ಅಮ್ಮತ್ತಿ (web@timesofcoorg) : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದಂತೆ ಡಿವಿಶನ್ ಸಮಿತಿಯು ರಚನೆಯಾಗಿ ಅರ್ಧವರ್ಷಗಳು ಕಳೆದಿದ್ದು ಸಂಘಟನೆ ಕಾರ್ಯವೈಖರಿ ಅವಲೋಕನ ಮಾಡುವ ನಿಟ್ಟಿನಲ್ಲಿ ಅರ್ಧವಾರ್ಷಿಕ ಸಾಂಘಿಕ ಅವಲೋಕನ ಸಭೆ(REVIEW)ಯು ನೆಲ್ಲ್ಯಾಹುದಿಕೇರಿ ಸೆಕ್ಟರ್ ವ್ಯಾಪ್ತಿಯ ಕಂಡಕರೆ ಯುನಿಟ್ ನಲ್ಲಿ ನಡೆಸಲಾಯಿತು.
ಜಿಲ್ಲಾ ಸಮಿತಿ ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಝುಬೈರ್ ಸಅದಿ ಅಲ್ ಅಫ್ಳಲಿ ಮಾಲ್ದಾರೆ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆ ಅಧ್ಯಕ್ಷತೆಯನ್ನು ಡಿವಿಶನ್ ಅಧ್ಯಕ್ಷರಾದ ರಝಾಕ್ ಸಅದಿ ವಹಿಸಿದ್ದರು
ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಸಾಬಿತ್ ಮಾಸ್ಟರ್ ಸರ್ವರನ್ನೂ ಸ್ವಾಗತಿಸಿದ ಸಭೆಯನ್ನು ಝುಬೈರ್ ಸಅದಿ ಅಲ್ ಅಫ್ಳಲಿ ಮಾಲ್ದಾರೆ ಉದ್ಘಾಟಿಸಿದರು.
ಪ್ರಸಕ್ತ ಸಾಂಘಿಕ ಅರ್ಧ ವರ್ಷದಲ್ಲಿ ಸಮಿತಿಯ ಕಾರ್ಯಚಟುವಟಿಕೆಗಳೆ ಸಂಪೂರ್ಣ ವರದಿಯನ್ನು ಡಿವಿಶನ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್ ಮಟ್ಟಂ ಹಾಗೂ ಆಯವ್ಯಯ ಗಳ ವರದಿಯನ್ನು ಡಿವಿಶನ್ ಕೋಶಾಧಿಕಾರಿ ಹಂಝ ರಹ್ಮಾನಿ ಮಂಡಿಸಿದರು.
ಸಭೆಯಲ್ಲಿ ಡಿವಿಶನ್ ಸಮಿತಿ ಆಯೋಜಿಸಿದ ವಿವಿಧ ವಿಭಾಗಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಮಿತಿ ನೇಮಿಸಿದ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಜೀಬ್ ಮಾಸ್ಟರ್ ಕೊಂಡಗೇರಿ ಹಾಗೂ ಜಿಲ್ಲಾ ಕ್ಯಾಂಪಸ್ ಕನ್ವೀನರ್ ಇಬ್ರಾಹಿಂ ಮಾಸ್ಟರ್ ಕೊಂಡಗೇರಿ ತರಗತಿ ನೇತೃತ್ವ ವಹಿಸಿದ್ದರು.
ಸಭೆಯಲ್ಲಿ ಡಿವಿಶನ್ ವ್ಯಾಪ್ತಿಯ ಜಿಲ್ಲಾ ನಾಯಕರುಗಳು. ಡಿವಿಶನ್ ಕಾರ್ಯಕಾರಿ ಸಮಿತಿ ಸದಸ್ಯರು. ಡಿವಿಶನ್ ವ್ಯಾಪ್ತಿಯ ಐದು ಸೆಕ್ಟರ್ ನಿಂದ ಆಯ್ಕೆಯಾದ ಕೌನ್ಸಿಲಿರ್ಸ್ ಸೇರಿ ಹಲವಾರು ಹಾಜರಿದ್ದರು.
ವರದಿ: ಮೀಡಿಯಾ ವಿಭಾಗ ವಿರಾಜಪೇಟೆ ಡಿವಿಶನ್ ಸಮಿತಿ
No comments
Post a Comment