ಕೊಡಗು : ಪಡಿತರ ಚೀಟಿದಾರರು ಇ-ಕೈವೈಸಿ ನೋಂದಣಿಗೆ ಮನವಿ

No comments


 ಮಡಿಕೇರಿ ಜು.31(Times Of Coorg):-ಕರ್ನಾಟಕ ಸರ್ಕಾರದ ಆದೇಶದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, (ಎಎವೈ) ಆದ್ಯತಾ ಪಡಿತರ ಚೀಟಿ) ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ (ಎಪಿಎಲ್) ಸೇರ್ಪಡೆಗೊಂಡಿರುವ ಸದಸ್ಯರುಗಳು ಕೂಡಲೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೈವೈಸಿಯನ್ನು ಮಾಡಿಸಲು ಕೋರಿದೆ.  

     ಆಗಸ್ಟ್ 1 ರಿಂದ 10 ವರೆಗೆ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಲ್ಲಿ ಇ-ಕೈವೈಸಿ ಮಾಡಿಸಬೇಕು. ಎಎವೈ, ಆದ್ಯತಾ, ಆದ್ಯತೆತರ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೈವೈಸಿ ಮಾಡಿಸುವುದು. ತಪ್ಪಿದ್ದಲ್ಲಿ ಮಾಡಿಸದ ಸದಸ್ಯರುಗಳಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಲಭ್ಯವಾಗುವುದಿಲ್ಲ. 

   ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಕೇವಲ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಮಾಡಿಸಬೇಕು. ಬೆರಳಚ್ಚು ನೀಡಿ  ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ. ಪಡಿತರ ಚೀಟಿದಾರರು ಯಾವುದೇ ಹಣ ನಿಡುವಂತಿಲ್ಲ. ಹಣ ತೆಗೆದುಕೊಂಡಲ್ಲಿ ತಾಲ್ಲೂಕು ಆಹಾರ ಕಚೇರಿ/ ಉಪ ನಿರ್ದೇಶಕರ ಕಚೇರಿಗೆ ದೂರು ನೀಡಬಹುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಅವರು ಕೋರಿದ್ದಾರೆ.

No comments

Post a Comment