ಸೋಮವಾರಪೇಟೆ (times of coorg) : ಸುನ್ನಿ ಜಂಞಯ್ಯತುಲ್ ಮುಅಲ್ಲಿಮೀನ್ (SJM) ಸೋಮವಾರಪೇಟೆ ರೇಂಜ್ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೂಡಿಗೆ ಮದರಸದಲ್ಲಿ ಅಬೂಬಕ್ಕರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಶಾಫಿ ಸಖಾಫಿ ಉದ್ಘಾಟಿಸಿದರು. ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಹಂಸ ಮುಸ್ಲಿಯಾರ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಅಲಿ ಸಖಾಫಿ, ಕಾರ್ಯದರ್ಶಿಯಾಗಿ ಉಸಾಮ ಸಖಾಫಿ. ಮ್ಯಾಗಜೀನ್ ವಿಭಾಗದ ಅಧ್ಯಕ್ಷರಾಗಿ ನೌಫಲ್ ಮಹ್ಲರಿ, ಕಾರ್ಯದರ್ಶಿಯಾಗಿ ಅಝೀಝ್ ಸಖಾಫಿ, ಎಕ್ಸಮ್ ವಿಭಾಗದ ಅಧ್ಯಕ್ಷರಾಗಿ ಅಬಿದ್ ಮಿಸ್ಬಾಹಿ, ಕಾರ್ಯದರ್ಶಿಯಾಗಿ ಮುನೀರ್ ಸಅದಿ. ಟ್ರೈನಿಂಗ್ ವಿಭಾಗದ ಅಧ್ಯಕ್ಷರಾಗಿ ರಝಾಕ್ ಸಅದಿ, ಕಾರ್ಯದರ್ಶಿಯಾಗಿ ಹಸೈನಾರ್ ಸಖಾಫಿ. ಮಿಷನರಿ ವಿಭಾಗದ ಅಧ್ಯಕ್ಷರಾಗಿ ಸಿದ್ದೀಕ್ ಫಾಳಿಲಿ, ಕಾರ್ಯದರ್ಶಿಯಾಗಿ ನಜ್ಮುದೀನ್ ಝುಹ್ರಿ ಆಯ್ಕೆಗೊಂಡರು.

Masha Allah 🥰🌹🌹🌹ಅಭಿನಂದನೆಗಳು
ReplyDelete