ಅರೆಭಾಷೆ ಸಂಸ್ಕಂತಿ-ಸಾಹಿತ್ಯ ವಿಶಿಷ್ಟ ಹಾಗೂ ವಿಭಿನ್ನ : ಪಾಣತ್ತೆಲೆ ಟಿ.ಹರೀಶ್

No comments

ಮಡಿಕೇರಿ ಆ.19(web@times of coorg):- ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ವಿಶಿಷ್ಟ ಹಾಗೂ ವಿಭಿನ್ನವಾಗಿದ್ದು, ಆ ದಿಸೆಯಲ್ಲಿ ಅರೆಭಾಷೆ ಬೆಳವಣಿಗೆಗ ಕೈಜೋಡಿಸಬೇಕು ಎಂದು ಮೂರ್ನಾಡು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಪಾಣತ್ತೆಲೆ ಟಿ.ಹರೀಶ್ ಅವರು ಹೇಳಿದರು.

     ಗುರುವಾರ ಮೂರ್ನಾಡು ಅರೆಭಾಷೆ ಗೌಡ ಸಮಾಜ ಸಭಾಂಗಣದಲ್ಲಿ ಕಳೆದ 4 ದಿನಗಳಿಂದ ನಡೆದ ಅರೆಭಾಷೆ ಸಂಸ್ಕøತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

     ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಅರೆಭಾಷೆ ಸಂಸ್ಕøತಿ ಶಿಬಿರವು ಯಶಸ್ವಿಯಾಗಲು ಸಂಪನ್ಮೂಲ ವ್ಯಕ್ತಿಗಳೇ ಮೂಲ ಕಾರಣ. ನಮ್ಮ ಮಕ್ಕಳಿಗೆ ಭಾಷೆಯ ಹಿಂದಿನ ಮಹತ್ವ ಏನು ಎಂಬುದರ ಬಗ್ಗೆ ತಿಳಿಸಲು ಅವರು ನೆರವಾಗಿದ್ದಾರೆ. ಜೊತೆಗೆ ಅರೆಭಾಷಿಗರ ಉಡುಗೆ, ತೊಡುಗೆ, ಆಹಾರ ಪದ್ಧತಿ, ಆಚಾರ ವಿಚಾರದ ಅರಿವನ್ನು ಮೂಡಿಸುವ ಸಾಧನವಾಗಿ ಅರೆಭಾಷೆ ಸಂಸ್ಕøತಿ ಶಿಬಿರ ಯಶಸ್ವಿಯಾಗಿದೆ. ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದಲ್ಲಿ 04 ದಿನಗಳ ವರಗೆ ಶಿಬಿರ ಉತ್ತಮವಾಗಿ ನಡೆದುಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಕಡ್ಲೇರ ತುಳಸಿ ಮೋಹನ್ ಅವರು ಮಾತನಾಡಿ, ಅರೆಭಾಷೆ ಸಂಸ್ಕøತಿಯನ್ನು ಮುಂದೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಬೇಕು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಶ್ರಮ ವಹಿಸಿದಾಗ ಮಾತ್ರ ನಮ್ಮ ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 

    ಆಕಾಶವಾಣಿಯ ಉದ್ಘೋಷಕರಾದ ವಿನೋದ್ ಮೂಡಗದ್ದೆ ಅವರು ಮಾತನಾಡಿ, ಭಾಷೆ ಮತ್ತು ಸಂಸ್ಕøತಿಯಿಂದ ಜನಾಂಗ ಗುರುತಿಸಿಕೊಳ್ಳಲು ಸಾಧ್ಯ. ನಾವು ಇತರರಿಗೂ ನಮ್ಮ ಭಾಷೆಯನ್ನು ಮಾತನಾಡಲು ಅವಕಾಶ ಕಲ್ಪಿಸಿಕೊಡುವುದರಿಂದ ಭಾಷೆಯ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಸಾಹಿತ್ಯದ ಓದು ಮತ್ತು ಬರವಣಿಗೆಯಿಂದ ಜನಾಂಗವನ್ನು ಹುಟ್ಟು ಹಾಕಲು ಸಾಧ್ಯ. ಆದ್ದರಿಂದ ಸಾಹಿತ್ಯ ಅಧ್ಯಯನ ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕವಾಗಿದೆ. ಬಹುಮಾಧ್ಯಮ ಮತ್ತು ಅಂರ್ತಜಾಲ ಬಳಸುವ ಯುವಕ-ಯುವತಿಯರು ಅದರಲ್ಲಿ ಅರೆಭಾಷೆಯನ್ನು ಸೇರಿಸಿ ಅದರ ಬೆಳವಣಿಗೆಗೆ ಶ್ರಮಿಸಿದರೆ, ಸಂಸ್ಕøತಿಗೆ ಜೀವ ತುಂಬುವ ಕೆಲಸ ನಡೆದಂತಾಗುತ್ತದೆ ಎಂದರು.

     ಪ್ರತಿ ಗ್ರಾಮವಾರು ಇದೇ ರಿತಿಯ ಅರೆಭಾಷೆ ಶಿಬಿರಗಳು ನಡೆಯಬೇಕು. ಜೊತೆಯಲ್ಲಿ ಅರೆಭಾಷೆಗೆ ಸಂಬಂಧಿಸಿದಂತೆ ಚಿತ್ರಕಲಾ ಶಿಬಿರಗಳು ನಡೆದರೆ ಉತ್ತಮ ಎಂದು ಅವರು ಹೇಳಿದರು. 

     ಅರೆಭಾಷೆ ಸಂಸ್ಕøತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಮತ್ತ ಶಿಬಿರಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆಗಳು ಜರುಗಿತು. 

     ಕಾರ್ಯಕ್ರಮದಲ್ಲಿ ಬೈತಡ್ಕ ಜಾನಕಿ ಬೆಳ್ಯಪ್ಪ, ಮೂರ್ನಾಡು ಗೌಡ ಸಮಾಜದ ಉಪಾಧ್ಯಕ್ಷರಾದ ತೆಕ್ಕಡೆ ಪ್ರಸನ್ನ, ಚೊಕ್ಕಾಡಿ ಪ್ರೇಮ ರಾಘವಯ್ಯ, ಮೇರ್‍ಕಜೆ ಉಮೇಶ್ ನಾಣಯ್ಯ ಇತರರು ಉಪಸ್ಥಿತರಿದ್ದರು.  ಧನಂಜಯ ಆಗೋಳಿಕಜೆ ನಿರೂಪಿಸಿದರು, ಜಸ್ಮಿ ಸ್ವಾಗತಿಸಿದರು ಮತ್ತು ಕೂಡಕಂಡಿ ದಯಾನಂದ ವಂದಿಸಿದರು.

No comments

Post a Comment