ಗುಡ್ಲೂರು ಗ್ರಾಮದಲ್ಲಿ ಸಮಾಜ ಸೇವ ಸಂಘಟನೆಯಿಂದ ವಾರಿಯರ್ಸ್ ಗಳಿಗೆ ಸನ್ಮಾನ
ಸಿದ್ದಾಪುರ :ಸರ್ಕಾರಗಳು ನೀಡುವ ನಿರ್ದೇಶನವನ್ನ ಚಾಚೂ ತಪ್ಪದೆ ಪಾಲಿಸುವ ಮೂಲಕ ಪ್ರತಿಯೊಬ್ಬರನ್ನು ಕೋವಿಡ್ ವೈರಸ್ ನಿಂದ ರಕ್ಷಿಸಲು ಹಗಲು ರಾತ್ರಿ ಸೇವೆ ಸಲ್ಲಿಸುವ ಮೂಲಕ ಕೊರೊನಾ ಮುಕ್ತ ಗ್ರಾಮವನ್ನಾಗಿಸಲು ಪಣ ತೊಟ್ಟಿರುವ ಗ್ರಾಮ ರಕ್ಷಕರಿಗೆ ಮಾಲ್ದಾರೆ ಸಮೀಪದ ಗೂಡ್ಲೂರು ಗ್ರಾಮದ ಸಮುದಾಯ ಭವನದಲ್ಲಿ ಗೌರವಿಸಿ ಸನ್ಮಾನಿಸಿದರು. ಸರಳ ಸಮಾರಂಭದಲ್ಲಿ ಮಾಲ್ದಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಮಹಮ್ಮದ್ ಮೈನುದ್ದೀನ್ ಸನ್ಮಾನ ಸ್ವೀಕರಿಸಿ ಮಾತನಾಡಿ. ಜನರ ಸಹಕಾರದಿಂದ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಲಿದ್ದು ಪ್ರತಿಯೊಬ್ಬರು ಮುಂಜಾಗೃತ ಕ್ರಮ ವಹಿಸಿ ಕೋವಿಡ್ ಮುಕ್ತ ಗ್ರಾಮವನ್ನಾಗಿಸಲು ಕೈಜೋಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಮಾತನಾಡಿ ಕೋವಿಡ್ ಲಾಕ್ ಡೌನ್ ಸೀಲ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ ನೀಡಿದ್ದಲ್ಲಿ ಕೋವಿಡ್ ಮುಕ್ತ ಗ್ರಾಮವನ್ನಾಗಿಸಲು ಸಾಧ್ಯವಾಗಲಿದೆ. ನಿಯಮಗಳನ್ನು ಪಾಲಿಸುವ ಮೂಲಕ ಎಲ್ಲರೂ ಸಹಕರಿಸಬೇಕೆಂದರು.ಸಮಾಜಸೇವೆ ಸಂಘಟನೆಯ ಪ್ರಮುಖ ಸಾಜಿ ಕೋವಿಡ್ ಬಗ್ಗೆ ದಿನನಿತ್ಯ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಮೂಲಕ ಎಲ್ಲರನ್ನ ಆರೋಗ್ಯ ಕಾಳಜಿ ದೃಷ್ಟಿಯಲ್ಲಿ ಆರೈಕೆ ಮಾಡುವ ಮೂಲಕ ಕೊರೋನಾ ಮುಕ್ತ ಗ್ರಾಮವನ್ನಾಗಿಸಲು ಹಗಲು ರಾತ್ರಿ ಶ್ರಮಿಸಿದ ಆಶಾ, ಆರೋಗ್ಯ, ಪೋಲಿಸ್ ಇಲಾಖೆ ಸೇವಾ ಕಾರ್ಯವನ್ನು ಗೌರವಪೂರ್ವಕವಾಗಿ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.ಅಂಬೇಡ್ಕರ್ ಸೇನೆಯ ಜಿಲ್ಲಾ ಕಾರ್ಯದರ್ಶಿ ಸತೀಶ್ ಮಾಲ್ದಾರೆ ಮಾತನಾಡಿ ಇಲಾಖೆಗಳ ಸಿಬ್ಬಂದಿಗಳು ತಮ್ಮದೇ ಆದ ಸೇವೆ ಸಲ್ಲಿಸುವ ಮೂಲಕ ಕೋವಿಡ್ ಮುಕ್ತ ಗ್ರಾಮವನ್ನಾಗಿಸಲು ಮುಂದಾಗಿದ್ದಾರೆ. ನಾವೆಲ್ಲರೂ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಬ್ಬರು ನಿಯಮ ಪಾಲನೆ ಮಾಡುವ ಮೂಲಕ ವಾರಿಯರ್ಸ್ ಗಳೊಂದಿಗೆ ಸಹಕರಿಸಬೇಕೆಂದರು. ಮಾಲ್ದಾರೆ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ಸುದರ್ಶನ್, ಆರೋಗ್ಯ ಕಾರ್ಯಕರ್ತರಾದ ವಲ್ಸಾ, ಸುಧಾ, ಅನಿತಾ, ಪ್ರಮೀಳಾ ಆಶಾ ಕಾರ್ಯಕರ್ತರು ಗಳಾದ ಸಂದ್ಯ, ರೋಶಣಿ, ವಾರಿಜಾ, ರಮ್ಯಾ , ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹನೀಫ್, ಇಸ್ಮಾಯಿಲ್ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭ ಮಾಜಿ ಗ್ರಾಮ ಉಪಾಧ್ಯಕ್ಷ ನಿಸಾರ್,ಸಮಾಜ ಸೇವಕರಾದ ಶಾಜಿ,ಅಗಸ್ಟಿನ್, ಅನೀಸ್, ರಜೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
No comments
Post a Comment