ನಾಪೋಕ್ಲು : ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಕೋಟೇರಿ ತುತ್ತಂಡ ಬಾರಿಕೆ ಹೋಗುವ ರಸ್ತೆಯು ಹಲವಾರು ವರ್ಷಗಳಿಂದ ಪಾಳುಬಿದ್ದು ಸಂಚಾರಕ್ಕೆ ಅಯೋಗ್ಯವಾಗಿ ಇರುತ್ತದೆ. ಇಲ್ಲಿನ ಜನರು ಹಲವಾರು ಬಾರಿ ಸಂಬಂಧಪಟ್ಟ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ಸಂಬಂಧ ಪಟ್ಟವರ ಬಳಿ ಹೇಳುವಾಗ ಭರವಸೆಯನ್ನು ಮಾತ್ರ ಕೊಡುತ್ತಾರೆ ಎಂಬ ಗಂಭೀರ ಆರೋಪ.
ಅಲ್ಲದೆ ಇಲ್ಲಿನ ಜನರು ರಸ್ತೆಯ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದು ಕಷ್ಟಕಾಲದಲ್ಲಿ ವಾಹನ ಸಂಚಾರಕ್ಕೂ ತುಂಬಾ ತೊಂದರೆಯಾಗಿರುತ್ತದೆ. ಆಟೋಚಾಲಕರು ಸಹ ಈ ಹದಗೆಟ್ಟ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಾರೆ.
ಇದನ್ನ ಮನಗಂಡ ಅಲ್ಲಿನ 14 ಜನರ ಯುವಕರ ತಂಡ ದಿನಾಂಕ 7-12-2020 ಸೋಮವಾರ ದಂದು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಒಂದು ಕಿಲೋಮೀಟರ್ ನಷ್ಟು ಹಾಳಾಗಿದ್ದ ರಸ್ತೆಯನ್ನು ಟ್ರ್ಯಾಕ್ಟರ್ ಮೂಲಕ ಮಣ್ಣು ತಂದು ಗುಂಡಿಯನ್ನು ಮುಚ್ಚಿ ಸಾರ್ವಜನಿಕರಿಗೂ ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೆ ನಮ್ಮ ಗ್ರಾಮದ ರಸ್ತೆಯನ್ನು ಸರಿಪಡಿಸದಿದ್ದಲ್ಲಿ ಇಲ್ಲಿನ ಯುವಕರು ಈ ಬಾರಿಯ ಗ್ರಾಮಪಂಚಾಯತಿಯ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕರಾದ. ನೌಷದ್. ಎಂ. ಎಚ್, ಬಷೀರ್ ಎಂ. ಎಂ,ಮುಜೀಬ್ ಕೆ. ಎ, ಅಯ್ಯುಬ್ ಕೆ.ಎ, ಜುನೈದ್ ಎಂ ಎಂ,ಹಕೀಮ್ ಎಂ. ಎಂ, ಖಾಲಿದ್ ಸಿ. ಎಂ, ಉನೈಸ್ ಕೆ. ಎ, ಜಮಾಲ್ ಎಂ. ಎಚ್, ನೌಷದ್ ಟಿ. ಎಂ, ಶಾಫೀಕ್ ಎಂ. ಎಚ್, ಇಸ್ಮಾಯಿಲ್ ಕೆ. ಎ, ಹನೀಫ್ ಟಿ. ಎ, ಸಿದ್ದೀಕ್ ಟಿ. ಎ, ಹಾಗೂ ಗ್ರಾಮಸ್ಥರು ಹಾಜರಿದ್ದರು.






No comments
Post a Comment