ಅನ್ ಲಾಕ್ ಆಗುವವರೆಗೂ ಕೊಡುಗು ಜಿಲ್ಲೆಗೆ ಪ್ರವಾಸಿಗರು ಬೇಡ :ವಿಜು ಸುಬ್ರಮಣಿ

No comments
ಸಿದ್ದಾಪುರ : ಕೋವಿಡ್  ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಸತ ಪ್ರಯತ್ನ ನಡೆಸುತ್ತಿದ್ದು.ಕೋವಿಡ್  ನಿರ್ಮೂಲನೆಗೆ ಜಿಲ್ಲೆಯಾದ್ಯಂತ ವಾರಿರ್ಸ್ ಗಳು ಹಗಲು ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹತೋಟಿಯಲ್ಲಿದ್ದ ಕೊರೊನಾ  ಹೊರರಾಜ್ಯ, ಜಿಲ್ಲೆಯಿಂದ ಬರುವವರಿಂದಲೇ ಹೆಚ್ಚಾಗ ತೊಡಗಿದೆ.ರಾಜ್ಯದ ಇತರ ಜಿಲ್ಲೆಗಳಲ್ಲಿ ಅನ್ ಲಾಕ್ ಆದ ಕಾರಣ ಪ್ರವಾಸಿಗರು ಕೊಡುಗು ಜಿಲ್ಲೆಗೆ ಆಗಮಿಸುತ್ತಿರುವದು ಸರಿಯಲ್ಲ.ಜಿಲ್ಲೆ ಸಂಪೂರ್ಣ ಕೊರೊನ ಮುಕ್ತ ವಾಗಿ ಅನ್ಲಾಕ್ ಆಗುವವರೆಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಯಾವುದೇ ಕಾರಣಕ್ಕೂ ಪ್ರವಾಸಿಗರು ಜಿಲ್ಲೆಗೆ ಬರದಂತೆ ಎಚ್ಚರಿಕೆ ನೀಡಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ.

No comments

Post a Comment