ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಿಂದ ಐಸಿಯು ಆಂಬ್ಯುಲೆನ್ಸ್ ಲೋಕಾರ್ಪಣೆ

No comments
ಸಿದ್ದಾಪುರ :  ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಿಂದ ಸಾರ್ವಜನಿಕ ಸೇವೆಗೆ ಐಸಿಯು ಆಂಬ್ಯುಲನ್ಸನ್ನು ಲೋಕಾರ್ಪಣೆ ಮಾಡಲಾಯಿತು. ಸಂಘಟನೆಯ 24ನೇ ವಾರ್ಷಿಕದ ಪ್ರಯುಕ್ತ ಮರ್ಹೂಂ ಉಸ್ಮಾನ್ ಹಾಜಿ ಜ್ಞಾಪಕಾರ್ಥವಾಗಿ ಅತ್ಯಾಧುನಿಕ ಮಾದರಿಯ ಐಸಿಯು ಆಂಬ್ಯುಲನ್ಸಿನ ಕೀ ಯನ್ನು ಸಮಸ್ತ  ಕೇಂದ್ರ ಮುಶಾವರಾ ಸಮಿತಿ ಸದಸ್ಯ ಹಾಗೂ  ಕೊಡಗು ಉಪ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ ಅವರು ಸಂಘಟನೆಯ ಸಿದ್ದಾಪುರ ವಲಯ ಅಧ್ಯಕ್ಷ ಎಂ.ಎಂ ಸರ್ಫುದ್ದೀನ್ ಅವರಿಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್ ಮಾತನಾಡಿ ಸೇವಾ ಮನೋಭಾವದಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.ಕೆಪಿಸಿಸಿ ಯುವ ಮುಖಂಡ ಡಾ. ಮಂಥರ್ ಗೌಡ ಮಾತನಾಡಿ  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಮಾಜ ಸೇವಾ ಸಂಘಟನೆಗಳಿಗೆ ಸಾಥ್ ನೀಡಬೇಕಿದೆ ಎಂದು ಹೇಳಿದ ಅವರು ಐಸಿಯು ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿರುವ ಎಸ್ ಕೆಎಸ್ಸೆಸ್ಸೆಫ್ ಸಂಘಟನೆಯ ಸೇವಾ ಕಾರ್ಯಕ್ಕೆ ದಾನಿಗಳು ಕೈಜೋಡಿಸಬೇಕಾಗಿದೆ ಎಂದರು.ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಪಿ ಶಶಿಧರ್ ಮಾತನಾಡಿ ದಿವಂಗತ ಉಸ್ಮಾನ್ ಹಾಜಿ ಯವರು ಅವರ ಜೀವಿತಾವಧಿಯಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದರೊಂದಿಗೆ ಎಲ್ಲ ವರ್ಗದವರನ್ನು ಗೌರವಿಸಿ ಸಹಕಾರ ನೀಡುತ್ತಿದ್ದರುಅವರ ಸ್ಮರಣಾರ್ಥ ದಾನಿಗಳ ಸಹಕಾರದೊಂದಿಗೆ ಐಸಿಯು ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿರುವುದರಿಂದ ಗ್ರಾಮೀಣ ಭಾಗದ ಜನರಿಗೂ ಅನುಕೂಲವಾಗಲಿದೆ.ಸರ್ಕಾರ ಮಾಡಬೇಕಾದ ಸೇವೆಗಳನ್ನ ಸಮಾಜಸೇವೆ ಸಂಘಟನೆಗಳು ಮಾಡುವ ಮೂಲಕ  ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ ಕಳೆದ 24ವರ್ಷಗಳಿಂದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಜಾತಿ ಮತ ಭೇದವಿಲ್ಲದೆ ಉತ್ತಮ ಸೇವೆ ನೀಡುತ್ತಿರುವ ಸಿದ್ದಾಪುರದ ಎಸ್ ಕೆ ಎಸ್ ಎಸ್  ಎಫ್ ಸಂಘಟನೆಯ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ಎಸ್ ವೆಂಕಟೇಶ್ ಮಾತನಾಡಿಜಾತಿ ಮತ ಭೇದವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ ಕೋವಿಡ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಉಚಿತ ಆಕ್ಸಿಜನ್ ವ್ಯವಸ್ಥೆ ಮಾಡುವ ಮೂಲಕ ರೋಗಿಗಳಿಗೆ ನೆರವಾದರು.ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ತುರ್ತು ಅಗತ್ಯಕ್ಕೆ ಬೇಕಾದ ಆಹಾರ ಕಿಟ್ ಗಳನ್ನು ಒದಗಿಸುವ ಮೂಲಕ ಮಾನವೀಯತೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಧಕರಿಗೆ ಸನ್ಮಾನ ಗೌರವ 
ಕೋವಿಡ್ ಸಂದರ್ಭದ ಪರಿಣಾಮಕಾರಿ ಸೇವೆಯನ್ನು ಗುರುತಿಸಿಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ,ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಬು ವರ್ಗೀಸ್,ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು. ಎಂ ಮುಸ್ತಫಾ ಹಾಜಿ,
ಕಾರ್ಯದರ್ಶಿ ರವೂಫ್ ಹಾಜಿ,ಸಂಘಟನೆಯ ಪ್ರಮುಖರಾದ ಸಮೀರ್, ಆಸ್ಕರ್, ನವಾಜ್ ಹಾಗೂ ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವಗಳನ್ನು  ಕೆ ಎಂ ಸಿ ಸಿ ಆಂಬ್ಯುಲೆನ್ಸ್ ನಲ್ಲಿ ಸಾಗಿಸುವ ಮೂಲಕ ಹಲವರ ಪ್ರಾಣ ಉಳಿಸಿದ  ಚಾಲಕ ಹನೀಫ್      ಅವರನ್ನು ಸನ್ಮಾನಿಸಿ  ಗೌರವಿಸಲಾಯಿತು.ಸ್ಥಳೀಯ ಮಸೀದಿ ಖತೀಬ್ ನೌಫಲ್ ಹುದವಿ, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ,  ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ.ಕೆ ಹಕೀಂ, ಎಸ್ ವೈಎಸ್ ಜಿಲ್ಲಾಧ್ಯಕ್ಷ ಸಿ ಪಿ ಎಂ ಬಶೀರ್ ಹಾಜಿ, ಪ್ರಮುಖರಾದ  ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಉಮ್ಮರ್ ಫೈಝಿ, ಆರಿಫ್ ಫೈಝಿ, ಸಬಾಸ್ಟಿನ್, ಕೆ.ಯು ಮಜೀದ್, ಹಸೈನಾರ್ ಸೇರಿದಂತೆ ಮತ್ತಿತರರು ಇದ್ದರು.

No comments

Post a Comment