ಗೀತಾ ನಾಯ್ಡುರವರಿಗೆ ರಾಜ್ಯ ಸದ್ಭಾವನಾ ಪ್ರಶಸ್ತಿ

No comments
newsline media
ಕೊಡಗು:- 
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ , ಬೆಂಗಳೂರು ಇವರ ವತಿಯಿಂದ ಆಯೋಜಿಸಿದ್ದ, ಬಿಜಾಪುರದ ಮುದ್ದೇಬಿಹಾಳದಲ್ಲಿ ನಡೆದ ಸ್ವಾಮಿ ವಿವೇಕಾನಂದ 160 ನೇ ಜಯಂತೋತ್ಸವದ ಪ್ರಯುಕ್ತ , 2022-23 ನೇ ಸಾಲಿನ ರಾಜ್ಯ ಮಟ್ಟದ *ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ* ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯಿಂದ ಆಯ್ಕೆಯಾದ ಸಾಯಿಶಂಕರ ವಿದ್ಯಾಸಂಸ್ಥೆ ಪೊನ್ನಂಪೇಟೆಯ ಪ್ರಾಂಶುಪಾಲೆ ಗೀತಾ ನಾಯ್ಡುರವರನ್ನು ಸನ್ಮಾನಿಸಲಾಯಿತು. 
ಕಾರ್ಯಕ್ರಮವು ಬಬಲಾದಿ ಶ್ರೀಗಳ ಸಾನಿಧ್ಯದಲ್ಲಿ, ಮಾಜಿ ಸಚಿವರಾದಂತ ಶ್ರೀ ಸಿ ಎಸ್ ನಾಡಗೌಡ್ರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದಂತ  ಪ್ರಭುಗೌಡ ದೇಸಾಯಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ  ಒಕ್ಕೂಟದ ಅಧ್ಯಕ್ಷ ಡಾ. ಜಾವಿದ್ ಜಮಾದಾರ್, ಕರ್ನಾಟಕ ರಾಜ್ಯ ಯುವಕ ತಜ್ಞರ ಸಮಿತಿ ಸದಸ್ಯ  ಡಾ ಎಸ್ ಬಾಲಾಜಿ, ರಾಜ್ಯ ಕಾರ್ಯದರ್ಶಿ ಶ್ರೀ ಸುರೇಶ್ ಸೂಡಿ ಮುಳ್ಳು, ಅಧ್ಯಕ್ಷ ಪುಂಡಲಿಕ ಮುರಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಜಯಪುರ  ಶ್ರೀ ಎಲ್ ಡಿ ಲೋನಿ ಪ್ರಶಸ್ತಿ ಪ್ರಧಾನ ಮಾಡಿದರು .ರಾಜ್ಯಾಧ್ಯಕ್ಷರು ಡಾ.  ಎಸ್   ಬಾಲಾಜಿ ಉಪಸ್ಥಿತರಿದ್ದರು.
ಗೀತಾ ನಾಯ್ಡು ಪಾಲಿಬೆಟ್ಟದ ನಿವಾಸಿಯಾಗಿದ್ದು, ಈ ಹಿಂದೆ 
ಗುರುಕುಲ ಪ್ರತಿಷ್ಟಾನ ತುಮಕೂರು ರವರು ಕೊಡಮಾಡುವ ರಾಜ್ಯ ಮಟ್ಟದ “ ಗುರುಕುಲ ಕಲಾ ಕುಸುಮ “ ಮತ್ತು “ಸೇವಾ ರತ್ನ” ಪ್ರಶಸ್ತಿಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸೇವಾ ಸಾಧನೆಯ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.


No comments

Post a Comment