ನಾಪೋಕ್ಲು (Times Of Coorg) :ಇಲ್ಲಿನ ಮುಹಿಯದ್ದಿನ್ ಜುಮಾ ಮಸ್ಜಿದ್ನ ಅಧೀನದಲ್ಲಿರುವ OSF (ಹಳೆ ವಿದ್ಯಾರ್ಥಿ ಸಂಘ )ಇದರ ವಾರ್ಷಿಕ ಮಹಾಸಭೆಯು ಇಲ್ಲಿನ ಮದರಸ ಹಾಲಿನಲ್ಲಿ ನಡೆಯಿತು. ಇದೆ ಸಂದರ್ಭದಲ್ಲಿ ನಾಪೋಕ್ಲು ಜಮಾಹತಿನ ಅಧ್ಯಕ್ಷರಾದ ಸಲೀಮ್ ಹಾರಿಸ್ ರವರು ಮಾತನಾಡಿ ಈ ಸಂಘದ ಸದಸ್ಯರುಗಳು ನಮ್ಮ ಊರಿನ ಅಲವಾರು ಕಾರುಣ್ಯ ಪ್ರವರ್ತನೆಗಳಿಗೆ ಆಸರೆಯಾಗಿದ್ದು ಅದಲ್ಲದೆ ಮಳೆಗಾಲದ ಸಂದರ್ಭದಲ್ಲಿ ನಾಪೋಕ್ಲು ವ್ಯಾಪ್ತಿಯಲ್ಲಿ ಜಲ ಪ್ರಳಯವಾಗಿ ಮನೆಗಳಿಗೆ ನೀರು ತುಂಬಿ ಹಾನಿಯಾಗುವ ಸಂದರ್ಭದಲ್ಲಿ ತಕ್ಷಣ ಈ ಸಂಘದ ಸದಸ್ಯರುಗಳು ಅಲ್ಲಿಗೆ ತಲುಪಿ ಮನೆಯವರಿಗೆ ಆಸರೆಯಾಗಿರೋದು ಮರೆಯಲಾಗದ ವಿಷಯ ಅದೇ ರೀತಿ ಈಗ ಹೊಸದಾಗಿ ಆಯ್ಕೆ ಯಾಗಿರುವ ಆಡಳಿತ ಮಂಡಳಿ ಇನ್ನೂ ಹಲವಾರು ಹೊಳ್ಳೆಯ ಪ್ರವರ್ತನೆಗಳಿಗೆ ಆಸರೆಯಾಗಲಿ ಎಂದುಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಹಿಂದಿನ ಆಡಳಿತ ಮಂಡಳಿಅಧ್ಯಕ್ಷರಾದ ಅಬ್ದುಲ್ ರಹ್ಮಾನ್ರವರು ಹೊಸ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸಿ ಶುಭಹಾರೈಸಿದರು.
ನೂತನ ಆಡಳಿತಮಂಡಳಿ ಅಧ್ಯಕ್ಷರು ಅಬ್ದುಲ್ ಜಬ್ಬಾರ್ , ಉಪಾಧ್ಯಕ್ಷರು ಆಸ್ಕರ್ ಎಂ. ಐ , ಕಾರ್ಯದರ್ಶಿ ಉಬೈದುಲ್ಲಾ ಎಂ. ಎ, ಸಹಕಾರ್ಯದರ್ಶಿ ಯಾಗಿ ಆಶಿಕ್ ಟಿ. ಹೆಚ್ ಖಜಾಂಜಿಯಾಗಿ ನೌಫಲ್ ಪಿ. ಎಂ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಮಾಹತ್ನ ಖತಿಬರಾದ ಅಶ್ರಫ್ ಅಹ್ಸನಿ, OSF ನ ಮಾಜಿ ಅಧ್ಯಕ್ಷರಾದ ಮಶೂದ್ ಪಿ. ಎಂ. ನಾಪೋಕ್ಲು UAE ಕಮಿಟಿಯ ಪ್ರತಿನಿದಿ ಆಶಿಫ್ ಅಲಿ, ,ಸಾದಿಕ್ ನಿಜಾಮಿ, ಶಾಹಿದ್ ಹಿಮಮಿ, ಖಾದರ್, ನೌಷದ್, ಉಳಿದ ಸದಸ್ಯರುಗಳು ಹಾಜರಿದ್ದರು ರಫೀಕ್ ಲತೀಫಿ ಸ್ವಾಗತಿಸಿ ನೌಫಲ್ ಸಿ. ಎ ವಂದಿಸಿದರು.



No comments
Post a Comment