ತುರ್ತು ಸೇವೆಗೆ ಎಸ್ ವೈಎಸ್ ಆಮಿಲ ಟಾಸ್ಕ್ ಪೋರ್ಸ್ ಟೀಮ್ ರೆಡಿ .
ಸಿದ್ದಾಪುರ :ಪ್ರವಾಹ ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗಲು ಎಸ್ ವೈ ಎಸ್ ಆಮಿಲ ರಕ್ಷಣಾ ತಂಡ ಕಾರ್ಯನಿರ್ವಹಿಸಲಿದೆ ಎಂದು ತಂಡದ ನಾಯಕ ಸಿ .ಎಂ ಅಬ್ದುಲ್ಲ ಕರೀಂ ಪತ್ರಿಕೆಗೆ ತಿಳಿಸಿದ್ದಾರೆ.ಸಿದ್ದಾಪುರ, ನೆಲ್ಯಹುದಿಕೇರಿ, ಬರಡಿ ,ನಲ್ವತ್ತೆಕ್ರೆ, ಬೆಟ್ಟದಕಾಡು, ಗುಹ್ಯ,ಕರಡಿಗೋಡು ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಸದಸ್ಯರು ರಕ್ಷಣಾ ಕಾರ್ಯದಲ್ಲಿ ಸೇವೆ ಸಲ್ಲಿಸಲಿದ್ದಾರೆ.ಈಗಾಗಲೇ ರಕ್ಷಣಾ ಕಾರ್ಯದ ಬಗ್ಗೆ ತರಬೇತಿ ಪಡೆಯಲಾಗಿದ್ದು ಜಿಲ್ಲಾಡಳಿತದ ರಕ್ಷಣಾ ತಂಡದೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ಸಿದ್ದಾಪುರದಲ್ಲಿ ನಡೆದ ತಂಡದ ಆಯ್ಕೆ ಸಭೆಯಲ್ಲಿ ಎಸ್ ವೈಎಸ್ ಸಂಘಟನೆ ಪ್ರಮುಖರಾದ ಉಮ್ಮರ್ ಫೈಜಿ, ಆರೀಫ್ ಫೈಜಿ, ರವೂಫ್ ಹಾಜಿ, ಬೀರಾನ್ ಕುಟ್ಟಿ ಹಾಜಿ, ಇಕ್ಬಾಲ್ ಮೌಲವಿ, ಮುಸ್ತಫಾ ,ಕೆ. ಎಂ ಮೊಹಮ್ಮದ್,ಕರೀಮ್, ಸಂಶುದ್ದೀನ್, ಆಸ್ಕರ್,ಹನೀಫ್ ಸೇರಿದಂತೆ ಮತ್ತಿತರರಿದ್ದರು
No comments
Post a Comment