ಚನ್ನಯ್ಯನಕೋಟೆಯಲ್ಲಿ ಹುತಾತ್ಮ ಯೋಧರಿಗೆ ನಮನ.ಎಪಿಜೆ ಅಬ್ದುಲ್ ಕಲಾಂ ಸ್ಮರಣೆ

No comments
ಸಿದ್ದಾಪುರ : ದೇಶ ಕಾಯುವ ಮೂಲಕ ಯುದ್ಧದಲ್ಲಿ ಮಡಿದ ಯೋಧರಿಗೆ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ   ನಮನ ಸಲ್ಲಿಸುವದರೊಂದಿಗೆ ಎಪಿಜೆ ಅಬ್ದುಲ್ ಕಲಾಂ ಸ್ಮರಣೆಯನ್ನು  ಚೆನ್ನಯ್ಯನ ಕೋಟೆಯಲ್ಲಿ  ಆಚರಿಸಿದರು.ಬಸ್ ನಿಲ್ದಾಣದ ಬಳಿಯಿರುವ ಯೋಧರು ಹಾಗೂ ಅಬ್ದುಲ್ ಕಲಾಂರವರ ಸ್ಮರಣೆಕೆಯ   ಚಿತ್ರ ಅನಾವರಣ ಗೊಳಿಸುವ ಮೂಲಕ ನಮನ ಸಲ್ಲಿಸಿದರು ನಂತರ ಶಾಲಾ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋವಿಡ್ ಸೇವೆಯ ಸಾಧಕರಾದ ಆಶಾ ಕಾರ್ಯಕರ್ತರು,  ಆರೋಗ್ಯ ಇಲಾಖೆ ಸಿಬ್ಬಂದಿಗಳು,ಪಂಚಾಯಿತಿಯ ಟಾಸ್ಕ್ ಫೋರ್ಸ್ ತಂಡ  ಸೇರಿದಂತೆ ಇತರರಿಗೆ ಸನ್ಮಾನಿಸಿ ಗೌರವಿಸಲಾಯಿತು.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಧೈರ್ಯ ತುಂಬುವ ಮೂಲಕ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವುದರೊಂದಿಗೆ  ಪ್ರತಿಯೊಬ್ಬರು ದೇಶಾಭಿಮಾನದಿಂದ  ಗೌರವ ಸೂಚಿಸ ಬೇಕಾಗಿದೆ ಎಂದು ಹೇಳಿದ ಅವರು ಚೆನ್ನಯ್ಯಕೋಟೆಯಲ್ಲಿ ಪ್ರತಿವರ್ಷ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುತ್ತಿರುವದು ಶ್ಲಾಘನೀಯ ಎಂದರು.ವಿರಾಜಪೇಟೆ ತಾಲ್ಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ ಕೋವಿಡ್  ಸಂದರ್ಭದಲ್ಲಿ ಗ್ರಾಮದ ಹಿತ ಕಾಪಾಡುವ ಮೂಲಕ ಹಗಲಿರುಳು ತಮ್ಮದೇ ಆದ ಸೇವೆ ಸಲ್ಲಿಸುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಖ್ಯ ಪಾತ್ರ ವಹಿಸಿರುವ ಆಶಾ, ಆರೋಗ್ಯ ಕಾರ್ಯಕರ್ತರು ಹಾಗೂ ಸಮಾಜ ಸೇವಕರ ಪರಿಶ್ರಮದಿಂದ ಕೋವಿಡ್  ಮುಕ್ತ ಗ್ರಾಮವನ್ನಾಗಿಸಲು ಪಣತೊಟ್ಟಿರುವ ಕಾರ್ಯಕರ್ತರಿಗೆ ಸರ್ವ ಸಹಾಯ ಮಿತ್ರ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ,ಉಪಾಧ್ಯಕ್ಷೆ ಶಿಲ್ಪಾ, ಸದಸ್ಯರುಗಳಾದ ಗಣೇಶ್, ವಿಜು, ಶೀಲಾ,ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್,   ಸರ್ವ ಸಹಾಯ ಮಿತ್ರಮಂಡಳಿ ಅಧ್ಯಕ್ಷ ಅಬ್ದುಲ್ ರಹಿಮಾನ್,ಉಪಾಧ್ಯಕ್ಷ  ಸಲಾಂ, ಕಾರ್ಯದರ್ಶಿ ಶಶಿ ಅಚ್ಚುತನ್, ಸಹ ಕಾರ್ಯದರ್ಶಿ ಇಂದಿರಾ ಮುರುಗೇಶ್ ,ಖಜಾಂಜಿ ಶಶಿ, ಗೌರವ ಅಧ್ಯಕ್ಷ ವಿಜು,  ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್,ಉಪಠಾಣೆಯ ರಮೇಶ್, ಶಿವಕುಮಾರ್ ಸೇರಿದಂತೆ ಶಾಲಾ ಶಿಕ್ಷಕರುಗಳು ಮತ್ತಿತರರು ಹಾಜರಿದ್ದರು .        

No comments

Post a Comment