ನಾಪೋಕ್ಲು : ಇಲ್ಲಿನ KSWO ಕಛೇರಿಯಲ್ಲಿ ಮಂಗಳವಾರ ರಾತ್ರಿ 7.00 ಗಂಟೆಗೆ ಸ್ವಾದಿಕ್ ನಿಜಾಮಿ ಉಸ್ತಾದರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ SSF ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಲತೀಫಿ ಉಸ್ತಾದರು ಹಾಗೂ SSF ನಾಪೋಕ್ಲು ಸೆಕ್ಟರ್ ಅಧ್ಯಕ್ಷರಾದ ನಝೀರ್ ಸಖಾಫಿ ಉಸ್ತಾದರು ದೀನಿ ನುಡಿಮುತ್ತುಗಕನ್ನು ಬೋದಿಸುವುದರ ಮೂಲಕ ನಾಪೋಕ್ಲು ಶಾಖೆಯ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ತಶ್ರೀಫ್ ಪಿ. ಐ ಆಯ್ಕೆಯಾದರೆ ಕಾರ್ಯದರ್ಶಿ ಯಾಗಿ ಇರ್ಶಾದ್ ಎಂ. ಎಂ ಹಾಗೂ ಕೋಶಾಧಿಕಾರಿಯಾಗಿ ಝುಬೈರ್ ಬಿ. ಎಂ. ಇವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ SSF ನಾಪೋಕ್ಲು ಸೆಕ್ಟರ್ SO ಗಳಾದ ಶಾಹಿದ್ ಇಮಮಿ, ನೌಶಾದ್ ಕೊಳಕೇರಿ, ಬಶೀರ್ ಆಝಾದ್ ನಗರ, ತ್ವಯ್ಯಿಬ್ ಆಝಾದ್ ನಗರ,ನಾಪೋಕ್ಲು ಯುನಿಟ್ ಕಾರ್ಯದರ್ಶಿ ಯೂನುಸ್ ಹಾಗೂ ಯುನಿಟಿನ ಕಾರ್ಯಕರ್ತರು ಭಾಗವಹಿಸಿದ್ದರು. ಯುನಸ್ ಸ್ವಾಗತಿಸಿ ಇರ್ಷಾದ್ ಎಂ. ಎಂ. ವಂದಿಸಿದರು.

No comments
Post a Comment