ಮಹಿಳೆಯರ ದೌರ್ಜನ್ಯಕ್ಕೆ ಕಾನೂನು ಸಲಹೆ ಪಡೆಯಿರಿ - ನಾಪೋಕ್ಲು ಎಸ್ ಐ. ಕಿರಣ್

No comments

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) : ಮಹಿಳೆಯರು ಪುರುಷರಷ್ಟೇ ಸಮಾನರು ಯಾವುದೇ ಒಬ್ಬ ಮಹಿಳೆಗೆ ದೌರ್ಜನ್ಯವಾದರೆ ಕಾನೂನಿನ ಮೊರೆ ಹೋಗಬಹುದು ಎಂದು ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್ ತಿಳಿಸಿದರು.

:ಪೋಷಣ ಮಾಸಾಚರಣೆ ಮತ್ತು ಮಾತೃವಂದನಾ  ಅರಿವು ಕಾರ್ಯಕ್ರಮ 

 ನಾಪೋಕ್ಲು ಸಮೀಪದ ಹಳೇ ತಾಲೂಕುವಿನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪೋಷಣೆ  ಹಾಗೂ ಮಾತೃ ವಂದನಾ ಯೋಜನೆಯ ಅರಿವು ಮತ್ತು ಕೋವಿಡ್ ಲಸಿಕೆಯ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.  

ತುರ್ತು ವಾಹನ ಇ ಆರ್ ಎಸ್ ಎಸ್ 112 (ERSS ) ಬಗ್ಗೆ ಮಾಹಿತಿ.

 ದೇಶಾದ್ಯಂತ ಯಾವುದೇ ತುರ್ತು ಸಂದರ್ಭದಲ್ಲಿ ದಿನದ 24ಗಂಟೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇ ಆರ್ ಎಸ್ ಎಸ್ 112 (ERSS )ತುರ್ತು ಸ್ಪಂದನಾ ಸಹಾಯವಾಣಿ ವ್ಯವಸ್ಥೆಯ ವಾಹನವನ್ನು ಸರ್ಕಾರ ಆರಂಭಿಸಿದ್ದು ನಮ್ಮ ನಾಪೋಕ್ಲು ವ್ಯಾಪ್ತಿಯಲ್ಲೂ ವಾಹನದ ವ್ಯವಸ್ಥೆ ಇದ್ದು ಸಾರ್ವಜನಿಕರು ಯಾವುದೇ  ದೌರ್ಜನ್ಯ, ಅಹಿತಕರಘಟನೆ, ಅಪಘಾತ,ಮುಂತಾದ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆಮಾಡಿ ಸಹಾಯವನ್ನು ಪಡೆಯಬಹುದು ಎಂದು ಠಾಣಾಧಿಕಾರಿ ಕಿರಣ್ ಮಾಹಿತಿ ತಿಳಿಸಿದರು.ಅದರಂತೆ ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಲು ಸ್ಥಳೀಯವಾಗಿ ಸಿಗುವ ಆಹಾರವನ್ನು ಉಪಯೋಗಿಸಬೇಕು ಎಂದ ಅವರು ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿ ಬೆಳೆಸುವ ಸೊಪ್ಪು ತರಕಾರಿಗಳನ್ನು  ಸ್ವತಃ ಮನೆಯಲ್ಲೇ ಬೆಳೆದು ನಾವೇ ಉಪಯೋಗಿಸುವುದರ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕುಎಂದರು. ಅಲ್ಲದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ನಿಯಂತ್ರಣಕ್ಕೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಗವತಿ ಮಹಿಳಾ ಸಮಾಜದ ಅಧ್ಯಕ್ಷರಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಗವತಿ ಸ್ತ್ರೀಶಕ್ತಿ ಸಂಘದ ಸದಸ್ಯರು,ಪೊಲೀಸ್ ಇಲಾಖೆಯ ಸಾಜನ್, ಷರೀಫ್,ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರಾದ ಯಶೋಧ, ಭಾಗ್ಯವತಿ, ಪವಿತ್ರ ಮತ್ತಿತರರುಇದ್ದರು.

No comments

Post a Comment