ಮೂರ್ನಾಡು ಮೈಮ ಸಂಘಟನೆಯಿಂದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

No comments
ಮೂರ್ನಾಡು ಮೈಮ ಸಂಘಟನೆಯಿಂದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ  ಶಿಬಿರ 

ನಾಪೋಕ್ಲು :ಮೂರ್ನಾಡು ಮೈಮ ಸಂಘಟನೆ ಹಾಗೂ ಎ. ಐ. ಕೆ. ಎಂ. ಸಿ. ಸಿ. ಸಂಯುಕ್ತ ಆಶ್ರಯದಲ್ಲಿ   ಮೂರ್ನಾಡು ಶಾದಿಮಹಲ್ ನಲ್ಲಿ ರಕ್ತದಾನ  ಹಾಗೂ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. 

ಕಾರ್ಯಕ್ರಮವನ್ನು ಮೈಮ ಸಂಘದ ಅಧ್ಯಕ್ಷ ಖಾದರ್ ಉದ್ಘಾಟಿಸಿದರು.                ಬಳಿಕ ಮಾತನಾಡಿದ ಅವರು ರಕ್ತದಾನ ಶಿಬಿರಗಳನ್ನು ಆಯೋಜಿಸೋದರಿಂದ ಇಂದು ಜನರಿಗೆ ರಕ್ತದ ಅಗತ್ಯತೆನ್ನು ಪೂರೈಸಲು ಸಹಕಾರಿಯಾಗಲಿದೆ ಎಂದರು.

ಸಂಘದ ಕಾರ್ಯದರ್ಶಿ ನಿಶಾನ್ ಮಾತಾಡಿ ರಕ್ತದಾನ ಮಾಡುವುದರಿಂದ ಹೃದಯಾಘಾತ ,ಕ್ಯಾನ್ಸರ್ ನಂತಹ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.ಆರೋಗ್ಯವಂತರು ಮುಕ್ತವಾಗಿ ರಕ್ತದಾನ ಮಾಡುವ ಮೂಲಕ ವೈದ್ಯಕೀಯ ಹಾಗೂ ರೋಗಿಗಳ ಅಗತ್ಯಕ್ಕೆ ಬೇಕಾದ ರಕ್ತ ನೀಡುವ ಮೂಲಕ ಅಮೂಲ್ಯ ಜೀವ ಉಳಿಸುವ ಶ್ರೇಷ್ಠ ಕೆಲಸ ಮಾಡಬೇಕಾಗಿದೆ ಎಂದರು.

ಈ ಸಂದರ್ಭದ ಕೊಡಗು ವೇದಿಕೆಯ ವಿಜ್ಞಾನಗಳ ಸಂಸ್ಥೆಯ ವೈದ್ಯರುಗಳು, ಸಿಬ್ಬಂದಿಗಳು, ರಕ್ತದಾನಿಗಳು, ಮೈಮ ಸಂಘದ ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು.
ಸಂಸ್ಥೆಯಯಲ್ಲಿ ಈ ವರೆಗೆ 3 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಇದರಲ್ಲಿ ಒಟ್ಟು 111 ರಕ್ತದ ಯುನಿಟ್ ಗಳನ್ನು ಸಂಗ್ರಹಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.

No comments

Post a Comment