ಎನ್.ಎಸ್.ಯು.ಐ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರ ಜನ್ಮದಿನಾಚರಣೆ

No comments

ಮಡಿಕೇರಿ (web@timesofcoorg) : ಕೊಡಗು ಜಿಲ್ಲಾ ಎನ್.ಎಸ್.ಯು‌.ಐ  ವತಿಯಿಂದ ನಾಪೋಕ್ಲುವಿನಲ್ಲಿ ಮಾಜಿ ಪ್ರಧಾನಮಂತ್ರಿ ದಿವಂಗತ, ರಾಜೀವ್ ಗಾಂಧಿ ಮತ್ತು  ಮಾಜಿ ಮುಖ್ಯಮಂತ್ರಿ ದಿವಂಗತ  ದೇವರಾಜ ಅರಸು ರವರ ಜನ್ಮ ದಿನಾಚರಣೆಯನು ಅ ಸರಳವಾಗಿ, ಕೋವಿಡ್ ನಿಯಮಗಳನ್ನು  ಪಾಲಿಸಿ ಆಚರಿಸಲಾಯಿತು.ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಎಸ್.ಯು.ಐ ಜಿಲ್ಲಾ  ಉಪಾಧ್ಯಕ್ಷ ಅಬ್ದುಲ್ ರಾಶಿದ್  ಐಟಿ ಕ್ಷೇತ್ರಕ್ಕೆ ‌ರಾಜೀವ್ ಗಾಂಧಿಯವರ ಕೊಡುಗೆಗಳು ಅಪಾರವಾಗಿದೆ.

ಸಂಪರ್ಕ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿನ ಕ್ರಾಂತಿ, ಮತದಾನದ ವಯಸ್ಸು 18ಕ್ಕೆ ಇಳಿಕೆ, ಹೊಸ ಶಿಕ್ಷಣ ನೀತಿ, ಪಂಚಾಯತ್ ರಾಜ್ ವ್ಯವಸ್ಥೆ,  ಸಾಮೂಹಿಕ ಲಸಿಕಾ ಅಭಿಯಾನದಂತಹ ಜನಪರ ಕಾರ್ಯಕ್ರಮಗಳ‌‌ ಉಪಯೋಗವನ್ನು ನಾವಿಂದು ಪಡೆಯುತ್ತಿದ್ದೇವೆ.

"ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಕ್ರಾಂತಿಯ ಪಿತಾಮಹ" ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರಾದ ಮಾಜಿ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿ ಅವರ ಜನ್ಮದಿನದಂದು ಗೌರವಪೂರ್ಣ ನಮನಗಳನ್ನು ಅರ್ಪಿಸುತ್ತೇನೆ.

 ಅವರು ಭಾರತದ ಅತ್ಯಂತ ಕಿರಿಯ ಪ್ರಧಾನಿ.ಈ ದಿನವನ್ನು ಸದ್ಭಾವನ ದಿವಸ್ ಎಂದೂ‌ ಕೂಡ  ಕರೆಯುತ್ತಾರೆ.ಇದು ರಾಷ್ಟ್ರೀಯ ಏಕೀಕರಣ ಮತ್ತು ವಿವಿಧ ಸಮುದಾಯಗಳ ನಡುವೆ ಶಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.

ರಾಜೀವ್ ಗಾಂಧಿ ಅವರ ಪ್ರಯತ್ನ ಮತ್ತು ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆಯಿಂದಾಗಿ "ಶ್ರೀ ಕ್ಲೀನ್" ಎಂಬ ಬಿರುದನ್ನು ಪಡೆದಿದ್ದರು.

"40 ನೇ ವಯಸ್ಸಿನಲ್ಲಿ ಪ್ರಧಾನಿಯಾದ ರಾಜೀವ್ ಗಾಂಧಿ ಆಧುನಿಕ ಭಾರತವನ್ನು ಸೃಷ್ಟಿಸಿದರು. ಅವರ ಉಪಕ್ರಮದ ಮೇರೆಗೆ, ಭಾರತೀಯ ದೂರಸಂಪರ್ಕ ಜಾಲವನ್ನು ಸ್ಥಾಪಿಸಲಾಯಿತು. ದೂರಸಂಪರ್ಕ ಜಾಲವು ನಗರದಿಂದ ಹಳ್ಳಿಗೆ ಆರಂಭವಾಯಿತು, ಇದರಿಂದ ಹಳ್ಳಿಗಳ ಜನರು ಕೂಡ ದೇಶದೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಪ್ರಪಂಚವು ಸಂವಹನದ ದೃಷ್ಟಿಯಿಂದ ಎಂಬುದು ಮರೆಯಲಾಗುವುದಿಲ್ಲ.

ದೇಶದ ಯುವ ಪೀಳಿಗೆಗೆ ಪರಿವರ್ತನೆಯ ಮುನ್ಸೂಚಕರಾದ ರಾಜೀವ್ ಗಾಂಧಿಯವರು ದೂರದೃಷ್ಟಿಯುಳ್ಳ ಆಡಳಿತದಿಂದ ಎಂದೆಂದಿಗೂ ಭಾರತದ ಇತಿಹಾಸದಲ್ಲಿ ಅಜರಾಮರರು.

ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಸಾಮಾಜಿಕ ನ್ಯಾಯ ಪಾಲನೆ‌ ಮಾಡಿದ ಮಾದರಿ‌ ಜನನಾಯಕ ಡಿ.ದೇವರಾಜ ಅರಸು ನನ್ನ ರಾಜಕಾರಣಕ್ಕೆ ಸದಾ ಪ್ರೇರಕ ಶಕ್ತಿ ಎಂದು ಎನ್.ಎಸ್.ಯು.ಐ ಉಪಾಧ್ಯಕ್ಷ ರಾಶಿದ್ ಹೇಳಿದರು.ಕಾರ್ಯಕ್ರಮದಲ್ಲಿ  ನಾಪೋಕ್ಲು ಯುವ ಕಾಂಗ್ರೆಸ್ ಅಧ್ಯಕ್ಷ ಪರವಡ ಸಿರಾಜ್ ಸಾದಿಕ್ ಹಾಗೂ ಎನ್.ಎಸ್.ಯು.ಐ ಕಾರ್ಯಕರ್ತರು ಭಾಗವಹಿಸಿದ್ದರು.

No comments

Post a Comment