ಮಾಲ್ದಾರೆಯಲ್ಲಿ ಗಾಳಿ ಮಳೆಗೆ ಮನೆ ಗೋಡೆ ಕುಸಿತ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

No comments
ಸಿದ್ದಾಪುರ : ಮಾಲ್ದಾರೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ಬಡ ಕಾರ್ಮಿಕ ಕುಟುಂಬವೊಂದರ ಮನೆಯ ಗೋಡೆ ಕುಸಿದು ಹಾನಿಯಾಗಿ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ 1ನೇ ವಾರ್ಡಿನಲ್ಲಿ ನಡೆದಿದೆ.ಗ್ರಾಮದ ನಿವಾಸಿ ಅಜೀಜ್  ಎಂಬವರಿಗೆ ಸೇರಿದ ಮನೆ ಗೋಡೆ ಕುಸಿತದಿಂದ ಹಾನಿಯಾಗಿದ್ದು ಸಂಪೂರ್ಣ ಬೀಳುವ ಸಾಧ್ಯತೆಯಿದೆ.ಮನೆಯಲ್ಲೇ ವಾಸವಾಗಿದ್ದ ಅಜೀಜ್ ಕುಟುಂಬದ ನಾಲ್ವರು ಹಿಂಬದಿಯ ಗೋಡೆ ಕುಸಿದ ಸಂದರ್ಭ ಮನೆಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 2ವರ್ಷಗಳ ಹಿಂದೆ ಸುರಿದ ಮಳೆ ಸಂದರ್ಭದಲ್ಲೂ ಶಿಥಿಲಾವ್ಯವಸ್ಥೆಯಲ್ಲಿದೆ. ಮನೆಯನ್ನು ನಿರ್ಮಿಸಿ ಕೊಡಬೇಕೆಂದು  ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಯಾರು ಸ್ಪಂದಿಸಲಿಲ್ಲ  ಇದೀಗ ಮನೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದ್ದು ಕುಟುಂಬ ಸಂಕಷ್ಟದಲ್ಲಿದೆ.ಕೂಡಲೇ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಕುಟುಂಬದ ಸಂಕಷ್ಟಕ್ಕೆ ನೆರವಾಗುವ ಮೂಲಕ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ  ಮಳೆಯ ನಂತರ ಶಾಶ್ವತ ಮನೆ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಮೀರ್, ಉಪಾಧ್ಯಕ್ಷೆ ಪುಷ್ಪಾ , ಸದಸ್ಯರುಗಳಾದ ಹನೀಫಾ, ಇಸ್ಮಾಯಿಲ್, ಕಿರಣ್, ಮೊಹಮ್ಮದಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಗೌಡಜ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಸೇರಿದಂತೆ ಮತ್ತಿತರರು ಭೇಟಿ ನೀಡಿದರು  

No comments

Post a Comment