ಜ15 ರಂದು ಸಿದ್ದಾಪುರದಲ್ಲಿ ಕಾವೇರಿ ತಮಿಳು ಸಂಘದಿಂದಪೊಂಗಲ್ ಹಬ್ಬ ಆಚರಣೆಗೆ ಸಿದ್ದತೆ

No comments
ಸಿದ್ದಾಪುರ : ಕಾವೇರಿ ತಮಿಳು ಸಂಘ  ವತಿಯಿಂದ ಜನವರಿ 15ರಂದು ಸಿದ್ದಾಪುರದಲ್ಲಿ ಪೊಂಗಲ್ ಹಬ್ಬವನ್ನು ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ಪಿ. ತಿರುಮಲ ರಾಜ ತಿಳಿಸಿದ್ದಾರೆ.
ಸಿದ್ದಾಪುರ ಸೆಂಟನರಿ ಚರ್ಚ್ ಹಾಲ್ ಆವರಣದಲ್ಲಿ  ಜನವರಿ 15ರಂದು ಬೆಳಿಗ್ಗೆ 7ನೇ ವರ್ಷದ  ಪೊಂಗಲ್ ಹಬ್ಬದ ಕಾರ್ಯಕ್ರಮಕ್ಕೆ ಸಮಾಜಸೇವಕರು, ಜನಪ್ರತಿನಿಧಿಗಳು, ಗಣ್ಯರು ಚಾಲನೆ ನೀಡಲಿದ್ದು ಸಂಜೆವರೆಗೂ ವಿವಿಧ ಸ್ವರ್ಧೆ  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಕೊಡಗು ಜಿಲ್ಲೆಯಲ್ಲಿರುವ ತಮಿಳು ಸಮುದಾಯ ಬಾಂಧವರನ್ನ ಹಬ್ಬ ಆಚರಣೆಯ ಮೂಲಕ ಒಗ್ಗೂಡಿಸುವುದರೊಂದಿಗೆ ಶಿಕ್ಷಣ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ನಿರಂತರ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿದ್ದು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದರು.ಕಾವೇರಿ ತಮಿಳು ಸಂಘದ  ಕಾರ್ಯದರ್ಶಿ ಫ್ರಾನ್ಸಿಸ್ ಮಾತನಾಡಿ ಪೊಂಗಲ್ ಹಬ್ಬದ ಆಚರಣೆಯ ಅಂಗವಾಗಿ ಸಮುದಾಯ ಬಾಂಧವರಿಗೆ ಮಡಿಕೆ ಹೊಡೆಯುವ ಸ್ಪರ್ಧೆ,ಮಕ್ಕಳ ನೃತ್ಯ ಸ್ವರ್ಧೆ, ಮಹಿಳೆಯರು ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾಂಸ್ಕೃತಿಕ ನೃತ್ಯ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು ಬೆಳಿಗ್ಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ  ಕಾವೇರಿ  ತಮಿಳು  ಸಂಘದ ಅಧ್ಯಕ್ಷ  ತಿರುಮಲ ರಾಜ ಅಧ್ಯಕ್ಷತೆ ವಹಿಸಲಿದ್ದು  ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಎಂಎಲ್ಸಿ ಸುಜಾ ಕುಶಾಲಪ್ಪ, ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ. ಎಸ್ ಪೊನ್ನಣ್ಣ, ಕೆಪಿಸಿಸಿ ಸದಸ್ಯ ಡಾ.ಮಂತರ್ ಗೌಡ, ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್,  ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ರಾಜ್ಯ ತಮಿಳು ಸಂಘದ ಅಧ್ಯಕ್ಷ ಎಸ್. ಪ್ರಾನ್ಸಿಸ್, ಮೈಸೂರು ತಮಿಳು ಸಂಘದ ಕಾರ್ಯದರ್ಶಿ ವಿ. ರಘುಪತಿ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್,  ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ನಾರಾಯಣ ಸೇರಿದಂತೆ ಮತ್ತಿತರರು  ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರುಗಳಾದ  ಧರ್ಮರಾಜ್, ನಾಗರಾಜ್, ಗಣೇಶ್, ಗೌರವ  ಸಲಹೆಗಾರರಾದ  ಕಣ್ಣಿನ್,ಸೇದುರಾಮನ್, ಮೈಕಲ್,  ಖಜಾಂಚಿ ಮುತ್ತುವೆಲ್ ತಂಬಿ,  ಸಲಹೆಗಾರರಾದ ಮುರುಗೇಶ್, ಸಬರಿ, ಶೇಖರ್, ಕುಮಾರ್, ಸೇತುರಾಮ್,ಮಣಿ, ಮುರುಗೇಶ್, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

No comments

Post a Comment