಮ್ಮಯ್ಯ ಹೇಳಿದರು.ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸನ್ಮಾನಗಳು ಸ್ಪೂರ್ತಿಯಾಗಲಿದ್ದು, ಸಾಧನೆಗೆ ಸಿಗುವ ಸನ್ಮಾನಗಳು ಸದಾ ನೆನಪಿನಲ್ಲಿ ಉಳಿಯಲಿದೆ. ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು.ಜಿಲ್ಲಾ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಮಾತನಾಡಿ, ಜಿಲ್ಲೆಯ ತಾಲ್ಲೂಕು ಸಂಘಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿಯಾಗಿದೆ. ಸಂಘದ ಸದಸ್ಯರ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಅತ್ಯುತ್ತಮ ವರದಿಗೆ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿರುವುದರಿಂದ ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.ತಾಲ್ಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಎ ಟು ಜಡ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಡಾ. ಹೇಮಂತ್ ಲೆಕ್ಕ ಪತ್ರ ಮಂಡಿಸಿದರು. ವಾರ್ಷಿಕ ಪ್ರಶಸ್ತಿ ಪ್ರಧಾನ: ವಿರಾಜಪೇಟೆ ಕ್ಷೇತ್ರದ ಶಾಸಕಾರದ ಎ.ಎಸ್ ಪೊನ್ನಣ್ಣ ಅವರು ತಮ್ಮ ತಂದೆ ದಿವಂಗತ ಎ.ಕೆ ಸುಬ್ಬಯ್ಯ ಹಾಗೂ ತಾಯಿ ದಿವಂಗತ ಎ.ಎಸ್ ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ಮಾಲ್ದಾರೆ ಶಾಲಾ ಮಕ್ಕಳಿಗಿಲ್ಲ ಆಟದ ಮೈದಾನ" ವರದಿಗೆ ಎ.ಎನ್ ವಾಸು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್ ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ದಿವಂಗತ ಬಿ.ಎಸ್ ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಪ್ರಯೋಗಶೀಲ ಕೃಷಿಕ ಬಿ.ಎಸ್ ನಾರಾಯಣ್ ರಾವ್" ವರದಿಗೆ ರಜಿತಾ ಕಾರ್ಯಪ್ಪ, ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು ಅಬ್ದುಲ್ ಮಜೀದ್ ಅವರು ತಮ್ಮ ತಂದೆ ದಿವಂಗತ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ "ದಿಗ್ಬಂಧನಕ್ಕೆ ಒಳಗಾಗಿರುವ ಕುಟುಂಬಕ್ಕೆ ಇನ್ನೂ ದೊರೆತಿಲ್ಲ ನ್ಯಾಯ" ವರದಿಗೆ ಪುತ್ತಂ ಪ್ರದೀಪ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ದಿವಂಗತ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ "ಸಾರ್ವಜನಿಕರಿಗೆ ತಲೆನೋವಾಗಿದ್ದ ಪುಂಡಾನೆ ಸೆರೆ" ವರದಿಗೆ ಆರ್. ಸುಬ್ರಮಣಿ ಮತ್ತು ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕರಾದ ಮಾದಂಡ ತಿಮ್ಮಯ್ಯ ಅವರು ತಮ್ಮ ತಾಯಿ ದಿವಂಗತ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿಗೆ ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ "ಶಿಕ್ಷಣದಿಂದ ದೂರು ಉಳಿದ ವಲಸೆ ಕಾರ್ಮಿಕರ ಮಕ್ಕಳು" ವರದಿಗೆ ಎಂ.ಎ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ: ಸಂಘದ ಸದಸ್ಯರಾದ ಕೃಷ್ಣ ಅವರ ಮಕ್ಕಳಾದ ಜೀಶ್ಮ ಎಂ.ಕೆ, ಜಸ್ಮಿತಾ ಎಂ.ಕೆ, ರಜಿತ ಕಾರ್ಯಪ್ಪ ಅವರ ಮಗಳು ಕೆ.ಈಶಾನ್ವಿ, ಎ.ಎನ್ ವಾಸು ಅವರ ಮಗಳು ಸಮೃದ್ಧಿ ಎ.ವಿ, ಗಿರೀಶ್ ವಿ.ಕೆ ಅವರ ಮಗ ಅಗಿಲ್ ವಿ.ಜಿ, ಸುನಿಲ್ ಕೆ.ಎಸ್ ಅವರ ಮಗ ರೆನಿಲ್ ಕೆ.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಜಿಲ್ಲಾ ಸಂಘದ ಕೋಶಾಧಿಕಾರಿ ಆನಂದ್, ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್ ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕರಾದ ಕೋಲತಂಡ ರಘು ಮಾಚಯ್ಯ, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ನಿರ್ದೇಶಕರಾದ ಡಿ. ಮಂಜುನಾಥ್ ಮತ್ತಿತರರು ಇದ್ದರು.ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ರವಿಕುಮಾರ್ ನಿರೂಪಿಸಿ, ಡಾ. ಹೇಮಂತ್ ವಂದಿಸಿದರು.

ಶಾರ್ಜಾದಲ್ಲಿ ನಡೆದ ಕೂರ್ಗ್ ಈದ್ ಕ್ರಿಕೆಟ್ ಪಂದ್ಯಾವಳಿ.ಬುಗಾಂಬೊ ಎಫ್ ಸಿ ತಂಡ ಚಾಂಪಿಯನ್ಸ್

*Mubarak Newsline Media*
ಸಿದ್ದಾಪುರ:-ದುಬೈ  ಉದ್ಯೋಗಿಗಳಾಗಿ ನೆಲೆಸಿರುವ  ಕೊಡಗು ಜಿಲ್ಲೆಯ ಯುವಕರು ಒಗ್ಗೂಡಿ ರಂಜಾನ್ ಹಬ್ಬದ ಅಂಗವಾಗಿ ಈದ್ ಮೀಟ್  ಕ್ರಿಕೆಟ್ ಪಂದ್ಯಾವಳಿಯನ್ನ ಶಾರ್ಜಾ ಸ್ಕೈಲೈನ್ ಯುನಿವರ್ಸಿಟಿ ಕಾಲೇಜ್ ಮೈದಾನದಲ್ಲಿ ಅಯೋಜಿಸಲಾಗಿತ್ತು. ದುಬೈ ಯು ಅಂಡ್ ಐ  ಕಂಪನಿಯ ಮುಖ್ಯಸ್ಥಮೈಸೂರು ಅಬ್ದುಲ್ ಖಾದರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಉದ್ಯೋಗ ನಿಮಿತ್ತ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಯುವ ಕ್ರೀಡಾಪಟುಗಳನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವಲ್ಲಿಕ್ರಿಕೆಟ್ ಪಂದ್ಯಾವಳಿ ಆಯೋಜಕರ ಕ್ರೀಡಾಭಿಮಾನದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ದುಶ್ಚಟಗಳಿಂದ ದೂರವಿದ್ದು ಉದ್ಯೋಗದ ಮೂಲಕ ಭವಿಷ್ಯ ರೂಪಿಸಿಕೊಂಡು ಕ್ರೀಡೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.ದುಬೈ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಕೊಡಗಿನ ಕ್ರೀಡಾಪಟುಗಳಿಗೆ ಮುಕ್ತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿ ಸುಮಾರು9 ತಂಡಗಳು ಭಾಗವಹಿಸಿದ್ದವು ಅಂತಿಮ ರೋಮಾಂಚನಕಾರಿ ಪಂದ್ಯಾಟದಲ್ಲಿ ಚಾಮಿಯಾಲ ಸಿ ವೈ ಸಿ ತಂಡವನ್ನು ಮಣಿಸಿ  ನೂರುದ್ದೀನ್ ನಾಯಕತ್ವದ  ಬುಗಾಂಬೊ  ಎಫ್ ಸಿ ತಂಡ  ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಪ್ರಥಮ ನಗದು ಪ್ರಶಸ್ತಿ ಬಹುಮಾನ ಪಡೆದುಕೊಂಡಿತು.ಕಲೀಲ್ ನಾಯಕತ್ವದಚಾಮಿಯಾಲ ಸಿ ವೈ ಸಿ ತಂಡ ದ್ವಿತೀಯ ಸ್ಥಾನದೊಂದಿಗೆ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಪಂದ್ಯಾಟದಲ್ಲಿಬುಗಾಂಬೊ ಎಫ್ ಸಿ ತಂಡದ  ಆಟಗಾರ ವಿರಾಜಪೇಟೆ  ನೂರುದ್ದೀನ್ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ,ಹೈಯೆಸ್ಟ್ ಸಿಕ್ಸರ್, ಮ್ಯಾನ್ ಆಫ್ ದಿ ಸೀರಿಯಸ್  ಪ್ರಶಸ್ತಿಯನ್ನುತಮ್ಮದಾಗಿಸಿಕೊಂಡರು.ಸಿ ವೈ ಸಿ ಚಾಮಿಯಾಲ ತಂಡದ ಜಿಯಾ ಉತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ,ಚಾಮಿಯಲ ತಂಡದ ಇರ್ಫಾನ್  ಕುವಾಲೆ ಬೆಸ್ಟ್ ಕ್ಯಾಚರ್ ಪ್ರಶಸ್ತಿ,ಬುಗಾಂಬೊ ಎಫ್ ಸಿ ತಂಡದ ನೌಶಿರ್ ಉತ್ತಮ ಫೀಲ್ಡರ್ ಪ್ರಶಸ್ತಿ,ಸೈದು  ಉತ್ತಮ ಬೌಲರ್ ಪ್ರಶಸ್ತಿ ಪಡೆದುಕೊಂಡರು.ಪಂದ್ಯಾವಳಿಯಲ್ಲಿಸಾಗರ್ ಫ್ರೆಂಡ್ಸ್, ಅಯ್ಯಂಗೇರಿ ಫ್ರೆಂಡ್ಸ್, ಆರ್ ವೈ ಸಿ ಎಮ್ಮೆ ಮಾಡು, ಫೋರ್ ಸ್ಟಾರ್ ಎಡಪಲ, ಕೆ ವೈ ಸಿ ಸಿ ಕಡಂಗ, ಕೊಂಡಂಗೇರಿ ಫ್ರೆಂಡ್ಸ್, ಜಾವಾ ಲೆಗೆಂಡ್ ಸುಂಟಿಕೊಪ್ಪ ತಂಡಗಳು ಭಾಗವಹಿಸಿದ್ದವು.ಸಮಾರಂಭ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತುಕ್ರಿಕೆಟ್ ಪಂದ್ಯಾವಳಿ ಆಯೋಜಕರಾದ ನಿಶಾಬ್ ನೆಲ್ಲಿಹುದಿಕೆರಿ , ದಿಲ್ಶಾನ್ ನಾಪೋಕ್ಲು,ಸೈಯದ್ ಗುಂಡಿಗೆರೆ,ನೂರುದ್ದೀನ್ ಕಲ್ಲುಬಾಣೆ,ಪ್ರಮುಖರಾದ ಕುಂಡಂಡ ರಪೀಕ್ ಕುಂಜಿಲ ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೆಲ್ಯಹುದಿಕೇರಿ ಕೆ.ಎಂ ಬಸೀರ್ ಆಯ್ಕೆ.

ಸಿದ್ದಾಪುರ: , ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಬಲ ಪಡಿಸುವುದರೊಂದಿಗೆ ಜಿಲ್ಲಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹೆಚ್ಚುವರಿ ಪದಾಧಿಕಾರಿಗಳ ನೇಮಕವನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶದ ಮೇರೆಗೆ  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಅವರ ಕೋರಿಕೆಯಂತೆ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ  ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ  ಅಹಮ್ಮದ್ ಆದೇಶ ಹೊರಡಿಸಿದ್ದಾರೆ.ನೆಲ್ಯಹುದಿಕೇರಿಯ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ ಬಸೀರ್ ಅವರನ್ನ ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಅಯ್ಕೆ ಮಾಡಿದ್ದಾರೆ.
ಕೆ.ಎಂ ಬಸೀರ್ ಅವರನ್ನ ಅಯ್ಕೆ ಮಾಡಿರುವುದಕ್ಕೆ ನೆಲ್ಯಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗಿಸ್  ಕಾಂಗ್ರೆಸ್ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ

ಮಹಿಳಾ ಸಾಧಕಿಯರಿಗೆ ಸನ್ಮಾನ ಗೌರವ

newsline media 
ಸಿದ್ದಾಪುರ :-  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು  ಮಹಿಳಾ ಸಾಧಿಕಿಯರಿಗೆ ಹೊದ್ದೂರು ಕಬಡಕೇರಿ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.
 ಅಂಗನವಾಡಿ ಬಾಲ ವಿಕಾಸ ಸಮಿತಿ, ಹಿಂದೂ ರುದ್ರ ಭೂಮಿ ಸೇವಾ ಸಮಿತಿ, ಧರ್ಮಸ್ಥಳ ಸ್ವಸಹಾಯ    ಸಹಕಾರ ಸಂಘದ    ವತಿಯಿಂದ 
 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ವಿಜೇತ ಎಂ. ಈ ತಂಸೀನ್ ಬಾನು, ಡಾಕ್ಟರೇಟ್ ಪದವಿ ಪಡೆದ ಚೆಟ್ಟಿಮಾಡ ಡಾ.ಪೂಜಾಶ್ರೀ, ಆಶಾ ಕಾರ್ಯಕರ್ತೆ ಮುಮ್ತಾಜ್ , ಅಂಗನವಾಡಿ ಸಹಾಯಕಿ ಬಿ.ಜಿ ಪ್ರೇಮ,ಬಾಲವಿಕಾಶ ಸಮಿತಿ ಅಧ್ಯಕ್ಷೆ  ಹಂಸಾವತಿ ಅವರನ್ನ ಮಹಿಳಾ ದಿನಾಚರಣೆ ಅಂಗವಾಗಿ  ಸನ್ಮಾನಿಸಿ ಗೌರವಿಸಲಾಯಿತು.  ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಕುಸುಮಾವತಿ  ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶರಸು, ಹಿಂದೂ ರುದ್ರ ಭೂಮಿ ಸೇವಾ ಸಮಿತಿ  ಅಧ್ಯಕ್ಷ  ಸತೀಶ್,ಜ್ಞಾನ ಜ್ಯೋತಿ ವಿಧ್ಯಾ ಸಂಸ್ಥೆಯ  ಶಿಕ್ಷಕಿ ಸ್ಮಿತಾ,ಮಹಿಳಾ ಸಮಾಜದ ಉಪಾಧ್ಯಕ್ಷೆ ರುಕ್ಮಣಿ,ಧರ್ಮಸ್ಥಳ ಸಂಘದ  ಸೇವಾ ಪ್ರತಿನಿಧಿ ಕಾವೇರಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಜಲಜಾಕ್ಷಿ ಪ್ರಮುಖರಾದ ಅನಿತಾ ಅಪ್ಪಣ್ಣ, ಕುಮಾರ ಪ್ರಸಾದ್,  ಚೌರಿರ ಸಲೀನ ಜಗತ್, ಸುದರ್ಸಿ ಜಗತ್,ಸುರೇಶ್,ನಿವ್ಯ ಕುಮಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬಹುಮಾನ ವಿತರಿಸಿದರು.

ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಎಚ್ಚೆತ್ತುಕೊಳ್ಳಲಿ :ಮೂಕೊಂಡ ವಿಜು ಸುಬ್ರಮಣಿ

newsline media 
ಸಿದ್ದಾಪುರ: ಹೋರ  ರಾಜ್ಯದ ಕಾರ್ಮಿಕರ ವಿರುದ್ಧಪೊಲೀಸರು ಹಾಗೂ ಬೆಳೆಗಾರರು ಎಚ್ಚೆತ್ತುಕೊಳ್ಳಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ವಿಜು ಸುಬ್ರಮಣೆ ಮನವಿ ಮಾಡಿದ್ದಾರೆ.ದಕ್ಷಿಣ ಕೊಡಗಿನಲ್ಲಿ ನಡೆದ ಮಹಿಳೆಯ ಮೇಲೆ ಕೊಲೆಯತ್ನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಹಲವು ಘಟನೆಗಳು ನಡೆದಿದ್ದು ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಂದಲೇ  ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಕಾರ್ಮಿಕರ ಸಮಸ್ಯೆ ಇದೆ ಎಂಬ ಕಾರಣಕ್ಕೆ ಸೂಕ್ತ ದಾಖಲಾತಿ ಹೊಂದದ ಕಾರ್ಮಿಕರನ್ನು  ಕೆಲಸಕ್ಕೆ ಸೇರಿಸುವಕೊಳ್ಳುವ ಮುನ್ನ ಪೂರ್ಣ ಮಾಹಿತಿ ಪರಿಶೀಲಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಂತಹ ಕಾರ್ಮಿಕರ ಮೇಲೆ ನಿಗ ವಹಿಸಬೇಕಾಗಿದೆ. ಪೋಲಿಸ್ ಇಲಾಖೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಬಗ್ಗೆ ಮಾಹಿತಿ ನೀಡಲು  ಬೆಳೆಗಾರರಲ್ಲಿ ಹಲವು ಭಾರಿ ಮನವಿ ಮಾಡಿದ್ದರು ಕೆಲವು ಬೆಳಗಾರರು   ನಿಯಮ ಪಾಲನೆ ಮಾಡದೆ ಅಸಹಾಯಕತೆ ತೋರುವುದು ಸರಿಯಲ್ಲ. ಅಂತಹ ಕಾರ್ಮಿಕರಿಂದ ದುಷ್ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ  ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಂದ  ಕಳವು, ಅತ್ಯಾಚಾರ, ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು ಬೆಳಗಾರರು  ಅಪಾಯಕಾರಿ ಸನ್ನಿವೇಶದಲ್ಲಿ ಜೀವನ ನಡೆಸುವಂತಾಗಿದೆ.ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಕಾರ್ಮಿಕರು ಹೆಸರು ಬದಲಾವಣೆ ಮಾಡಿ ನಕಲಿ ದಾಖಲಾತಿಗಳನ್ನು ನೀಡಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದುಅಂಥವರ ಬಗ್ಗೆ ಹೆಚ್ಚಿನ ನಿಗ ವಹಿಸಬೇಕಾಗಿದೆ ಅಪರಾಧ ಪ್ರಕರಣಗಳಲ್ಲಿ  ಭಾಗಿಯಾಗುವ ಕಾರ್ಮಿಕರ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ.


ಏ 2-3ರಂದು ನೆಲ್ಯಹುದಿಕೇರಿಯಲ್ಲಿ ಮುಕ್ತ ಕ್ಯಾರಂ ಪಂದ್ಯಾಟಕ್ಕೆ ಸಿದ್ದತೆ.

Newsline media 
ಏ 2-3ರಂದು ನೆಲ್ಯಹುದಿಕೇರಿಯಲ್ಲಿ ಮುಕ್ತ   ಕ್ಯಾರಂ  ಪಂದ್ಯಾಟಕ್ಕೆ ಸಿದ್ದತೆ.

ಸಿದ್ದಾಪುರ :-ಕೂರ್ಗ್  ಸ್ಟಾರ್ ವತಿಯಿಂದ ಏ 2ಮತ್ತು 3 ರಂದು ನೆಲ್ಯಹುದಿಕೇರಿಯ ವಿ  ಎಸ್ ಎಸ್ ಎನ್  ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೂರ್ಗ್ ಸ್ಟಾರ್ಸ್ ಯೂಟ್ಯೂಬ್ ಚಾನೆಲ್ ಪ್ರಮುಖ ಅಜಿತ್ ತಿಳಿಸಿದ್ದಾರೆ.
ಕ್ಯಾರಂ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಇಲ್ಲದೆ ಕ್ರೀಡೆಯಿಂದ ವಂಚಿತರಾಗುತ್ತಿದ್ದು  
ಸಾಮಾಜಿಕ ಜಾಲತಾಣಗಳ ಮೂಲಕ
ಕ್ಯಾರಂ ಆಟ ಆಡುತ್ತಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಕ್ಯಾರಂ ಕ್ರೀಡಾಪಟುಗಳಿದ್ದು ಅವರ ಪ್ರತಿಭೆಯನ್ನ ಗುರುತಿಸಲು  ಕ್ಯಾರಂ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
 ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ  ಪಂದ್ಯಾವಳಿಯಾಗಿದ್ದು
ಸಿಂಗಲ್ಸ್ ಪ್ರಥಮ ಬಹುಮಾನ 4999. ಮತ್ತು ಟ್ರೋಫಿ, ದ್ವಿತೀಯ ಬಹುಮಾನ2499. ಮತ್ತು ಟ್ರೋಫಿ, 
ಡಬಲ್ಸ್ ಪ್ರಥಮ ಬಹುಮಾನ9999 ಮತ್ತು ಟ್ರೋಫಿ, ದ್ವಿತೀಯ ಬಹುಮಾನ4999 ಮತ್ತು ಟ್ರೋಫಿ ನೀಡಲಾಗುವುದು.ಆಸಕ್ತ ತಂಡಗಳು ಮಾರ್ಚ್  26ರೊಳಗೆ ಹೆಸರುಗಳನ್ನು7204577605ಗೆ  ನೋಂದಾಯಿಸಿಕೊಳ್ಳ ಬಹುದಾಗಿದೆ.

ಇತಿಹಾಸ ಪ್ರಸಿದ್ದ ಪಾಲಿಬೆಟ್ಟ ಉರೂಸ್ ಗೆ ಚಾಲನೆ

NEWSLINE@MEDIA
ಸಿದ್ದಾಪುರ :- ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಗೆ ಪಾಲಿಬೆಟ್ಟದಲ್ಲಿ ಗಣ್ಯರು ಚಾಲನೆ ನೀಡಿದ್ದಾರೆ. ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ಬಾಂಧವರು ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಧಾರ್ಮಿಕ ಪಂಡಿತ  ಸಯ್ಯದ್‌ ಮೆಹರೂಫ್‌ ಅಲ್ ಜಫ್ರಿ ತಂಗಳ್ ದುಆ ನೇತೃತ್ವದೊಂದಿಗೆ   ಪಾಲಿಬೆಟ್ಟ ಜುಮಾ ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಪಂಡಿತಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್  ದಿಕ್ರ್ ದುವಾ  ಮಜ್ಲೀಸ್  ನೇತೃತ್ವ ವಹಿಸಿದ್ದರು.ತಾರಿಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ ಅಲಿ, ಪಾಲಿಬೆಟ್ಟ ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ  ಸೈನುದ್ದಿನ್, ಪ್ರಧಾನ ಕಾರ್ಯದರ್ಶಿ  ಸಮೀರ್ ಮುನ್ನ, ಕಾರ್ಯದರ್ಶಿ ಎ.ಸಿ ಸಮೀರ್, ಸಹಕಾರಿದರ್ಶಿ ಮುನೀರ್,ಖಜಾಂಜಿ ಮುಸ್ತಫ, ಉರೂಸ್ ಸಮಿತಿಯ ಪ್ರಮುಖರಾದ ಸಿ.ಎಚ್  ಫಯಾಜ್ ಅಹ್ಮದ್,ಖಾದರ್ ಸಮಿತಿಯ ಸದಸ್ಯರುಗಳಾದ  ಫಜಲ್ ,ಮುನೀರ್, ಪೈಸೆಲ್, ಬಸೀರ್, ಎರ್ಮು ,ಅಬ್ದುಲ್ ರಝಾಕ್, ಮಾಜಿ ಅಧ್ಯಕ್ಷರುಗಳಾದ ಅಬೂಬಕ್ಕರ್, ಜಬ್ಬಾರ್, ಹಾರಿಸ್ ಹಾಜಿ.ಸೇರಿದಂತೆ ಸಮಿತಿಯ ಪ್ರಮುಖರು ಗ್ರಾಮಸ್ಥರು ಪಾಲ್ಗೊಂಡಿದ್ದರು.ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳು  ಫೆ 4 ರಂದು ರಾತ್ರಿ  ಧಾರ್ಮಿಕ ಪಂಡಿತ ಆಫೀಜ್ ಜುನೈದು ಜೌಹರಿ ಅಲ್ ಅಝರಿ ಪ್ರಭಾಷಣ ಮಾಡಲಿದ್ದಾರೆ.ಫೆ 5 ರಂದು ರಾತ್ರಿ  ಅಬ್ದುಲ್ಲ ಸಲೀಂ ವಾಫಿ ಅಂಬಲಕಂಡಿ ಅವರಿಂದ ಮತ ಪ್ರವಚನ  ಹಾಗೂ ಫೆ 6 ರಂದು ಸಂಜೆ 7-00 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದುಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ,ಪಾಲಿಬೆಟ್ಟ  ಲೂರ್ಡ್ಸ್ ಚರ್ಚ್ ರ ಫಾ. ಮರಿಯಾ ರಾಜ್ ಜಾರ್ಜ್, ಕಕ್ಕಿಂಜೆ ಅಬ್ದುಲ್ ರಶೀದ್‌ ಝೈನಿ ಕಾಮಿಲ್ ಸಖಾಫಿ, ಕೊಡಗು ಜಿಲ್ಲಾ ಖಾಝಿಗಳಾದ ಶಾದುಲಿ ಪೈಝಿ,ಎಂ.ಎಂ ಅಬ್ದುಲ್ ಪೈಝಿ ಸೇರಿದಂತೆ ದಾರ್ಮಿಕ ಪಂಡಿತರು,ದರ್ಮಗುರುಗಳು,ಸಮಾಜಸೇವಕರು,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಫೆ 6ರಂದು ಸಂಜೆ 6.30ಗಂಟೆಯಿಂದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ  ಸಮೀರ್ ಮುನ್ನ ತಿಳಿಸಿದ್ದಾರೆ.

ಗೀತಾ ನಾಯ್ಡುರವರಿಗೆ ರಾಜ್ಯ ಸದ್ಭಾವನಾ ಪ್ರಶಸ್ತಿ

newsline media
ಕೊಡಗು:- 
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ , ಬೆಂಗಳೂರು ಇವರ ವತಿಯಿಂದ ಆಯೋಜಿಸಿದ್ದ, ಬಿಜಾಪುರದ ಮುದ್ದೇಬಿಹಾಳದಲ್ಲಿ ನಡೆದ ಸ್ವಾಮಿ ವಿವೇಕಾನಂದ 160 ನೇ ಜಯಂತೋತ್ಸವದ ಪ್ರಯುಕ್ತ , 2022-23 ನೇ ಸಾಲಿನ ರಾಜ್ಯ ಮಟ್ಟದ *ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ* ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ಸಾಯಿಶಂಕರ ವಿದ್ಯಾಸಂಸ್ಥೆ ಪೊನ್ನಂಪೇಟೆಯ ಪ್ರಾಂಶುಪಾಲೆ ಗೀತಾ ನಾಯ್ಡುರವರನ್ನು ಸನ್ಮಾನಿಸಲಾಯಿತು. 
ಕಾರ್ಯಕ್ರಮವು ಬಬಲಾದಿ ಶ್ರೀಗಳ ಸಾನಿಧ್ಯದಲ್ಲಿ, ಮಾಜಿ ಸಚಿವರಾದಂತ ಶ್ರೀ ಸಿ ಎಸ್ ನಾಡಗೌಡ್ರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದಂತ  ಪ್ರಭುಗೌಡ ದೇಸಾಯಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ  ಒಕ್ಕೂಟದ ಅಧ್ಯಕ್ಷ ಡಾ. ಜಾವಿದ್ ಜಮಾದಾರ್, ಕರ್ನಾಟಕ ರಾಜ್ಯ ಯುವಕ ತಜ್ಞರ ಸಮಿತಿ ಸದಸ್ಯ  ಡಾ ಎಸ್ ಬಾಲಾಜಿ, ರಾಜ್ಯ ಕಾರ್ಯದರ್ಶಿ ಶ್ರೀ ಸುರೇಶ್ ಸೂಡಿ ಮುಳ್ಳು, ಅಧ್ಯಕ್ಷ ಪುಂಡಲಿಕ ಮುರಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಜಯಪುರ  ಶ್ರೀ ಎಲ್ ಡಿ ಲೋನಿ ಪ್ರಶಸ್ತಿ ಪ್ರಧಾನ ಮಾಡಿದರು .ರಾಜ್ಯಾಧ್ಯಕ್ಷರು ಡಾ.  ಎಸ್   ಬಾಲಾಜಿ ಉಪಸ್ಥಿತರಿದ್ದರು.
ಗೀತಾ ನಾಯ್ಡು ಪಾಲಿಬೆಟ್ಟದ ನಿವಾಸಿಯಾಗಿದ್ದು, ಈ ಹಿಂದೆ 
ಗುರುಕುಲ ಪ್ರತಿಷ್ಟಾನ ತುಮಕೂರು ರವರು ಕೊಡಮಾಡುವ ರಾಜ್ಯ ಮಟ್ಟದ “ ಗುರುಕುಲ ಕಲಾ ಕುಸುಮ “ ಮತ್ತು “ಸೇವಾ ರತ್ನ” ಪ್ರಶಸ್ತಿಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸೇವಾ ಸಾಧನೆಯ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.


ಫೆ 3ರಿಂದ 6ರ ವರಗೆ ಪಾಲಿಬೆಟ್ಟ ಇತಿಹಾಸ ಪ್ರಸಿದ್ಧ ಉರೂಸ್ .

ಸಿದ್ದಾಪುರ :- ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ   ಫೆ 3,4,5,6ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್  ಹಾಜಿ ತಿಳಿಸಿದ್ದಾರೆ .ಫೆ 3ರಂದು ಶುಕ್ರವಾರ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟನೆ ಮಾಡಲಿದ್ದು.ಧಾರ್ಮಿಕ ಪಂಡಿತ  ಸಯ್ಯದ್‌ ಮೆಹರೂಫ್‌ ಅಲ್ ಜಫ್ರಿ ತಂಗಳ್ ದುಆ ದುವ ನೇತೃತ್ವ ವಹಿಸಲಿದ್ದಾರೆ  ರಾತ್ರಿ ಮತ ಪ್ರಭಾಷಣ ಮತ್ತು ದಿಕ್ರ್ ದುವಾ  ಮಜ್ಲೀಸ್  ನೇತೃತ್ವವನ್ನಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್  ವಹಿಸಲಿದ್ದಾರೆ.ಫೆ 4 ರಂದು ರಾತ್ರಿ  ಧಾರ್ಮಿಕ ಪಂಡಿತ ಆಫೀಜ್ ಜುನೈದು ಜೌಹರಿ ಅಲ್ ಅಝರಿ ಪ್ರಭಾಷಣ ಮಾಡಲಿದ್ದಾರೆ.ಫೆ 5 ರಂದು ರಾತ್ರಿ  ಅಬ್ದುಲ್ಲ ಸಲೀಂ ವಾಫಿ ಅಂಬಲಕಂಡಿ ಅವರಿಂದ ಮತ ಪ್ರವಚನ  ಹಾಗೂ ಫೆ 6 ರಂದು ಸಂಜೆ 7-00 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದುಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ,ಪಾಲಿಬೆಟ್ಟ  ಲೂರ್ಡ್ಸ್ ಚರ್ಚ್ ರ ಫಾ. ಮರಿಯಾ ರಾಜ್ ಜಾರ್ಜ್, ಕಕ್ಕಿಂಜೆ ಅಬ್ದುಲ್ ರಶೀದ್‌ ಝೈನಿ ಕಾಮಿಲ್ ಸಖಾಫಿ, ಕೊಡಗು ಜಿಲ್ಲಾ ಖಾಝಿಗಳಾದ ಶಾದುಲಿ ಪೈಝಿ,ಎಂ.ಎಂ ಅಬ್ದುಲ್ ಪೈಝಿ ಸೇರಿದಂತೆ ದಾರ್ಮಿಕ ಪಂಡಿತರು,ದರ್ಮಗುರುಗಳು,ಸಮಾಜಸೇವಕರು,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಫೆ 6ರದು ಸಂಜೆ 6.30ಗಂಟೆಯಿಂದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯ ನಡೆಯಲಿದೆ .

ಜ15 ರಂದು ಸಿದ್ದಾಪುರದಲ್ಲಿ ಕಾವೇರಿ ತಮಿಳು ಸಂಘದಿಂದಪೊಂಗಲ್ ಹಬ್ಬ ಆಚರಣೆಗೆ ಸಿದ್ದತೆ

ಸಿದ್ದಾಪುರ : ಕಾವೇರಿ ತಮಿಳು ಸಂಘ  ವತಿಯಿಂದ ಜನವರಿ 15ರಂದು ಸಿದ್ದಾಪುರದಲ್ಲಿ ಪೊಂಗಲ್ ಹಬ್ಬವನ್ನು ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ಪಿ. ತಿರುಮಲ ರಾಜ ತಿಳಿಸಿದ್ದಾರೆ.
ಸಿದ್ದಾಪುರ ಸೆಂಟನರಿ ಚರ್ಚ್ ಹಾಲ್ ಆವರಣದಲ್ಲಿ  ಜನವರಿ 15ರಂದು ಬೆಳಿಗ್ಗೆ 7ನೇ ವರ್ಷದ  ಪೊಂಗಲ್ ಹಬ್ಬದ ಕಾರ್ಯಕ್ರಮಕ್ಕೆ ಸಮಾಜಸೇವಕರು, ಜನಪ್ರತಿನಿಧಿಗಳು, ಗಣ್ಯರು ಚಾಲನೆ ನೀಡಲಿದ್ದು ಸಂಜೆವರೆಗೂ ವಿವಿಧ ಸ್ವರ್ಧೆ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಕೊಡಗು ಜಿಲ್ಲೆಯಲ್ಲಿರುವ ತಮಿಳು ಸಮುದಾಯ ಬಾಂಧವರನ್ನ ಹಬ್ಬ ಆಚರಣೆಯ ಮೂಲಕ ಒಗ್ಗೂಡಿಸುವುದರೊಂದಿಗೆ ಶಿಕ್ಷಣ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ನಿರಂತರ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿದ್ದು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದರು.ಕಾವೇರಿ ತಮಿಳು ಸಂಘದ  ಕಾರ್ಯದರ್ಶಿ ಫ್ರಾನ್ಸಿಸ್ ಮಾತನಾಡಿ ಪೊಂಗಲ್ ಹಬ್ಬದ ಆಚರಣೆಯ ಅಂಗವಾಗಿ ಸಮುದಾಯ ಬಾಂಧವರಿಗೆ ಮಡಿಕೆ ಹೊಡೆಯುವ ಸ್ಪರ್ಧೆ,ಮಕ್ಕಳ ನೃತ್ಯ ಸ್ವರ್ಧೆ, ಮಹಿಳೆಯರು ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾಂಸ್ಕೃತಿಕ ನೃತ್ಯ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು ಬೆಳಿಗ್ಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ  ಕಾವೇರಿ  ತಮಿಳು  ಸಂಘದ ಅಧ್ಯಕ್ಷ  ತಿರುಮಲ ರಾಜ ಅಧ್ಯಕ್ಷತೆ ವಹಿಸಲಿದ್ದು  ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಎಂಎಲ್ಸಿ ಸುಜಾ ಕುಶಾಲಪ್ಪ, ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ. ಎಸ್ ಪೊನ್ನಣ್ಣ, ಕೆಪಿಸಿಸಿ ಸದಸ್ಯ ಡಾ.ಮಂತರ್ ಗೌಡ, ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್,  ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ರಾಜ್ಯ ತಮಿಳು ಸಂಘದ ಅಧ್ಯಕ್ಷ ಎಸ್. ಪ್ರಾನ್ಸಿಸ್, ಮೈಸೂರು ತಮಿಳು ಸಂಘದ ಕಾರ್ಯದರ್ಶಿ ವಿ. ರಘುಪತಿ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್,  ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ನಾರಾಯಣ ಸೇರಿದಂತೆ ಮತ್ತಿತರರು  ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರುಗಳಾದ  ಧರ್ಮರಾಜ್, ನಾಗರಾಜ್, ಗಣೇಶ್, ಗೌರವ  ಸಲಹೆಗಾರರಾದ  ಕಣ್ಣಿನ್,ಸೇದುರಾಮನ್, ಮೈಕಲ್,  ಖಜಾಂಚಿ ಮುತ್ತುವೆಲ್ ತಂಬಿ,  ಸಲಹೆಗಾರರಾದ ಮುರುಗೇಶ್, ಸಬರಿ, ಶೇಖರ್, ಕುಮಾರ್, ಸೇತುರಾಮ್,ಮಣಿ, ಮುರುಗೇಶ್, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.