.ಇದೀಗ ಮತ್ತೆ ದಾಳಿ ಮಾಡಿದ ಪರಿಣಾಮ ಬಾಗಿಲು ಮೇಲ್ಚಾವಣೆ ಸೇರಿದಂತೆ ಕೇಂದ್ರದಲ್ಲಿದ್ದ ಆಹಾರ ಪದಾರ್ಥಗಳು.ಸೇರಿದಂತೆ ಇತರ ವಸ್ತುಗಳನ್ನ ತುಳಿದು ನಾಶ ಮಾಡಿದೆ.ಕಾಡಾನೆ ಹಾವಳಿ ತಡೆಗಟ್ಟಿ ಇಲ್ಲದಿದ್ದಲ್ಲಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಬೇಕೆಂದು ಹಾಡಿ ನಿವಾಸಿಗಳು ಹಲವು ಬಾರಿ ಮನವಿ ಮಾಡಿದ್ದರೂ ಯಾರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ ಹೆಚ್ಚು ಜನವಸತಿ ಇಲ್ಲದ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿತ್ತು.ಕಾಡುಪ್ರಾಣಿಗಳ ಭಯದಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದರು.ಜನವಸತಿ ಇರುವ ಆಶ್ರಮ ಶಾಲೆ ಬಳಿ ಅಂಗನವಾಡಿ ಕೇಂದ್ರ ತೆರೆಯಲು ಹಾಡಿ ನಿವಾಸಿಗಳು ವರ್ಷಗಳಿಂದಲೂ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಹಾಡಿಯ ನಿವಾಸಿಗಳು ದೂರಿಕೊಂಡಿದ್ದಾರೆ.ಸ್ಥಳಕ್ಕೆ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ .ಎಸ್ ಸಮೀರ್ ಭೇಟಿ ನೀಡಿ ಪರಿಶೀಲಿಸಿದರುನಂತರ ಮಾತನಾಡಿ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಲು ಹಾಡಿಯ ನಿವಾಸಿಗಳು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗುವುದು.ಕಾಡುಪ್ರಾಣಿಗಳ ಭಯದ ನಡುವೆ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು ಅಂಗನವಾಡಿ ಕಾರ್ಯಕರ್ತರು ಕಾಡುಪ್ರಾಣಿಗಳ ಭಯದ ನಡುವೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಿಳೆಯರು ಮಕ್ಕಳಿಗೆ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರದಿಂದ ತೆಗೆದುಕೊಳ್ಳಲು ಸಾಕಷ್ಟು ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾಗಿದೆ ಹಾಡಿ ನಿವಾಸಿಗಳ ಮಕ್ಕಳ ಭವಿಷ್ಯಕ್ಕೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕಾಗಿದೆ ಎಂದರು .ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಹಾಗೂ ಹಾಡಿ ನಿವಾಸಿಗಳು ಹಾಜರಿದ್ದರು
ಕಾಡಾನೆ ದಾಳಿ - ಅಂಗನವಾಡಿ ಕಟ್ಟಡಕ್ಕೆ ಹಾನಿ ಸ್ಥಳಕ್ಕೆ ಮಾಲ್ದಾರೆ ಗ್ರಾ ಪಂ ಅಧ್ಯಕ್ಷ ಸಮೀರ್ ಭೇಟಿ .

No comments
Post a Comment