ಅರಳುವ ಮುನ್ನ ಕಣ್ಮೆರೆಯಾದ ಸುನ್ನಿ ಸಾಂಘಿಕ ರಂಗದ ಬೆಳ್ಳಿ ನಕ್ಷತ್ರ ಮುಆದ್ ಹಾಕತ್ತೂರು.

No comments

ಶರಫುಲ್ ಉಲಮಾರಿಗೆ ಜನ್ಮವಿತ್ತ ಕೊಡಗಿನ ಹಾಕತ್ತೂರಿನಲ್ಲಿ ವಿಖ್ಯಾತ ಉಳಿಯತ್ ವಳಪ್ಪಿಲ್ ಮನೆತನದಲ್ಲಿ ಮುಹಮ್ಮದ್,ಝೈನಬ ದಂಪತಿಗಳ ಏಳು ಸಂತತಿಗಳ ಪಂಕ್ತಿಯಲ್ಲಿ ನಾಲ್ಕನೇ ಪುತ್ರನಾಗಿ ಸ್ಥಳೀಯ ತೊಂಬತ್ತು ಮನೆ ಎಂಬಲ್ಲಿ ದಿನಾಂಕ 3/11/1998 ರಲ್ಲಿ ಜನನ._ಮತ ಲೌಕಿಕ ಪ್ರಾಥಮಿಕ ಶಿಕ್ಷಣವನ್ನು ತೊಂಬತ್ತು ಮನೆ ಎಂಬಲ್ಲಿಂದ ಪಡೆದುಕೊಂಡರು._

_ಬಳಿಕ‌ ಪ್ರೌಢ ಶಿಕ್ಷಣ ಮುರ್ನಾಡು ಪಟ್ಟಣದ ಪ್ರೌಢಶಾಲೆಯಲ್ಲಿ ಪಡೆದುಕೊಂಡರು,ದರ್ಸ್ ಅಧ್ಯಯನವನ್ನು ಉನ್ನತ ವಿದ್ವಾಂಸ  ಮಳಾಹಿರಿ ಉಸ್ತಾದರ ಬಳಿ ವರ್ಷಗಳೆರೆಡರ ಅವಧಿಯಲ್ಲಿ ಕೊಂಡಂಗೇರಿಯಲ್ಲಿ ಬಳಿಕ ಬಲಮುರಿಯ ಅಲ್ ಇಹ್ಸಾನ್ ಸಂಸ್ಥೆಯಲ್ಲಿ ಕೆಲವು ತಿಂಗಳುಗಳ ಕಾಲ ವ್ಯಾಸಂಗ ನಿರತನಾಗಿದ್ದ ಮುಆದ್ ಹೆತ್ತವರ ಆರ್ಥಿಕ ಸಮಸ್ಯೆ,ಕೃಗೂಡುತಿದ್ದ ಆರೋಗ್ಯ ಸಮಸ್ಯೆಯೇ ಅಧ್ಯಯನಕ್ಕೆ ತೊಡಕಾಗಿತ್ತು._

_ತದನಂತರ ಪೋಷಕರು ನಡೆಸುತ್ತಿದ್ದ  ಉಪಹಾರ ಕೇಂದ್ರದ‌ ಮೇಲ್ನೋಟ ಸಮರ್ಥವಾಗಿ ನಿಭಾಯಿಸುತ್ತಿದ್ದ._
_ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮುಆದ್ ಎಸ್ಸೆಸ್ಸೆಫ್ ಸಂಘಟನೆಯೊಂದಿಗೆ ಒಡನಾಟವಿರಿಸಿಕೊಂಡಿದ್ದ._
_ಹಾಕತ್ತೂರು ಶಾಖೆಯ ಅಧ್ಯಕ್ಷ, ಉಪಾಧ್ಯಕ್ಷ,ಮೀಡಿಯ ವಿಂಗ್ ಕಾರ್ಯದರ್ಶಿ,ಮುರ್ನಾಡು ಸೆಕ್ಟರ್ ಸಮಿತಿ ಸದಸ್ಯ ಎಂಬಿತ್ಯಾದಿ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುತ್ತಿದ್ದ._

_ವೈವಹಾರಿಕ ಶುದ್ದಿ,ಸ್ವಗ್ರಾಮದ ಸ್ವಜನಾಂಗದವರು ಸಂಪೂರ್ಣವಾಗಿ ಶೈಖುನಾ ಸುಲ್ತಾನುಲ್ ಉಲಮಾರ ನಾಯಕತ್ವ ಅಂಗೀಕರಿಸಬೇಕೆಂಬ ಅಭಿಲಾಷೆ ಮಾತಿನೆಡೆ ಆಪ್ತರ ಬಳಿ ಹೊರಗೆಡವುತ್ತಿದ್ದ._

_ನೋಡಿದರೆ ನೋಡಿದಷ್ಟೂ ಇಷ್ಟ ಮಾತೊ ಮಿತ,ಖಚಿತ ನಿಷ್ಕಷ್ಟ ಅಚ್ಚುಕಟ್ಟಿನ ಸ್ವಚ್ಚತೆಯ ಸಂಕೇತ ಮೂಡಿದೊಂದೊಂದು ಕೃತಿಯೂ ಕೃತಾರ್ಥ ನೊಂದವರ ಬದುಕಲ್ಲಿ ಗೋಪುರದ ದೀಪ ಸದ್ದಿರದ ಸಾಧನೆಗೆ ಜೀವಂತ ರೂಪ._

_ಈ ಕವಿವಾಣಿಯಂತೆ ಸರಳತೆಯಲ್ಲಿ,ಸಜ್ಜನಿಕೆಯಲ್ಲಿ,ವಿಶಾಲ ವೈಕ್ತಿತ್ವದಲ್ಲಿ ಸರ್ವರನ್ನೂ ಗೆದ್ದವರು._
_ಜನಪರ ಕಾಳಜಿ,ಜೀವನ ಮೌಲ್ಯ,ವಿಚಾರವಂತಿಕೆಗಳನ್ನು ಯೌವ್ವನದಲ್ಲಿಯೇ ಹುದುಗಿಸಿಕೊಂಡಿರುವ ಅಪ್ಪಟ ಕರ್ಮಯೋಗಿ._
_ಸಾಂಘಿಕ ಹೊಣೆಗಾರಿಕೆ ವಹಿಸಿ ಆ ಪದವಿಗಳಿಗೆ ಗೌರವ, ಘನತೆ ತಂದುಕೊಟ್ಟ ನಿಸ್ವಾರ್ಥ ಯುವ ನಾಯಕರು._
_ಮುಆದಿನ ದಿವ್ಯ,ಭವ್ಯ ಸಾಂಘಿಕ ಹಿನ್ನೆಲೆ ಖಂಡಿತಾ ಆದರ್ಶ ಹಾಗೂ ಮಾದರಿಯಾದುದು._


_ಹಾಕತ್ತೂರು ಶಾಖೆ‌ ಆರ್ಥಿಕವಾಗಿ  ಖಾಯಂ ಎಚ್ಚೆತ್ತುಕೊಳ್ಳಲು ವಾರಕ್ಕೆ ‌ಕಾರ್ಯಕರ್ತರಿಂದ ತಲಾ ರೂಪಾಯಿ ಹತ್ತರಂತೆ ಸಂಗ್ರಹಿಸಲು ಯೋಜನೆ ಜಾರಿ ಈ ಹಿಂದೆ ತಂದಿದ್ದರು.ಕಳೆದ ತಿಂಗಳಿನಲ್ಲೂ ಹಣ ಪಾವತಿಸಿದ್ದೂ ಮೇಲಿನ ವೃಷಿಷ್ಟತೆಯ ಪಂಕ್ತಿಯಲ್ಲಿ ಒಳಪಟ್ಟಿದೆ.ಮುಆದ್ ಒಂದುವರೆ ವರ್ಷದ ಹಿಂದೆ ಅನಾರೋಗ್ಯ ಪೀಡಿತನಾದ ಮುಆದ್ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪರೀಕ್ಷೆಯಲ್ಲಿ ಮಾರಕ ರೋಗಕ್ಕೆ ತುತ್ತಾಗಿದ್ದ ಮಾಹಿತಿ ಪಡೆದ ಆಪ್ತರು ಬೆಂಗಳೂರುವಿನ ಕಿದ್ವಾಯಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಅಲ್ಪ ಚೇತರಿಕೆ ಕಂಡ ಹಿನ್ನಲೆಯಲ್ಲಿ ಮರಳಿ ಸ್ವಗ್ರಹಕ್ಕೆ ಕರೆತರಲಾಯಿತು._


_ಅನಿರೀಕ್ಷಿತವಾಗಿ ರೋಗ ಉಲ್ಪಣಗೊಂಡು ದಿನಾಂಕ 20 ರ  ಅರ್ಧರಾತ್ರಿಯಲ್ಲಿ ಮುರ್ನಾಡಿನ ಆಸ್ಪತ್ರೆಗೆ  ಕರೆದೊಯ್ದುಲಾಯಿತು.ಮರಳುವ ಮಧ್ಯೆ ಬಲಮುರಿಯ ದರ್ಗಾ ಝಿಯಾರತ್ ಮಾಡಿಬರಬಹುದೆಂಬ ಮುಆದ್ ನ ಅಭಿಲಾಷೆಯಂತೆ ಔಲಿಯಾಗಳ ಝಿಯಾರತ್ ಮಾಡೂದರ ಮಧ್ಯೆ ದೈಹಿಕ ಬಳಲಿಕೆಯಿಂದ ಪಾಲೆಮಾಡ್ ದರ್ಗಾದಲ್ಲಿಯೇ ಆಗಸ್ಟ್ ತಿಂಗಳ 20ರ ದಿನದಂದು ಹಿಜ್ರಾ 1443,ಮುಹರ್ರಂ 11ಶುಕ್ರವಾರ ಹಗಲು 11ರ ಸಮಯದಲ್ಲಿ ಕುಲುಮೆಯಲ್ಲಿ ಬೆಂದ  ಸಾಟಿಯಿಲ್ಲದ ಮೇರು ವೈಕ್ತಿತ್ವದ ಮುಆದ್ ಅರಳುವ ಮುನ್ನ ಕಣ್ಮೆರೆಯಾದ._

_ಮುಆದ್ ಲೌಕಿಕ ಬದುಕು ಕೊನೆಗೊಳಿಸಿದ ಸುದ್ದಿ ಕ್ಷಣಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಹರಡಿತು.ಕೇವಲ 23ವರ್ಷ ಬಾಳಿ ಊಹೇಗೂ ನಿಲುಕದ ಹಲವಾರು ಸೇವೆಗಳನ್ನು ಸಮಾಜಕ್ಕೆ ಎಸ್ ಎಸ್ ಎಫ್ ಮೂಲಕ ನೀಡಲು ಮುತೂವರ್ಜಿ ವಹಿಸಿ ಅದರಲ್ಲಿ ಯಶಸ್ವಿಯಾದ ತಮ್ಮ ಜೀವನ ಕ್ರಮದಿಂದ ಎಲ್ಲರಿಗೂ ಮಾದರಿಯಾದ ಮುಆದ್ ಅಲ್ಲಾಹನ ಔಲಿಯಾಗಳ ಸಮಾಧಿ ತಾಣದಲ್ಲಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ಅಲ್ಲಾಹನ ರಹ್ಮತ್ಗೆ ಮರಳಿದ್ದಾನೆ.ಮುಆದಿನ ಅಪೂರ್ವ ವೈಕ್ತಿತ್ವಕ್ಕೆ ಮುಆದೇ ಸಾಟಿ ಅವನೀಗೆ ಬೇರಾರೂ ಸಾಟಿಯಿಲ್ಲ.ಸುನ್ನೀ ಸಂಘಟನೆಯನ್ನು ತನ್ನ ಸಮಾಜ ಸೇವೆಗೆ ಆಯ್ದು ಕೊಂಡಿದ್ದು ಮರಣದ ನಂತರ ಅಪಾರ ಸಂಖ್ಯೆಯ ವಿದ್ವಾಂಸರಾದಿ ಸಹಸ್ರಾರು ಕಾರ್ಯಕರ್ತರ ಪ್ರಾರ್ಥನೆ ಲಭಿಸಲು ನೆರವಾದ._

_ಅಂತಿಮ ದರ್ಶನ ಪಡೆಯಲು ಮುಆದಿನ ಆಪ್ತರು,ಕೌಟುಂಬಿಕ ವಲಯ,ಸುನ್ನೀ ಸಾಂಘಿಕ ರಂಗದ ವಿಭಿನ್ನ ಹಂತದ ನಾಯಕರು,ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು._
_ಮುಆದ್ ನ ವಿಯೋಗವು ಎಸ್ಸೆಸ್ಸೆಫ್ ಗೆ  ತುಂಬಲಾಗದ ನಷ್ಟ!_
_ಸಂಜೆ ಐದುಕಾಲು ಸಮಯದಲ್ಲಿ ಕೌಟುಂಬಿಕ ಆಪ್ತರೂ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾಗಿದ್ದ ಹಾಫಿಝ್ ಕರೀಂ ಫಾಝಿಲಿ ರವರ ಮುಂದಾಳತ್ವದಲ್ಲಿ ಸುನ್ನಿ ಸಂಘ ಕುಟುಂಬದ ನಾಯಕರ ಮತ್ತು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಮಯ್ಯತ್ ನಮಾಝ್ ‌ಪೂರೈಸಲಾಯಿತು._


_ಬಳಿಕ ಬಂದವರು ಖಬರ್ ಬಳಿ ಮಯ್ಯತ್ ನಮಾಝ್ ನಿರ್ವಹಿಸಿದರು.__ತಲ್ಕೀನ್,ಸಾಮೂಹಿಕ ಪ್ರಾರ್ಥನೇಗೆ ಕ್ರಮವಾಗಿ ಸ್ಥಳೀಯ ಜಮಾಅತ್ ಮಾಜಿ,ಹಾಲಿ ಖತೀಬರಾದ ಅಶ್ರಫ್ ಸಖಾಫಿ ತರುವಣ, ಸಹೀದ್ ಲತ್ವೀಫಿ ಮಲಪ್ಪುರಂ ಮುಂದಾಳತ್ವ ವಹಿಸಿದ್ದರು._


_ಎಸ್ಸೆಸ್ಸೆಫ್ ಹಾಕತ್ತೂರು ಶಾಖೆಯ ಅಧ್ಯಕ್ಷರಾದ ಝುಭೈರ್ ಕಾಮಿಲ್ ಸಖಾಫಿ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಾಫಿರವರ ನಾಯಕತ್ವದಲ್ಲಿ ಮೂರು ದಿನಗಳ ಕಾಲ ಖಬರ್‌ಬಳಿ ಸ್ಥಳೀಯ ಕಾರ್ಯಕರ್ತರು ಸತತ24 ತಾಸು ಖುರ್ಆನ್ ಪಾರಾಯಣ ಮಾಡುತ್ತಿದ್ದಾರೆ._


_ಅಲ್ಲಾಹನೇ ಸತ್ಕರ್ಮ ಮಾತ್ರ ಮಾಡಿ ಬೆಳೆದು ಒಳಿತಿನತ್ತ ಸಮಾಜವನ್ನು ಆಮಂತ್ರಿಸಲು ಸ್ವಾತಿಕರಿಂದ  ಸಂಸ್ಥಾಪನೆ ಗೊಂಡ ಎಸ್ ಎಸ್ ಎಫ್ ನ ಬರ್ಕತ್ನಿಂದ ಮುಆದಿಗೆ ಪಾರತ್ರಿಕ ಹುತಾತ್ಮರ ಪದವಿ ನೀಡಲೆಂದು ಮನದಾಳದಿಂದ ಪ್ರಾರ್ಥಿಸುತಿದ್ದೇವೆ.ಮುಆದಿನ ಅಗಲಿಕೆಯ ನೋವು ತಾಳಲು ಪೋಷಕರಿಗೂ ಒಡಹುಟ್ಟಿದ ಫಾತಿಮಾ,ಆಬಿದ್,ತ್ವಾಹಿರ,ರೈಯ್ಯಾನ,ರಮೀಝ,ಆಶಿಕ್, ಕೌಟುಂಬಿಕ ಆಪ್ತರಿಗೂ,ಕಾರ್ಯಕರ್ತರಿಗೂ ಶಕ್ತಿಯನ್ನು ಪ್ರಭುವಾದ ಅಲ್ಲಾಹು ನೀಡಲೆಂದು ಪ್ರಾರ್ಥಿಸುತ್ತೇವೆ._


_ಮುಆದಿನ ಹೆಸರಿನಲ್ಲಿ ದಿಕ್ರ್,ಖತಂ, ಮಯ್ಯತ್ ನಮಾಝ್, ಮತ್ತಿತ್ತರ ಸತ್ಕರ್ಮ ಮಾಡಲು ಮರೆಯದಿರಿ ‌ಎಂಬ ವಿನಂಬ್ರ ಕೋರಿಕೆಯೊಂದಿಗೆ._

✍🏻 *ಸಿ.ಎ ಮುಹಮ್ಮದ್ ನಿಝಾರ್ ಸಖಾಫಿ,ಅಲ್ ಅಫ್ಳಲಿ ಕಡಂಗ*
♾️♾️♾️♾️♾️♾️♾️♾️♾️♾️♾️

No comments

Post a Comment