ಸೆಪ್ಟೆಂಬರ್ 3ರಿಂದ ಭಾರತೀಯರಿಗೆ ಬಹ್ರೈನ್ ಪ್ರವೇಶಾನುಮತಿ : ಭಾರತವನ್ನು ಕೆಂಪು ಪಟ್ಟಿಯಿಂದ ಕೈಬಿಟ್ಟ ಬಹ್ರೈನ್

No comments

ಗಲ್ಫ್ ಡೆಸ್ಕ್ /Times Of Coorg : ಭಾರತ ಸೇರಿದಂತೆ ಕೆಲವು ದೇಶಗಳನ್ನು ಬಹ್ರೈನ್ ಕೆಂಪು ಪಟ್ಟಿಯಿಂದ ಕೈಬಿಟ್ಟಿದೆ. ಭಾರತ ಸೇರಿದಂತೆ ಪಾಕಿಸ್ತಾನ,ಪನಾಮ ಮತ್ತು ಡೊಮಿನಿಕನ್ ಗಣರಾಜ್ಯವನ್ನು ಕೂಡ ಕೆಂಪು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಹ್ರೈನ್ ಆರೋಗ್ಯ ಸಚಿವಾಲಯ ತಿಳಿಸಿದೆ 

ಹೊಸ ಪಟ್ಟಿ ಸೆಪ್ಟೆಂಬರ್ 3ರಿಂದ ಜಾರಿಗೆ ಬರಲಿದೆ. ಇದರ ಜೊತೆಗೆ ಕೆಲವು ದೇಶಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಬೋಸ್ನಿಯಾ, ಹರ್ಜೆಗೊವಿನಾ, ಸ್ಲೋವೆನಿಯಾ, ಇಥಿಯೋಪಿಯ, ಕೋಸ್ಟರಿಕಾ ಮತ್ತು ಈಕ್ವೆಡಾರ್ ಬಹ್ರೈನ್ ನ ಕೆಂಪು ಪಟ್ಟಿಯಲ್ಲಿರುವ ಇತರೆ ದೇಶಗಳಾಗಿವೆ.

ಕೆಂಪು ಪಟ್ಟಿಯಿಂದ ತೆಗುದುಹಾಕಲ್ಪಟ್ಟ ಹಾಗೂ ಪ್ರಯಾಣ ಅನುಮತಿಸಿದ  ದೇಶಗಳ ಎರಡು ಡೋಸ್ ಲಸಿಕೆಗಳನ್ನು ಪಡೆದವರು ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲದೆ ಪ್ರಯಾಣಿಸಬಹುದು.

No comments

Post a Comment